
ಬೆಂಗಳೂರು, (ಅಕ್ಟೋಬರ್ 29): ಹಾಲಿನ ಜೊತೆಗೆ ಇಂದಿನ ಸಚಿವ ಸಂಪುಟದಲ್ಲಿ ಬಸ್ ಟಿಕೆಟ್ ದರ ಏರಿಕೆ ಬಗ್ಗೆಯೂ ಚರ್ಚೆಯಾಗಿದೆ. ಆದ್ರೆ, ಸಂಪುಟ ಟಿಕೆಟ್ ದರ ಏರಿಕೆಯನ್ನು ಸಾರಿಗೆ ಇಲಾಖೆಗೆ ಬಿಡಲಾಗಿದೆ. ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಾರಿಗೆ ಸಚಿವ ಭೈರತಿ ಸುರೇಶ್, ಈಗಾಗಲೇ ನಾವು ಬಸ್ ಪ್ರಯಾಣದ ದರ ಹೆಚ್ಚಳ ಮಾಡಬೇಕು ಅಂತ ತೀರ್ಮಾನ ಮಾಡಿದ್ವಿ. ಇಂದು ಸಿಎಂ ಅವರು ಎಲ್ಲರ ಜೊತೆ ಚರ್ಚೆ ಮಾಡಿದ್ರು. ದರ ಏರಿಕೆ ಬಗ್ಗೆ ಸಿಎಂ ಅವರು ಸಾರಿಗೆ ಇಲಾಖೆಯವರೆ ಕ್ರಮಕೈಗೊಳ್ಳಿ ಅಂತ ಹೇಳಿದ್ದಾರೆ. ಹೀಗಾಗಿ ನಾನು ಸಾರಿಗೆ ಇಲಾಖೆ ಸೆಕ್ರೆಟರಿ ಸೇರಿದಂತೆ ನಾಲ್ಕು ನಿಗಮದ ಎಂಡಿಗಳ ಜೊತೆ ನವೆಂಬರ್ 3ರಂದು ಸಭೆ ನಡೆಸುತ್ತೇನೆ. ಎಷ್ಟು ದರ ಜಾಸ್ತಿ ಮಾಡಬಹುದು ಅಂತ ಆಮೇಲೆ ನಿರ್ಧಾರ ಮಾಡುತ್ತೇವೆ. ಬಳಿಕ ನವೆಂಬರ್ 4 ರಂದು ನಾನೇ ಸುದ್ದಿಗೋಷ್ಟಿ ಮಾಡಿ ಟಿಕೆಟ್ ದರ ಹೆಚ್ಚಳ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Source: TV9 Kannada National
