Hashtagintro

7 ಜನರ ಹತ್ಯೆ ಕೇಸ್​​: ತಂದೆ-ಮಗಳಿಗೆ ಖಾಕಿ ಗ್ರಿಲ್​​; ಕೃತ್ಯದ ಪ್ರತಿಯೊಂದು ದೃಶ್ಯವೂ ರಿಕ್ರಿಯೇಟ್

7 ಜನರ ಹತ್ಯೆ ಕೇಸ್​​: ತಂದೆ-ಮಗಳಿಗೆ ಖಾಕಿ ಗ್ರಿಲ್​​; ಕೃತ್ಯದ ಪ್ರತಿಯೊಂದು ದೃಶ್ಯವೂ ರಿಕ್ರಿಯೇಟ್

ಬೆಂಗಳೂರು, ನವೆಂಬರ್​​ 18: ದೇಶವನ್ನೇ ಬೆಚ್ಚಿಬೀಳಿಸಿದ್ದ ಬೆಂಗಳೂರಿನಲ್ಲಿ ನಡೆದ ಒಂದೇ ಕುಟುಂಬದ 7 ಜನರ ಹತ್ಯೆ ಪ್ರಕರಣ ಸಂಬಂಧ ತನಿಖೆ ಮತ್ತಷ್ಟು ಚುರುಕು ಪಡೆದುಕೊಂಡಿದೆ. ಕೊಲೆ ನಡೆದ ಕ್ಷಣದಿಂದ ಹಿಡಿದು ಶವಗಳನ್ನ ಚೀಲದಲ್ಲಿ ತುಂಬಿ ಕಾರಿನಲ್ಲಿ ಸಾಗಿಸಿದವರೆಗಿನ ಪ್ರತಿಯೊಂದು ದೃಶ್ಯವನ್ನೂ ಆರೋಪಿ ಇಂದುಶೇಖರ್‌ನಿಂದಲೇ ರಿಕ್ರಿಯೇಟ್ ಮಾಡಿಸಲಾಗಿದ್ದು, ಕಸ್ಟಡಿಯಲ್ಲಿರೋ ತಂದೆ ಮತ್ತು ಮಗಳನ್ನ ತೀವ್ರ ವಿಚಾರಣೆ ನಡೆಸಲಾಗ್ತಿದೆ. ಈ ವೇಳೆ ಸರಣಿ ಹತ್ಯೆಯ ಒಂದೊಂದೇ ರೋಚಕ ಸ್ಟೋರಿ ಪೊಲೀಸರಿಗೆ ಲಭ್ಯವಾಗಿದೆ ಎನ್ನಲಾಗಿದೆ.

ಸಂಪೂರ್ಣ ಕ್ರೈಂ ಸೀನ್ ಮರುಸೃಷ್ಟಿ

ಆರೋಪಿ ಇಂದುಶೇಖರ್​​ ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು, ಆತನಿಂದಲೇ ಸಂಪೂರ್ಣ ಕ್ರೈಂ ಸೀನ್ ರಿಕ್ರಿಯೇಟ್ ಮಾಡಿಸಿದ್ದಾರೆ. ಮೃತರನ್ನು ಮನೆಗೆ ಕರೆಸಿಕೊಂಡಿದ್ದರಿಂದ ಹಿಡಿದು ಊಟಕ್ಕೆ ಕೂರಿಸಿದ್ದು, ಮಲಗಲು ವ್ಯವಸ್ಥೆ ಮಾಡಿದ್ದು, ಕೊಲೆಗೆ ಪ್ಲಾನ್ ಮಾಡಿದ್ದು, ಕಲ್ಲಿನಿಂದ ಹೊಡೆದು ಹತ್ಯೆ ಮಾಡಿದ್ದು, ಬಳಿಕ ಮೃತದೇಹಗಳನ್ನು ಚೀಲಗಳಲ್ಲಿ ತುಂಬಿ ಪ್ಯಾಕ್ ಮಾಡಿ ಮನೆಯಿಂದ ಕೆಳಗೆ ಸಾಗಾಟ ಮಾಡಿದ್ದು, ಕಾರಿನಲ್ಲಿ ಇರಿಸಿದ್ದು ಸೇರಿದಂತೆ ಪ್ರತಿಯೊಂದು ಹಂತವನ್ನೂ ಮರುಸೃಷ್ಟಿ ಮಾಡಿಸಿದ್ದಾರೆ. ಈ ಸಂಪೂರ್ಣ ದೃಶ್ಯಗಳನ್ನು ಸಂಪೂರ್ಣವಾಗಿ ವಿಡಿಯೋಗ್ರಫಿ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ: ಬೆಂಗಳೂರು ಏಳು ಮಂದಿ ಕೊಲೆ ಪ್ರಕರಣ: ‘ನನಗೆ ಈಗ ಸಮಾಧಾನ ಆಗುತ್ತಿದೆ’ಎಂದ ಇಂದು ಶೇಖರ್!

ಆಡಿಯೋ ದಾಖಲೆಗಳು FSLಗೆ ರವಾನೆ

ಹತ್ಯೆ ಕೇಸ್ ಸಂಬಂಧ ಸಾಕ್ಷ್ಯ ಸಂಗ್ರಹಕ್ಕೆ ಪೊಲೀಸರು ಹೆಚ್ಚಿನ ಒತ್ತು ನೀಡಿದ್ದು, ಮೃತರ ಎಲ್ಲಾ ಮೊಬೈಲ್ ಫೋನ್‌ಗಳನ್ನು ರಿಟ್ರೀವ್‌ಗಾಗಿ ಕಳುಹಿಸಿದ್ದಾರೆ. ಆರೋಪಿ ಇಂದು ಶೇಖರ್‌ನ ಟ್ರಾವೆಲ್ ಹಿಸ್ಟರಿ ಆಧರಿಸಿ ಮ್ಯಾಪಿಂಗ್ ಕಾರ್ಯ ಕೂಡ ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಕ್ಕಿರುವ ಎಲ್ಲಾ ಆಡಿಯೋ ದಾಖಲೆಗಳನ್ನೂ ಎಫ್‌ಎಸ್‌ಎಲ್ ರವಾನಿಸಲಾಗಿದೆ. ಜೊತೆಗೆ ಹತ್ಯೆಗೆ ಸಂಬಂಧಿಸಿದ ಎಲ್ಲಾ ಸ್ಥಳಗಳಲ್ಲೂ ರಾಜಾಜಿನಗರ ಪೊಲೀಸರು ಮಹಜರು ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ. ಈ ನಡುವೆ ಇಂದು ಆರೋಪಿ ಶೇಖರ್ ಪೊಲೀಸ್ ಕಸ್ಟಡಿಯ ಅವಧಿ ಕೂಡ ಮುಕ್ತಾಯವಾಗಲಿರುವ ಹಿನ್ನೆಲೆ, ತನಿಖೆ ಮತ್ತಷ್ಟು ವೇಗ ಪಡೆದುಕೊಂಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language