Hashtagintro

ಹತ್ತು ವರ್ಷಗಳ ಬಳಿಕ ತೆರೆ ಹಂಚಿಕೊಳ್ಳಲಿರುವ ಹಳೆ ಜೋಡಿ ನಯನತಾರಾ-ಸಿಂಭು

ಹತ್ತು ವರ್ಷಗಳ ಬಳಿಕ ತೆರೆ ಹಂಚಿಕೊಳ್ಳಲಿರುವ ಹಳೆ ಜೋಡಿ ನಯನತಾರಾ-ಸಿಂಭು

ನಯನತಾರಾ ಮತ್ತು ಸಿಂಬು ಮಾಜಿ ಪ್ರೇಮಿಗಳು. ದಶಕದ ಹಿಂದೆ ಈ ಇಬ್ಬರೂ ಒಟ್ಟೊಟ್ಟಿಗೆ ಓಡಾಡುತ್ತಿದ್ದರು. ಸಿಂಬು ಹಾಗೂ ನಯನತಾರಾ ವಿವಾಹ ಆಗಲಿದ್ದಾರೆ ಎಂಬ ಸುದ್ದಿಗಳೆಲ್ಲ ಹರಿದಾಡಿತ್ತು. ಇಬ್ಬರ ಕೆಲವು ಖಾಸಗಿ ಚಿತ್ರಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಆದರೆ ಬಳಿಕ ಈ ಜೋಡಿ ಬ್ರೇಕಪ್ ಮಾಡಿಕೊಂಡರು. ಅದಾದ ಬಳಿಕ ನಯನತಾರಾ ಪ್ರಭುದೇವ ಜೊತೆಗೆ ಕೆಲ ಸಮಯ ಪ್ರೀತಿಯಲ್ಲಿದ್ದರು. ಬಳಿಕ ಬ್ರೇಕಪ್ ಮಾಡಿಕೊಂಡು ಅಂತಿಮವಾಗಿ ವಿಘ್ನೇಶ್ ಶಿವನ್ ಅವರನ್ನು ವಿವಾಹವಾದರು. ಆದರೆ ಸಿಂಭು ಸಿಂಗಲ್ ಆಗಿಯೇ ಉಳಿದಿದ್ದಾರೆ. ಇದೀಗ ಈ ಜೋಡಿ ಬರೋಬ್ಬರಿ 10 ವರ್ಷಗಳ ಬಳಿಕ ಒಟ್ಟಿಗೆ ನಟನೆ ಮಾಡುತ್ತಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ ಸಿಲಂಬರಸನ್ ಟಿ.ಆರ್ ಅಲಿಯಾಸ್ ಸಿಂಭು ಮತ್ತು ನಯನತಾರಾ ಹೊಸ ಸಿನಿಮಾನಲ್ಲಿ ಒಟ್ಟಿಗೆ ನಟನೆ ಮಾಡಲಿದ್ದಾರೆ. ಸಿಂಭು-ನಯನತಾರಾ ಅವರ ಈ ಸಿನಿಮಾವನ್ನು ಸೂಪರ್ ಹಿಟ್ ಸಿನಿಮಾ ‘ಡ್ಯೂಡ್​’ನ ನಿರ್ದೇಶಕ ಕೀರ್ತೀಶ್ವರನ್ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಸಿಂಭು ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟನೆ ಮಾಡಲಿದ್ದಾರೆ. ಇದೊಂದು ಆಕ್ಷನ್ ಕಾಮಿಡಿ ಸಿನಿಮಾ ಆಗಿರಲಿದೆಯಂತೆ.

