Hashtagintro

ಹಿರಿಯರದ್ದೇ ದರ್ಬಾರ್: 100 ವರ್ಷಗಳ ಬಳಿಕ ವಿಶೇಷ ಪ್ಲೇಯಿಂಗ್ 22

ಹಿರಿಯರದ್ದೇ ದರ್ಬಾರ್: 100 ವರ್ಷಗಳ ಬಳಿಕ ವಿಶೇಷ ಪ್ಲೇಯಿಂಗ್ 22

“ವಯಸ್ಸು ಕೇವಲ ಒಂದು ಸಂಖ್ಯೆ ಅಷ್ಟೇ!” — ಕ್ರಿಕೆಟ್ ಜಗತ್ತಿನ ಈ ಹಳೇ ಮಾತಿಗೆ ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಈಗ ಹೊಸ ವ್ಯಾಖ್ಯಾನ ನೀಡಿದೆ! ಯುವ ಆಟಗಾರರ ವೇಗಕ್ಕೆ ಮಣೆ ಹಾಕುವ ಇಂದಿನ ಟಿ20 ಯುಗದಲ್ಲಿ, ಕೆಬರ್ಹಾ ಟೆಸ್ಟ್ ಪಂದ್ಯವು ಬರೋಬ್ಬರಿ 100 ವರ್ಷಗಳ ಹಳೆಯ ಕ್ರಿಕೆಟ್ ಇತಿಹಾಸವನ್ನು ತಿರುಗಿ ನೋಡುವಂತೆ ಮಾಡಿದೆ. ಅದು ಸಹ 19 ಹಿರಿಯ ಆಟಗಾರರೊಂದಿಗೆ!

ಹೌದು, ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಣ 2ನೇ ಟೆಸ್ಟ್ ಪಂದ್ಯದಲ್ಲಿ ಮೈದಾನಕ್ಕಿಳಿದ ಉಭಯ ತಂಡಗಳ ಒಟ್ಟು 22 ಆಟಗಾರರಲ್ಲಿ 19 ಮಂದಿ 30 ವರ್ಷ ದಾಟಿದ ಆಟಗಾರರು. ಒಂದು ಕಡೆ ಆಸ್ಟ್ರೇಲಿಯಾ 30 ವರ್ಷದ ದಾಟಿದ 11 ಆಟಗಾರರನ್ನು ಕಣಕ್ಕಿಳಿಸಿದರೆ, ಇತ್ತ ಸೌತ್ ಆಫ್ರಿಕಾ ತನ್ನ ಪ್ಲೇಯಿಂಗ್ ಇಲೆವೆನ್​​ನಲ್ಲಿ 8 ಮಂದಿ ಹಿರಿಯರಿಗೆ ಸ್ಥಾನ ನೀಡಿದ್ದಾರೆ.

ಹೀಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 30 ವರ್ಷ ದಾಟಿದ 19 ಮಂದಿ ಕಣಕ್ಕಿಳಿದಿರುವುದು ಕಳೆದ 100 ವರ್ಷಗಳಲ್ಲಿ ಇದೇ ಮೊದಲು ಎಂಬುದು ವಿಶೇಷ.

ಇದಕ್ಕೂ ಮುನ್ನ ಅಂದರೆ 1926ರಲ್ಲಿ ನಡೆದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಣ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ 19 ಮಂದಿ 30 ವರ್ಷ ದಾಟಿದ ಆಟಗಾರರು ಕಣಕ್ಕಿಳಿದಿದ್ದರು. ಇದಾದ ಬಳಿಕ ಕಳೆದ 100 ವರ್ಷಗಳಲ್ಲಿ ಯಾವುದೇ ಟೆಸ್ಟ್ ಪಂದ್ಯದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಹಿರಿಯರ ದಂಡು ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇದೀಗ ಒಂದು ಶತಮಾನದ ಬಳಿಕ ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಅಷ್ಟೇ ಸಂಖ್ಯೆಯ ಹಿರಿಯ ಆಟಗಾರರೊಂದಿಗೆ ಮೈದಾನಕ್ಕಿಳಿದು ಹೊಸ ಇತಿಹಾಸ ನಿರ್ಮಿಸುವಲ್ಲಿ ಯಶಸ್ವಿಯಾಗಿವೆ.

