Hashtagintro

111 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ‘ಪ್ರೇಮದ ಊರಲಿ’ ಸಿನಿಮಾ; ಮತ್ತಷ್ಟು ದಾಖಲೆ

111 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ‘ಪ್ರೇಮದ ಊರಲಿ’ ಸಿನಿಮಾ; ಮತ್ತಷ್ಟು ದಾಖಲೆ

ಕನ್ನಡ ಚಿತರಂಗದಲ್ಲಿ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೃಷ್ಟಿಸಿರುವ ಅಬ್ಬರ ಮತ್ತು ಹವಾ ಮುಂದುವರಿದಿದೆ. ಬಿಡುಗಡೆಯಾಗಿ ನಾಲ್ಕು ವಾರಗಳನ್ನು ಪೂರೈಸಿದ್ದರೂ ಸಹ ಚಿತ್ರದ ಗಳಿಕೆ ಮಾತ್ರ ಕುಗ್ಗಿಲ್ಲ. ಸಿನಿಮಾ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದ್ದು, ಬಾಕ್ಸಾಫೀಸ್‌ನಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ.

ಮೊದಲ ವಾರದಲ್ಲಿ ನಿಧಾನವಾಗಿ ಶುರುವಾದ ಈ ಚಿತ್ರದ ಕಲೆಕ್ಷನ್, ನಂತರದ ದಿನಗಳಲ್ಲಿ ಗರಿಗೆದರಿತು. ಮೊದಲ ವಾರದಲ್ಲಿ ಒಟ್ಟು 5.32 ಕೋಟಿ ಗಳಿಕೆ ಕಾಣುವ ಮೂಲಕ ಸಿನಿಮಾವು ತನ್ನ ಪಾರುಪತ್ಯ ಆರಂಭಿಸಿತು. ನಂತರ ಪ್ರೇಕ್ಷಕರ ಮೆಚ್ಚುಗೆ ಹೆಚ್ಚಾದಂತೆ ಚಿತ್ರಮಂದಿರಗಳ ಸಂಖ್ಯೆಯೂ ಏರಿಕೆಯಾಗುತ್ತಾ ಹೋಯಿತು.

ಎರಡನೇ ವಾರಕ್ಕೆ ಕಾಲಿಡುತ್ತಿದ್ದಂತೆ ಚಿತ್ರದ ಆರ್ಭಟ ಜೋರಾಯಿತು. ಪ್ರೇಕ್ಷಕರಿಂದ ಸಿಕ್ಕ ಮೌತ್ ಪಬ್ಲಿಸಿಟಿಯಿಂದಾಗಿ ಎರಡನೇ ವಾರದಲ್ಲಿ ಭರ್ಜರಿ 23.65 ಕೋಟಿ ಕಲೆಕ್ಷನ್ ಮಾಡುವ ಮೂಲಕ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ತನ್ನ ಪ್ರಾಬಲ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿತು.

ಮೂರನೇ ವಾರದಲ್ಲಂತೂ ಸಿನಿಮಾದ ಗಳಿಕೆ ಎಲ್ಲರ ನಿರೀಕ್ಷೆಯನ್ನು ಮೀರಿಸಿತು. ವೀಕೆಂಡ್ ಹಾಗೂ ವಾರದ ದಿನಗಳೆನ್ನದೆ ಮುಗಿಬಿದ್ದ ಸಿನಿಪ್ರಿಯರಿಂದ ಮೂರನೇ ವಾರದಲ್ಲಿ ಬರೋಬ್ಬರಿ 36.40 ಕೋಟಿ ಕಲೆಕ್ಷನ್ ಹರಿದುಬಂತು. ಈ ಮೂಲಕ ಇಂಡಸ್ಟ್ರಿಯಲ್ಲಿ ಹೊಸ ಸಂಚಲನವನ್ನೇ ಉಂಟುಮಾ2ಡಿತು.

ಇದನ್ನೂ ಓದಿ: ‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಫುಲ್ ಖುಷ್

ಪ್ರಸ್ತುತ ನಾಲ್ಕನೇ ವಾರದಲ್ಲೂ ಈ ಚಿತ್ರದ ಸಕ್ಸಸ್ ರಥ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಕೇವಲ ನಾಲ್ಕನೇ ವಾರದಲ್ಲೇ ಸುಮಾರು 27.00 ಕೋಟಿ ಗಳಿಕೆ ಕಂಡಿರುವ ಈ ಸಿನಿಮಾ, ಒಟ್ಟು ಭಾರತೀಯ ನೆಟ್ ಕಲೆಕ್ಷನ್ 92.37 ಕೋಟಿ ತಲುಪಿದೆ. ಹಾಗೆಯೇ ಒಟ್ಟು ಜಾಗತಿಕ ಗ್ರಾಸ್ ಕಲೆಕ್ಷನ್ 111.07 ಕೋಟಿ ಗಡಿ ದಾಟಿರುವ ‘ಪ್ರೇಮದ ಊರಲಿ’ ಸಾರ್ವಕಾಲಿಕ ದಾಖಲೆಯತ್ತ ದಾಪುಗಾಲಿಡುತ್ತಿದೆ. ಈ ಸಿನಿಮಾ ನೋಡಿದ ಪ್ರೇಕ್ಷಕರು ಹಾಡಿ ಹೊಗಳುತ್ತಿದ್ದಾರೆ. ಈ ಚಿತ್ರವನ್ನು ಮನೋಜ್ ಕುಮಾರ್ ನಿರ್ದೇಶನ ಮಾಡಿದರೆ, ಶ್ರೀರಾಮ್, ರಮಿಕಾ ಶಿವು, ತಪಸ್ವಿನಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language