Hashtagintro

420 ಕೋಟಿ ರೂ. ಮೌಲ್ಯದ ವಜ್ರದ ಒಳ ಉಡುಪು ಧರಿಸಿ ರ‍್ಯಾಂಪ್ ಮೇಲೆ ಮಿಂಚಿದ ಮಾಡೆಲ್!

420 ಕೋಟಿ ರೂ. ಮೌಲ್ಯದ ವಜ್ರದ ಒಳ ಉಡುಪು ಧರಿಸಿ ರ‍್ಯಾಂಪ್ ಮೇಲೆ ಮಿಂಚಿದ ಮಾಡೆಲ್!

ವಿಶ್ವದ ಅತ್ಯಂತ ಪ್ರಸಿದ್ಧ ಫ್ಯಾಷನ್ ಕಾರ್ಯಕ್ರಮಗಳಲ್ಲಿ ಒಂದಾದ ವಿಕ್ಟೋರಿಯಾಸ್ ಸೀಕ್ರೆಟ್ ಫ್ಯಾಷನ್ ಶೋ (Victoria’s Secret Fashion Show) ಇತ್ತೀಚಿಗಷ್ಟೇ ಅದ್ಧೂರಿಯಾಗಿ ನಡೆದಿದೆ. ಈ ಫ್ಯಾಷನ್ ಈವೆಂಟ್​​ನಲ್ಲಿ ವಿಶ್ವದ ಖ್ಯಾತ ಸೂಪರ್‌ ಮಾಡೆಲ್​​ಗಳು ​​​​ಭಾಗಿಯಾಗಿದ್ದು,  ಖ್ಯಾತ ರೂಪದರ್ಶಿ ಕೈಲೀ ಜೆನ್ನರ್ ಎಲ್ಲರ ಗಮನಸೆಳೆದಿದ್ದಾರೆ. ಅತ್ಯಂತ ದುಬಾರಿ ಅಂದರೆ ಸಂಪೂರ್ಣವಾಗಿ ವಜ್ರದಿಂದ ವಿನ್ಯಾಸಗೊಳಿಸಿದ ಒಳ ಉಡುಪು ಧರಿಸಿ ರ್ಯಾಂಪ್​​ ವ್ಯಾಕ್​​ ಮಾಡುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ.

4,410 ವಜ್ರಗಳಿಂದ ಕಂಗೊಳಿಸಿದ ಫ್ಯಾಂಟಸಿ ಬ್ರಾ:

ಅಮೆರಿಕದ ಖ್ಯಾತ ಉದ್ಯಮಿ ಹಾಗೂ ಸೌಂದರ್ಯ ಉತ್ಪನ್ನಗಳ ಬ್ರ್ಯಾಂಡ್ ‘ಕೈಲಿ ಕಾಸ್ಮೆಟಿಕ್ಸ್‌’ ಸಂಸ್ಥಾಪಕಿ ಕೈಲಿ ಜೆನ್ನರ್ (Kylie Jenner) ಸರಿಸುಮಾರು 4,410 ವಜ್ರಗಳಿಂದ ತಯಾರಿಸಿದ ಅಂದರೆ ಬರೋಬ್ಬರಿ 420 ಕೋಟಿ ರೂಪಾಯಿ ಮೌಲ್ಯದ ಒಳಉಡುಪಿನಲ್ಲಿ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದಾರೆ. ಈ ದುಬಾರಿ ಉಡುಪನ್ನು ಪ್ರಸಿದ್ಧ ಐಷಾರಾಮಿ ಆಭರಣ ಸಂಸ್ಥೆ ‘ಜಾವಕೋಬ್ ಆ್ಯಂಡ್​ ಕಂಪನಿ’ (Jacob & Co.) ಸಹಯೋಗದಲ್ಲಿ ರೂಪಿಸಲಾಗಿದೆ. 4,410 ನೈಸರ್ಗಿಕ ವಜ್ರಗಳ ಜೊತೆಗೆ ಮಧ್ಯಭಾಗದಲ್ಲಿ ಅಳವಡಿಸಿರುವ 75.54 ಕ್ಯಾರೆಟ್ ತೂಕದ ಹಳದಿ ವಜ್ರವು ಈ ವಿನ್ಯಾಸದ ಪ್ರಮುಖ ಆಕರ್ಷಣೆಯಾಗಿದೆ. ಈ ಉಡುಪು ವಿನ್ಯಾಸಗೊಳಿಸಲು 15 ಕುಶಲಕರ್ಮಿಗಳು 1,000 ಗಂಟೆಗಳ ಪರಿಶ್ರಮಪಟ್ಟಿದ್ದಾರೆ.

