Hashtagintro

ಹಾಸ್ಯ-ಹಾರರ್ ಮಿಶ್ರಿತ ‘ಶಂಕರಾಭರಣ’, ನ.20ಕ್ಕೆ ರಿಲೀಸ್

ಹಾಸ್ಯ-ಹಾರರ್ ಮಿಶ್ರಿತ ‘ಶಂಕರಾಭರಣ’, ನ.20ಕ್ಕೆ ರಿಲೀಸ್

ಬಿಗ್​​ಬಾಸ್ ವಿನ್ನರ್ ಶೈನ್ ಶೆಟ್ಟಿ ಮತ್ತು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸುಮಂತ್ ಭಟ್ ಒಟ್ಟಿಗೆ ಕೆಲಸ ಮಾಡಿರುವ ಸಿನಿಮಾ ‘ಶಂಕರಾಭರಣ’ ಶೀಘ್ರವೇ ಬಿಡುಗಡೆ ಆಗಲಿದೆ. ಶೈನ್ ಶೆಟ್ಟಿ ಅವರು ತಮ್ಮ ‘ಶಂಕರಾಭರಣ’ ಸಿನಿಮಾದ ಪ್ರಚಾರವನ್ನು ಉತ್ಸಾಹದಿಂದ ಮಾಡುತ್ತಿದ್ದಾರೆ. ಸಿನಿಮಾದ ಟ್ರೈಲರ್ ಈಗಾಗಲೇ ರಿಲೀಸ್ ಆಗಿದ್ದು, ಚಿತ್ರದ ಗುಣಮಟ್ಟ, ತೆಳು ಹಾಸ್ಯ, ಹಾರರ್ ಅಂಶಗಳು ಟ್ರೈಲರ್​​ನಲ್ಲಿ ಗಮನ ಸೆಳೆಯುತ್ತಿವೆ.

‘ಶಂಕರಾಭರಣ’ ಸಿನಿಮಾನಲ್ಲಿ ಶೈನ್ ಶೆಟ್ಟಿ ನಟಿಸಿರುವ ಜೊತೆಗೆ ಸಿನಿಮಾಕ್ಕೆ ಕತೆ ಬರೆದು ಸಿನಿಮಾ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಶೈನ್ ಗೆ ಜೊತೆಯಾಗಿ ನಿರ್ಮಾಣದಲ್ಲಿ ‘ರಂಗಸ್ಥಳ ಸ್ಟುಡಿಯೋಸ್’ನ ದಿವಾಕರ್ ಶೆಟ್ಟಿ ಸಹ ಕೈಜೋಡಿಸಿದ್ದಾರೆ. ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದ ‘ಮಿಥ್ಯ’ ಸಿನಿಮಾ ಮೂಲಕ ರಾಷ್ಟ್ರಪ್ರಶಸ್ತಿ ಪಡೆದ ನಿರ್ದೇಶಕ ಸುಮಂತ್ ಭಟ್, ‘ಶಂಕರಾಭರಣ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಹಾಗಾಗಿ ಇದು ಮೂರರಲ್ಲಿ ಮತ್ತೊಂದು ಹಾರರ್ ಕಾಮಿಡಿ ಅಲ್ಲ ಎಂಬ ನಿರೀಕ್ಷೆ ಇದೆ.

ನಟ ಶೈನ್ ಶೆಟ್ಟಿ ಮಾತನಾಡಿ ನಿರ್ದೇಶಕ ಸುಮಂತ್ ಭಟ್ ಅವರ ಜೊತೆ ‘ಏಕಂ’ ಕಿರುಚಿತ್ರದಲ್ಲಿ ನಟನೆ ಮಾಡಿದ್ದೆ. ಆಗ ಹುಟ್ಟಿದ ಕಥೆ ‘ಶಂಕರಾಭರಣ’, ಎರಡು ವರ್ಷಗಳ ಕಾಲ ನಿರ್ಮಾಣ ಸಂಸ್ಥೆ ಮಾಡಲು ದೇಶಾದ್ಯಂತ ಓಡಾದಿದ್ದೇನೆ. ಪ್ರಪಂಚ ಓಡಾಡಿದ ಮೇಲೆ‌ ಮನೆಯಲ್ಲಿ ನಿರ್ಮಾಪಕ ದಿವಾಕರ್ ಶೆಟ್ಟಿ ಸಿಕ್ಕರು. ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ನಿರ್ಮಾಪಕರನ್ನು ಹುಡುಕುವುದಕ್ಕೂ ಮುನ್ನ ಗಾಳ ಹಾಕಿ ಕಾಯುತ್ತಿದ್ದ ಮೀನು ಸಂಗೀತ ನಿರ್ದೇಶಕ ಚರಣ್ ರಾಜ್. ಕಥೆ ಕೇಳಿ ಸಂಗೀತ ನೀಡಲು ಒಪ್ಪಿಕೊಂಡರು ಎಂದರು.

ಇದನ್ನೂ ಓದಿ:ಬಸ್ ಓಡಿಸಿ ಸಿನಿಮಾ ಪ್ರಚಾರ ಮಾಡಿದ ಶೈನ್ ಶೆಟ್ಟಿ

‘ಶಂಕರಾಭರಣ’ ಸಿನಿಮಾವು ಹಾರರ್ ಕಾಮಿಡಿ ಸಿನಿಮಾ ಆಗಿದ್ದು. ಸಿನಿಮಾನಲ್ಲಿ ಬಸ್ಸಿನ ಹೆಸರು ‘ಶಂಕರಾಭರಣ’. ಈ ಬಸ್ಸು ಸಹ ಸಿನಿಮಾನಲ್ಲಿ ಒಂದು ಪಾತ್ರವಾಗಿದೆ. ಟ್ರೈಲರ್​​ನಲ್ಲಿ ತೋರಿಸಿರುವಂತೆ ನಾಯಕ ಸಾಲ ಮಾಡಿ ಬಸ್ಸು ಖರೀದಿಸಿ, ಬಸ್ಸೇ ಹೋಗದ ರೂಟ್​ ಒಂದರಲ್ಲಿ ಬಸ್ಸು ಓಡಿಸಲು ಆರಂಭಿಸುತ್ತಾನೆ. ಆಗ ಅವನಿಗೆ, ಬಸ್ಸಿನ ಪ್ರಯಾಣಿಕರಿಗೆ ವಿಚಿತ್ರ ಅನುಭವಗಳಾಗುತ್ತವೆ. ಇದಕ್ಕೆ ಕಾರಣ ಹುಡುಕುವ ಕಾರ್ಯವನ್ನು ನಾಯಕ ಮಾಡುತ್ತಾನೆ. ಅಲ್ಲಿ ಕೆಲ ಕುತೂಹಲಕಾರಿ ವಿಷಯಗಳು ತೆರೆದುಕೊಳ್ಳುತ್ತವೆ. ಸಿನಿಮಾನಲ್ಲಿ ಶೈನ್ ಶೆಟ್ಟಿ, ಸಂಪತ್ ಕುಮಾರ್ ಜೊತೆಗೆ ಕೃತಿ ಶೆಟ್ಟಿ, ಅನೀಲ್ ಕುಮಾರ್ ಚೌಹ್ಹಾಣ್ , ಅರ್ಜುನ್ ಕಜೆ ಇನ್ನೂ ಕೆಲವರು ನಟನೆ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language