Hashtagintro

ಹೊಸ ಸಿನಿಮಾ ಘೋಷಣೆ ಬೆನ್ನಲ್ಲೆ ನಟ ಕಮಲ್ ಹಾಸನ್ ವಿರುದ್ಧ ದೂರು

ಹೊಸ ಸಿನಿಮಾ ಘೋಷಣೆ ಬೆನ್ನಲ್ಲೆ ನಟ ಕಮಲ್ ಹಾಸನ್ ವಿರುದ್ಧ ದೂರು

ಭಾರತೀಯ ಚಿತ್ರರಂಗದ ಶ್ರೇಷ್ಠ ನಟರಲ್ಲಿ ಒಬ್ಬರಾದ ಕಮಲ್ ಹಾಸನ್ ಅವರು ಇತ್ತೀಚೆಗಷ್ಟೆ ತಮ್ಮ ಹೊಸ ಸಿನಿಮಾದ ಘೋಷಣೆ ಮಾಡಿದರು. ಕಮಲ್ ಹಾಸನ್ ಅವರ ಹುಟ್ಟುಹಬ್ಬದಂದು ‘ಸಂದಿಯಾರ್’ ಹೆಸರಿನ ಸಿನಿಮಾ ಘೋಷಣೆ ಮಾಡಿದ್ದರು. ಇದೊಂದು ಆಕ್ಷನ್ ಪ್ರಧಾನ ಸಿನಿಮಾ ಎಂಬುದು ಪೋಸ್ಟರ್​ನಿಂದಲೇ ತಿಳಿಯುತ್ತಿದೆ. ಸಿನಿಮಾದ ನಿರ್ದೇಶಕ, ನಿರ್ಮಾಪಕ ಇನ್ನಿತರೆ ಕೆಲ ಮಾಹಿತಿಗಳ ಘೋಷಣೆ ಮಾಡಲಾಗಿತ್ತು. ಆದರೆ ಸಿನಿಮಾ ಘೋಷಣೆಯಾದ ಬೆನ್ನಲ್ಲೆ ಕಮಲ್ ಹಾಸನ್ ವಿರುದ್ಧ ದೂರು ದಾಖಲಾಗಿದೆ.

ಕಮಲ್ ಹಾಸನ್ ಅವರ ಸಿನಿಮಾದ ಟೈಟಲ್ ‘ಸಂದಿಯಾರ್’ಗೆ ವಿರೋಧ ವ್ಯಕ್ತಪಡಿಸಿ ಪುತಿಯ ತಮಿಳಗಮ್ ಪಕ್ಷವು ಆಕ್ಷೇಪ ವ್ಯಕ್ತಪಡಿಸಿದ್ದು, ಕಮಲ್ ಹಾಸನ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದೆ. ಸಿನಿಮಾದ ಹೆಸರಿನಿಂದ ತಮಿಳುನಾಡಿನಲ್ಲಿ ಜಾತಿ ಸಂಘರ್ಷಗಳು, ಸಾಮಾಜಿಕ ಉದ್ವಿಗ್ನತೆಗಳು ಮತ್ತು ರಾಜಕೀಯ ದೃಷ್ಟಿಕೋನದಿಂದ ಗಲಭೆಗಳು ತಲೆದೂರುವ ಸಂಭವ ಇದ್ದು, ಅದನ್ನು ತಡೆಯಲು ಈ ಸಿನಿಮಾದ ಟೈಟಲ್ ಬದಲಾಯಿಸಬೇಕು ಮತ್ತು ಕಮಲ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದಿದೆ.

ಡಿಎಂಕೆಯ ಬೆಂಬಲದೊಂದಿಗೆ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾದ ಕಮಲ್ ಹಾಸನ್, ರಾಜಕೀಯ ದುರುದ್ದೇಶದಿಂದಲೇ ಈ ಸಿನಿಮಾದ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಟೀಕೆ ಮಾಡಲಾಗಿದೆ. ಈ ಸಂಬಂಧ ನಟ ಕಮಲ್ ಹಾಸನ್ ಹಾಗೂ ಸಿನಿಮಾದ ನಿರ್ದೇಶಕ ಅರುಣ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ದೂರು ನೀಡಲಾಗಿದೆ. ಈ ಚಿತ್ರದ ಹೆಸರಿನಿಂದ ದಕ್ಷಿಣ ತಮಿಳುನಾಡಿನಲ್ಲಿ ಮತ್ತೊಮ್ಮೆ ಸಾಮಾಜಿಕ ಉದ್ವಿಗ್ನತೆ ಉಂಟಾಗುವ ಅಪಾಯವಿದೆ ಎಂದು ‘ಪುತಿಯ ತಮಿಳಗಂ’ ಪಕ್ಷ ಆತಂಕ ವ್ಯಕ್ತಪಡಿಸಿದೆ. ಸೇಲಂ ಜಿಲ್ಲಾ ಎಸ್‌ಪಿ ಕಚೇರಿಯಲ್ಲಿ ಪಿಟಿಕೆ ಪಕ್ಷದ ನಾಯಕರು ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ:ಆ್ಯಕ್ಷನ್-ಕಟ್ ಹೇಳಿ ಗೆದ್ದ ಕನ್ನಡ ಚಿತ್ರರಂಗದ ಸ್ಟಾರ್ ಹೀರೋಗಳಿವರು

ಹಿಂದೆ 2004ರಲ್ಲಿಯೂ ‘ಸಂದಿಯಾರ್’ ಹೆಸರಿನಲ್ಲಿ ಸಿನಿಮಾ ನಿರ್ಮಿಸಲು ಕಮಲ್ ಹಾಸನ್ ಯತ್ನಿಸಿದ್ದರು. ಆ ಸಿನಿಮಾದ ಘೋಷಣೆ ಮಾಡಿದ ಬೆನ್ನಲ್ಲೆ ಕಮಲ್ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. ಆಗ ಅಂದಿನ ಮುಖ್ಯಮಂತ್ರಿ ಜಯಲಲಿತಾ ಅವರು ಕಮಲ್ ಹಾಸನ್ ಅವರನ್ನು ಕರೆದು ಮಾತನಾಡಿ, ಸಾಮಾಜಿಕ ಉದ್ವಿಗ್ನತೆಗೆ ಕಾರಣವಾಗುವ ಸಿನಿಮಾಗಳನ್ನು ಮಾಡಬೇಡಿ ಎಂದು ಸೂಚಿಸಿದ ಹಿನ್ನೆಲೆಯಲ್ಲಿ ಆ ಸಿನಿಮಾದ ಹೆಸರನ್ನು ಬದಲಾಯಿಸಲಾಗಿತ್ತು. ಸಿನಿಮಾಕ್ಕೆ ‘ವಿರುಮಾಂಡಿ’ ಎಂದು ಹೆಸರಿಡಲಾಗಿತ್ತು.

‘ಸಂದಿಯಾರ್’ ಎಂಬುದು ಜಾತಿ ಸೂಚಕ ಪದವಾಗಿದ್ದು, ಇದೇ ಕಾರಣಕ್ಕೆ ಕಮಲ್ ಹಾಸನ್ ಹಾಗೂ ಸಿನಿಮಾದ ನಿರ್ದೇಶಕನ ವಿರುದ್ಧ ದೂರು ದಾಖಲಿಸಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language