ಇದಕ್ಕೂ ಮೊದಲು, ಎಸ್‌ಟಿಆರ್ (ಸಿಂಭು) ಮತ್ತು ನಯನತಾರಾ ಜೋಡಿಯು ‘ವಲ್ಲವನ್’ ಚಿತ್ರದಲ್ಲಿ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದರು. ಸ್ವತಃ ಸಿಂಭು ಬರೆದು ನಿರ್ದೇಶಿಸಿದ್ದ ಈ ರೋಮ್ಯಾಂಟಿಕ್ ಥ್ರಿಲ್ಲರ್ ಚಿತ್ರವು ಹಿಟ್ ಆಗಿತ್ತು. ಸಿನಿಮಾದ ಹಾಡುಗಳು ಈಗಲೂ ಬಹಳ ಜನಪ್ರಿಯ. ಅದಾದ ಬಳಿಕ 2016ರಲ್ಲಿ ಈ ಜೋಡಿ ‘ಇದು ನಮ್ಮ ಆಳ್’ 2016ರ ಸಿನಿಮಾನಲ್ಲಿ ನಟನೆ ಮಾಡಿದ್ದರು. ಇದೊಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಆಗಿತ್ತು. ಆ ಸಿನಿಮಾದ ಬಳಿಕ ಈ ಜೋಡಿ ಒಟ್ಟಿಗೆ ನಟಿಸಿದ್ದಿಲ್ಲ. ಇದೀಗ ಹತ್ತು ವರ್ಷಗಳ ಬಳಿಕ ಮತ್ತೆ ಈ ಜೋಡಿ ಒಟ್ಟಿಗೆ ನಟನೆ ಮಾಡುತ್ತಿದೆ.

ಇದನ್ನೂ ಓದಿ:ರಜನಿಕಾಂತ್ ಚಿತ್ರಕ್ಕೆ ನಾಯಕಿಯಾದ ನಯನತಾರಾ

ಸಿಂಭು ಕೊನೆಯ ಬಾರಿಗೆ ಕಮಲ್ ಹಾಸನ್ ಅವರೊಂದಿಗೆ ‘ಥಗ್ ಲೈಫ್’ ಚಿತ್ರದಲ್ಲಿ ನಟಿಸಿದ್ದರು. ಮಣಿರತ್ನಂ ನಿರ್ದೇಶನದ ಈ ಚಿತ್ರವು ಹಿರಿಯ ಗ್ಯಾಂಗ್‌ಸ್ಟರ್ ಮತ್ತು ಅವರ ದತ್ತು ಪುತ್ರನ ನಡುವಿನ ಬದಲಾಗುತ್ತಿರುವ ಸಂಬಂಧದ ಕಥೆಯನ್ನು ಹೊಂದಿದೆ. ಈ ಚಿತ್ರದಲ್ಲಿ ತ್ರಿಶಾ ಕೃಷ್ಣನ್, ಐಶ್ವರ್ಯ ಲಕ್ಷ್ಮಿ, ಅಭಿರಾಮಿ, ಅಶೋಕ್ ಸೆಲ್ವನ್, ಜೋಜು ಜಾರ್ಜ್, ನಾಸರ್ ಮತ್ತು ಮಹೇಶ್ ಮಂಜ್ರೇಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಸಿನಿಮಾ ಫ್ಲಾಫ್ ಆಯ್ತು. ಪ್ರಸ್ತುತ ಅವರು ವೆಟ್ರಿಮಾರನ್ ನಿರ್ದೇಶನದ ‘ಅರಸನ್’ ಸಿನಿಮಾನಲ್ಲಿ ನಟನೆ ಮಾಡುತ್ತಿದ್ದಾರೆ. ಇದು ‘ವಡ ಚೆನ್ನೈ’ ಸಿನಿಮಾದ ಭಾಗವೇ ಆಗಿದೆ.

ಮತ್ತೊಂದೆಡೆ, ನಯನತಾರಾ ಅವರು ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡುತ್ತಿರುವ ಹೊಸ ಬಾಲಿವುಡ್ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ನಯನತಾರಾ ನಾಯಕಿ. ಜೊತೆಗೆ, ರಜನಿಕಾಂತ್ ಅಭಿನಯದ ‘ಧರ್ಮನ್’ ಚಿತ್ರದ ಚಿತ್ರೀಕರಣದಲ್ಲೂ ನಯನತಾರಾ ಭಾಗವಹಿಸಿದ್ದಾರೆ. ಅವರ ನಟನೆಯ ‘ಮೂಕುತ್ತಿ ಅಮ್ಮನ್ 2’ ಸಿನಿಮಾ ಕೆಲವೇ ದಿನಗಳಲ್ಲಿ ರಿಲೀಸ್ ಸಹ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language