 

View this post on Instagram

 

A post shared by JACOB & CO. (@jacobandco)

ಏನಿದು ವಿಕ್ಟೋರಿಯಾಸ್ ಸೀಕ್ರೆಟ್ ಫ್ಯಾಶನ್​ ಶೋ ?

ವಿಕ್ಟೋರಿಯಾಸ್ ಸೀಕ್ರೆಟ್ ಫ್ಯಾಷನ್ ಶೋ (Victoria’s Secret Fashion Show) ವಿಶ್ವದ ಅತ್ಯಂತ ಪ್ರಸಿದ್ಧ ಫ್ಯಾಷನ್ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಅಮೆರಿಕದ ಐಷಾರಾಮಿ ಒಳ ಉಡುಪುಗಳ ಬ್ರ್ಯಾಂಡ್ ವಿಕ್ಟೋರಿಯಾಸ್ ಸೀಕ್ರೆಟ್ ಆಯೋಜಿಸುವ ಈ ಶೋನಲ್ಲಿ ವಿಶ್ವದ ಖ್ಯಾತ ಸೂಪರ್‌ಮೋಡೆಲ್‌ಗಳು ಆಕರ್ಷಕ ಉಡುಪುಗಳು, ವಿನೂತನ ವಿನ್ಯಾಸಗಳು ಮತ್ತು ಭವ್ಯವಾದ ರೆಕ್ಕೆಗಳೊಂದಿಗೆ ರನ್‌ವೇ ಮೇಲೆ ಹೆಜ್ಜೆ ಹಾಕುತ್ತಾರೆ. 1995ರಲ್ಲಿ ಆರಂಭವಾದ ಈ ಫ್ಯಾಷನ್ ಶೋ ಸಂಗೀತ, ಮನರಂಜನೆ ಮತ್ತು ಫ್ಯಾಷನ್‌ನ ಅದ್ಧೂರಿ ಸಂಯೋಜನೆಯಾಗಿ ಜಾಗತಿಕ ಮನ್ನಣೆ ಗಳಿಸಿದೆ. ಹೈಡಿ ಕ್ಲುಮ್, ಟೈರಾ ಬ್ಯಾಂಕ್ಸ್, ಗಿಸೆಲ್ ಬಂಡ್‌ಚೆನ್ ಮತ್ತು ಅಡ್ರಿಯಾನಾ ಲಿಮಾ ಸೇರಿದಂತೆ ಅನೇಕ ಪ್ರಸಿದ್ಧ ಮಾಡೆಲ್‌ಗಳು ಈ ವೇದಿಕೆಯಲ್ಲಿ ಮಿಂಚಿದ್ದಾರೆ. ವಜ್ರಗಳು ಹಾಗೂ ಅಮೂಲ್ಯ ರತ್ನಗಳಿಂದ ಅಲಂಕರಿಸಲಾದ ‘ಫ್ಯಾಂಟಸಿ ಬ್ರಾ’ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಕೆಲವು ವರ್ಷಗಳ ವಿರಾಮದ ಬಳಿಕ 2024ರಲ್ಲಿ ಮತ್ತೆ ಮರಳಿದ ಈ ಶೋ, ಫ್ಯಾಷನ್ ಜಗತ್ತಿನಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada Lifestyle

Read full article on TV9 Kannada Lifestyle

Leave a Comment

Your email address will not be published. Required fields are marked *

समाचार की भाषा चुनें / Choose News Language