ಸೌತ್ ಆಫ್ರಿಕಾ vs ಆಸ್ಟ್ರೇಲಿಯಾ ಪ್ಲೇಯಿಂಗ್ ಇಲೆವೆನ್:

ದೇಶ ಆಟಗಾರ ವಯಸ್ಸು ದೇಶ ಆಟಗಾರ ವಯಸ್ಸು
ಸೌತ್ ಆಫ್ರಿಕಾ ಸೈಮನ್ ಹಾರ್ಮರ್ 37 ಆಸ್ಟ್ರೇಲಿಯಾ ಸ್ಟೀವ್ ಸ್ಮಿತ್ 37
ಟೆಬಾ ಬವುಮಾ (ನಾಯಕ) 36 ಸ್ಕಾಟ್ ಬೋಲ್ಯಾಂಡ್ 37
ಐಡೆನ್ ಮಾರ್ಕ್ರಾಮ್ 32 ಮಿಚೆಲ್ ಸ್ಟಾರ್ಕ್ 36
ಡೇವಿಡ್ ಬೆಡಿಂಗ್ಹ್ಯಾಮ್ 32 ಜೋಶ್ ಹೇಝಲ್​ವುಡ್ 35
ಅನ್ರಿಕ್ ನೋಕಿಯ 32 ಅಲೆಕ್ಸ್ ಕ್ಯಾರಿ 35
ಕಗಿಸೊ ರಬಾಡ 31 ನಿಕ್ ಮ್ಯಾಡಿನ್ಸನ್ 34
ಮಾರ್ಕ್ವೆಸ್ ಅಕರ್ಮನ್ 30 ಪ್ಯಾಟ್ ಕಮಿನ್ಸ್ (ನಾಯಕ) 33
ರಯಾನ್ ರಿಕಲ್ಟನ್ 30 ಟ್ರಾವಿಸ್ ಹೆಡ್ 32
ಮ್ಯಾಥ್ಯೂ ಬ್ರೀಟ್ಝ್​ಕೆ 27 ಮಾರ್ನಸ್ ಲಾಬುಶೇನ್ 32
ವಿಯಾನ್ ಮುಲ್ಡರ್ 28 ಬ್ಯೂ ವೆಬ್‌ಸ್ಟರ್ 32
ಮಾರ್ಕೊ ಯಾನ್ಸೆನ್ 26 ಮ್ಯಾಟ್ ರೆನ್‌ಶಾ 30

ಇದನ್ನೂ ಓದಿ: 3 ಕೋಟಿ ರೂ. ಸಾಕಾಗಲ್ಲ! ಪ್ರಮುಖ ಹುದ್ದೆ ಬೇಡವೆಂದ ಪಾರ್ಥೀವ್ ಪಟೇಲ್

ಒಟ್ಟಾರೆಯಾಗಿ, ಟಿ20 ಕ್ರಿಕೆಟ್‌ನ ಅಬ್ಬರದಲ್ಲಿ ಕೇವಲ ಸಿಕ್ಸರ್-ಬೌಂಡರಿಗಳ ವೇಗ ಮತ್ತು ಯುವ ರಕ್ತದ ತೇಜಸ್ಸನ್ನೇ ಹುಡುಕುವ ಇಂದಿನ ದಿನಗಳಲ್ಲಿ, ಈ ಟೆಸ್ಟ್ ಪಂದ್ಯವು ಕ್ರಿಕೆಟ್ ಪ್ರೇಮಿಗಳಿಗೆ ವಿಭಿನ್ನ ರಸದೌತಣ ನೀಡಿದೆ. ವಯಸ್ಸು ಎಷ್ಟೇ ಆದರೂ ಮೈದಾನದಲ್ಲಿ ಹೆಣಗಾಡುವ ಜಾಣ್ಮೆ, ತಾಳ್ಮೆ ಮತ್ತು ಪಂದ್ಯವನ್ನು ಗೆಲ್ಲಿಸುವ ತಂತ್ರಗಾರಿಕೆಗೆ ಪರ್ಯಾಯವಿಲ್ಲ ಎಂಬುದನ್ನು ಈ 19 ಹಿರಿಯ ಆಟಗಾರರು ಸಾಬೀತುಪಡಿಸಿದ್ದಾರೆ. ಶತಮಾನದ ಬಳಿಕ ಮೂಡಿಬಂದ ಈ ಅಪರೂಪದ ‘ವೆಟರನ್ ಜುಗಲ್‌ಬಂದಿ’ ಟೆಸ್ಟ್ ಕ್ರಿಕೆಟ್‌ನ ಸಾಂಪ್ರದಾಯಿಕ ಸೊಬಗನ್ನು ಮತ್ತೊಮ್ಮೆ ಜಗತ್ತಿಗೆ ಸಾರಿದೆ.

 

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language