Hashtagintro

10ನೇ ವಿಕೆಟ್​​ಗೆ ಹೊಸ ವಿಶ್ವ ದಾಖಲೆ: ಪಾಕ್ ಪಡೆಗೆ ರಣರೋಚಕ ಜಯ!

10ನೇ ವಿಕೆಟ್​​ಗೆ ಹೊಸ ವಿಶ್ವ ದಾಖಲೆ: ಪಾಕ್ ಪಡೆಗೆ ರಣರೋಚಕ ಜಯ!

ಲಾಹೋರ್​​ನ ಗದ್ದಾಫಿ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ತ್ರಿಕೋನ ಸರಣಿಯ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ರಣರೋಚಕ ಜಯ ಸಾಧಿಸಿದೆ. ಅದು ಕೂಡ 10ನೇ ವಿಕೆಟ್​​ಗೆ ವಿಶ್ವ ದಾಖಲೆಯ ಜೊತೆಯಾಟದೊಂದಿಗೆ. ಈ ಜೊತೆಯಾಟದ ಮೂಲಕ ಪಾಕ್ ಪಡೆ 1 ವಿಕೆಟ್​​ನಿಂದ ಇಂಗ್ಲೆಂಡ್ ತಂಡವನ್ನು ಮಣಿಸಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡದ ನಾಯಕ ಶಾಹೀನ್ ಅಫ್ರಿದಿ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಪರ ಆರಂಭಿಕ ದಾಂಡಿಗ ಬೆನ್ ಡಕೆಟ್ 111 ಎಸೆತಗಳಲ್ಲಿ 105 ರನ್ ಬಾರಿಸಿದರು.

ಆದರೆ ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಇಂಗ್ಲೆಂಡ್ ತಂಡವು 46.4 ಓವರ್​​ಗಳಲ್ಲಿ 241 ರನ್​ ಗಳಿಸಿ ಆಲೌಟ್ ಆಯಿತು.

ಶಾದಾಬ್ ಖಾನ್ ದಿಟ್ಟ ಹೋರಾಟ:

242 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ್ ತಂಡವು ಕೇವಲ 154 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಕ್ರೀಸ್ ಕಚ್ಚಿ ನಿಂತ ಶಾದಾಬ್ ಖಾನ್ ಏಕಾಂಗಿ ಹೋರಾಟ ನಡೆಸಿದರು. ಕೊನೆಯ ವಿಕೆಟ್‌ಗೆ ಹಾರಿಸ್ ರೌಫ್ ಜೊತೆಗೂಡಿದ ಅವರು ಅಮೋಘ ಇನಿಂಗ್ಸ್ ಕಟ್ಟಿದರು.

ಇದರ ನಡುವೆ ಸ್ಪೋಟಕ ಬ್ಯಾಟಿಂಗ್ ನಡೆಸಿದ ಶಾದಾಬ್ ಖಾನ್, 96 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್ ಹಾಗೂ 13 ಫೋರ್‌ಗಳ ನೆರವಿನಿಂದ ಅಜೇಯ 113 ರನ್ ಬಾರಿಸಿದರು. ಅಲ್ಲದೆ, ಹಾರಿಸ್ ರೌಫ್ (7*) ಅವರೊಂದಿಗೆ 10ನೇ ವಿಕೆಟ್‌ಗೆ ದಾಖಲೆಯ 89 ರನ್‌ಗಳ ಜೊತೆಯಾಟವಾಡಿದರು. ಈ ಮೂಲಕ ಪಾಕಿಸ್ತಾನ್ ತಂಡವು 47.1 ಓವರ್‌ಗಳಲ್ಲಿ 243 ರನ್ ಗಳಿಸಿ, 1 ವಿಕೆಟ್‌ನ ರೋಚಕ ಜಯ ಸಾಧಿಸಿತು.

51 ವರ್ಷಗಳ ಹಳೆಯ ದಾಖಲೆ ಧೂಳೀಪಟ!

ಈ ಪಂದ್ಯದಲ್ಲಿ ಶಾದಾಬ್ ಖಾನ್ ಹಾಗೂ ಹಾರಿಸ್ ರೌಫ್ ಜೊತೆಗೂಡಿ 10ನೇ ವಿಕೆಟ್​​ಗೆ ಪೇರಿಸಿದ 89 ರನ್​​ಗಳು, ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ ಯಶಸ್ವಿ ರನ್ ಬೆನ್ನಟ್ಟುವಿಕೆಯಲ್ಲಿ ಕೊನೆಯ ವಿಕೆಟ್​​ಗೆ ದಾಖಲಾದ ಸರ್ವಶ್ರೇಷ್ಠ ದಾಖಲೆಯಾಗಿದೆ.

ಈ ಮೂಲಕ ಶಾದಾಬ್-ರೌಫ್ ಜೋಡಿ 1975ರ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ವೆಸ್ಟ್ ಇಂಡೀಸ್‌ನ ಡೆರಿಕ್ ಮುರ್ರೆ ಮತ್ತು ಆಂಡಿ ರಾಬರ್ಟ್ಸ್ ಜೋಡಿ 10ನೇ ವಿಕೆಟ್‌ಗೆ ಕಲೆಹಾಕಿದ್ದ 64 ರನ್‌ಗಳ ದಾಖಲೆಯನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಇದನ್ನೂ ಓದಿ: CSK ಗೆ ಕೈಕೊಟ್ಟ ಕೀರನ್ ಪೊಲಾರ್ಡ್​..!

ಯಶಸ್ವಿ ರನ್ ಚೇಸಿಂಗ್‌ನಲ್ಲಿ ಗರಿಷ್ಠ 10ನೇ ವಿಕೆಟ್ ಜೊತೆಯಾಟಗಳು:

  1.  ಶಾದಾಬ್ ಖಾನ್ ಮತ್ತು ಹಾರಿಸ್ ರೌಫ್ (ಪಾಕಿಸ್ತಾನ): 89* ರನ್ (ವಿರುದ್ಧ ಇಂಗ್ಲೆಂಡ್, 2026)
  2.  ಡೆರಿಕ್ ಮುರ್ರೆ ಮತ್ತು ಆಂಡಿ ರಾಬರ್ಟ್ಸ್ (ವೆಸ್ಟ್ ಇಂಡೀಸ್): 64* ರನ್ (ವಿರುದ್ಧ ಪಾಕಿಸ್ತಾನf, 1975)
  3.  ಜೇಮ್ಸ್ ಫಾಲ್ಕನರ್ ಮತ್ತು ಕ್ಲಿಂಟ್ ಮೆಕೇ (ಆಸ್ಟ್ರೇಲಿಯಾ): 57* ರನ್ (ವಿರುದ್ಧ ಇಂಗ್ಲೆಂಡ್, 2014)

 

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language