Hashtagintro

ಸೌಂದರ್ಯಾ ಶೆಟ್ಟಿ ಮೇಲೆ ಯಶಸ್​​ಗೆ ನಿಜಕ್ಕೂ ಲವ್ ಆಯ್ತಾ? ಮನದ ಮಾತು ಹೇಳಿಕೊಂಡ ಸ್ಪರ್ಧಿ

ಸೌಂದರ್ಯಾ ಶೆಟ್ಟಿ ಮೇಲೆ ಯಶಸ್​​ಗೆ ನಿಜಕ್ಕೂ ಲವ್ ಆಯ್ತಾ? ಮನದ ಮಾತು ಹೇಳಿಕೊಂಡ ಸ್ಪರ್ಧಿ

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವಿನ ಬಾಂಧವ್ಯ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇತ್ತೀಚಿನ ಸಂಚಿಕೆಯಲ್ಲಿ ನಟ ಯಶಸ್, ಸಹ ಸ್ಪರ್ಧಿ ಸೌಂದರ್ಯಾ ಶೆಟ್ಟಿ ಜೊತೆ ಆಪ್ತವಾಗಿ ಮಾತನಾಡುತ್ತಾ ತಮ್ಮ ಮನದ ಭಾವನೆಗಳನ್ನು ತೆರೆದಿಟ್ಟಿದ್ದಾರೆ. ಸೌಂದರ್ಯಾ ಎದುರು ಯಶಸ್ ಆಡಿದ ಮಾತುಗಳು ಈಗ ಬಿಗ್ ಬಾಸ್ ವೀಕ್ಷಕರಲ್ಲಿ ಕುತೂಹಲ ಮೂಡಿಸಿದ್ದು, ಯಶಸ್‌ಗೆ ಸೌಂದರ್ಯಾ ಮೇಲೆ ನಿಜಕ್ಕೂ ಪ್ರೀತಿ ಚಿಗುರಿದೆಯೇ ಎಂಬ ಚರ್ಚೆ ಶುರುವಾಗಿದೆ.

ಸೌಂದರ್ಯಾ ಜೊತೆ ಮಾತನಾಡುವಾಗ ಯಶಸ್ ಒಂದು ಸುಂದರ ಕಥೆಯನ್ನು ಹೇಳಿದರು. ‘ಮಂಗಳೂರು ಎಂಬ ರಾಜ್ಯ, ಆ ರಾಜ್ಯದಲ್ಲಿ ರಾಜನ ಮಗಳು ಚಂದ್ರನೂ ನಾಚುವಷ್ಟು ಸುಂದರವಾಗಿದ್ದಳು. ನನ್ನ ಅಜ್ಜಿ ಈ ಕಥೆಯನ್ನು ಹೇಳಿದಾಗ ನಾನು ನಂಬುತ್ತಿರಲಿಲ್ಲ. ಆದರೆ ಈಗ ಬಿಗ್ ಬಾಸ್ ಮನೆಗೆ ಬಂದ ಮೇಲೆ ಆ ಕಥೆ ನಿಜ ಎಂದು ಗೊತ್ತಾಯಿತು. ನನ್ನ ಅಜ್ಜಿ ಹೇಳುತ್ತಿದ್ದ ಕಥೆಗೆ ಉತ್ತರವಾಗಿ ನೀವು ಸಿಕ್ಕಿದ್ದೀರಿ, ಥ್ಯಾಂಕ್ಸ್’ ಎಂದು ಹೇಳುವ ಮೂಲಕ ಸೌಂದರ್ಯಾ ಅವರ ಸೌಂದರ್ಯವನ್ನು ಹಾಡಿ ಹೊಗಳಿದರು.

ಕೇವಲ ಕಥೆ ಹೇಳಿದ್ದಲ್ಲದೆ, ಸೌಂದರ್ಯಾ ಅವರಿಗಾಗಿ ಯಶಸ್ ಕವನವೊಂದನ್ನೂ ವಾಚಿಸಿದರು. ‘ಶೆಟ್ಟಿ ಶೆಟ್ಟಿ, ಬಿಗ್ ಬಾಸ್ ಮನೆಯಲ್ಲಿ ನಮ್ಮ ನಿಮ್ಮ ಭೇಟಿ, ನಿಮ್ಮ ನಗುವಿಗಿಲ್ಲ ಸರಿಸಾಟಿ. ನಿಮ್ಮನ್ನು ನೋಡಲು ಯುವರಾಜರು ಬರುತ್ತಾರೆ ಸಪ್ತಸಾಗರದಾಟಿ, ಯಾಕೆಂದರೆ ನೀವು ಕ್ಯೂಟಿ, ಮನಸ್ಸು ಬ್ಯೂಟಿ. ನಿಮ್ಮನ್ನು ಭೂಮಿಗೆ ತಂದ ತಂದೆ-ತಾಯಿಗೆ ನಮನ ಕೋಟಿ ಕೋಟಿ’ ಎಂದು ಹೇಳಿ ಸೌಂದರ್ಯಾ ಅವರ ಮುಖದಲ್ಲಿ ನಗು ಮೂಡಿಸಿದರು.

ಇದಾದ ಬಳಿಕ ಕ್ಯಾಮೆರಾ ಎದುರು ಬಂದು ತಮ್ಮ ಮನದಾಳದ ಮಾತನ್ನು ಯಶಸ್ ಹಂಚಿಕೊಂಡರು. ‘ಬಿಗ್ ಬಾಸ್ ಮನೆಗೆ ಬಂದು ಒಳ್ಳೆಯ ಮನಸ್ಸಿರುವ ಗೆಳತಿ ಸಿಕ್ಕರು. ಮುಂದೇನಾಗುತ್ತದೆ ನೋಡೋಣ. ನನ್ನ ಮನಸ್ಸಿನಲ್ಲಿ ಅವರು ವಿಶೇಷ ಸ್ಥಾನ ಪಡೆದುಕೊಂಡಿದ್ದಾರೆ. ಅವರು ನನಗೆ ಸ್ನೇಹಿತೆಗಿಂತಲೂ ಹೆಚ್ಚು’ ಎಂದು ಯಶಸ್ ತಮ್ಮ ಭಾವನೆಗಳನ್ನು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್: ಸೌಂದರ್ಯಾ ಶೆಟ್ಟಿಗೆ ತೀವ್ರ ಮುಖಭಂಗ; 8 ರೆಡ್ ಫ್ಲ್ಯಾಗ್ ನೀಡಿದ ಸ್ಪರ್ಧಿಗಳು

ಅಂತಿಮವಾಗಿ, ‘ಜೀವನದಲ್ಲಿ ಸದಾ ಖುಷಿಯಾಗಿರಬೇಕು, ನಾವಿಬ್ಬರೂ ಒಂದೇ ರೀತಿಯ ಮನಸ್ಥಿತಿ ಹೊಂದಿರುವವರು. ಧನ್ಯವಾದಗಳು’ ಎಂದು ಯಶಸ್ ಮಾತು ಮುಗಿಸಿದ್ದಾರೆ. ಯಶಸ್ ಅವರ ಈ ನೇರ ನುಡಿಗಳು ಬಿಗ್ ಬಾಸ್ ಮನೆಯಲ್ಲಿ ಹೊಸದೊಂದು ಲವ್ ಸ್ಟೋರಿ ಶುರುವಾಗುವ ಮುನ್ಸೂಚನೆ ನೀಡಿದಂತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language