Hashtagintro

ಟೈಗರ್ ಶ್ರಾಫ್​​ ಹತ್ಯೆ ಯತ್ನ: 11 ಮಂದಿ ಬಂಧನ, ಹಲವು ಮಾಹಿತಿ ಬಹಿರಂಗ

ಟೈಗರ್ ಶ್ರಾಫ್​​ ಹತ್ಯೆ ಯತ್ನ: 11 ಮಂದಿ ಬಂಧನ, ಹಲವು ಮಾಹಿತಿ ಬಹಿರಂಗ

ಬಾಲಿವುಡ್​​ನ ಸ್ಟಾರ್ ಯುವನಟ ಟೈಗರ್ ಶ್ರಾಫ್ ಹತ್ಯೆ ಯತ್ನಕ್ಕೆ ಕುರಿತಂತೆ ಮುಂಬೈ ಪೊಲೀಸರು ಬಿರುಸಿನ ತನಿಖೆ ನಡೆಸುತ್ತಿದ್ದು, ಈಗಾಗಲೇ 11 ಮಂದಿಯನ್ನು ಬಂಧಿಸಿದ್ದಾರೆ. ಘಟನೆ ನಡೆದ 15 ಗಂಟೆಗಳ ಅವಧಿಯಲ್ಲಿಯೇ ಮೂವರು ಶೂಟರ್​​ಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿ ಆದರು. ಆ ಬಳಿಕ ಶೂಟರ್​​ಗಳಿಗೆ ಪ್ರತ್ಯಕ್ಷವಾಗಿ ಸಹಾಯ ಮಾಡಿದ ನಾಲ್ವರನ್ನು ದೆಹಲಿ, ಹರಿಯಾಣಗಳಿಂದ ಪೊಲೀಸರು ಬಂಧಿಸಿದರು. ಆ ಬಳಿಕ ಇನ್ನೂ ಐವರನ್ನು ಪೊಲೀಸರು ಬಂಧಿಸಿದ್ದು, ಈ ವರೆಗೆ ಒಟ್ಟು 11 ಮಂದಿಯನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.

ಮುಂಬೈ ಪೊಲೀಸರು ಇಂದು (ಅಕ್ಟೋಬರ್ 25) ಪ್ರಾಂಜಲ್ ಠಕ್ರಲ್ ಎಂಬಾತನನ್ನು ಇಂಧೋರ್​​ನಿಂದ ಬಂಧಿಸಿದ್ದು, ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ 11ಕ್ಕೆ ಏರಿದೆ. ತನಿಖಾಧಿಕಾರಿಗಳ ಪ್ರಕಾರ, ಇಂದು ಬಂಧಿತನಾದ ಪ್ರಾಂಜಲ್ ಠಕ್ರಲ್ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಶೂಟರ್‌ಗೆ ಎರಡನೇ ಪಿಸ್ತೋಲ್ ಅನ್ನು ಒದಗಿಸಿದ್ದಾನೆ ಮತ್ತು ಈ ಪ್ರಕರಣದ ಪ್ರಮುಖ ಮಾಸ್ಟರ್ ಮೈಂಡ್ ಆಗಿರುವ ಭೂಗತ ಪಾತಕಿ ಅನಿಲ್ ಪಂಡಿತ್‌ನೊಂದಿಗೆ ನೇರ ನಂಟು ಹೊಂದಿದ್ದಾನೆ. ಪೊಲೀಸರು ಆತನನ್ನು ಗುಜರಾತಿನ ಸೂರತ್‌ಗೆ ಕರೆದೊಯ್ದು, ಅಲ್ಲಿ ಬಚ್ಚಿಡಲಾಗಿದ್ದ ಒಂದು ಪಿಸ್ತೋಲ್ ಹಾಗೂ ಇನ್ನೂ ಕೆಲ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಮುಂಬೈ ಪೊಲೀಸರು ಮೂರು ದಿನಗಳ ಟ್ರಾನ್ಸಿಟ್ ರಿಮ್ಯಾಂಡ್ ಪಡೆದುಕೊಂಡಿದ್ದು, ಹೆಚ್ಚಿನ ವಿಚಾರಣೆಗಾಗಿ ಪ್ರಾಂಜಲ್ ಠಕ್ರಲ್‌ನನ್ನು ಮುಂಬೈಗೆ ಕರೆತರುತ್ತಿದೆ. ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಎಲ್ಲರ ವಿರುದ್ಧ ಕಠಿಣವಾದ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (MCOCA – MCOCA) ಯನ್ನು ಹೊರಿಸಲಾಗುವುದು ಎಂದು ಪೊಲೀಸರು ಈಗಾಗಲೇ ಹೇಳಿದ್ದಾರೆ.

ಇದನ್ನೂ ಓದಿ:ಗಾಯಕ ದಲೇರ್ ಮೆಹಂದಿಗೆ ಸಚಿವರಿಂದ ಅವಮಾನ, ಬೆಂಬಲಕ್ಕೆ ನಿಂತ ಬಾಲಿವುಡ್

ಬಂಧಿತರ ವಿವರ

ಶೂಟರ್​​ಗಳಾದ ಪೂಲ್ ಸಿಂಗ್, ಹೃತಿಕ್, ರೆಹಾನ್ ಅನ್ಸಾರ್. ಬಂದೂಕನ್ನು ದೆಹಲಿಯಿಂದ ತಂದುಕೊಟ್ಟಿದ್ದ ರಾಧಾ ಮತ್ತು ಬಬಿತಾ. ಅವರಿಗೆ ಸಹಾಯ ಮಾಡಿದ್ದ ಸುಮಿತ್ ಮತ್ತು ಕುನಾಲ್. ಬಂದೂಕು ಖರೀದಿಗೆ ಸಹಾಯ ಮಾಡಿದ್ದ ಹಾಗೂ ಶೂಟರ್​​ಗಳಿಗೆ ಮಾಹಿತಿ ನೀಡಿದ್ದ ಜತಿನ್ ಮತ್ತು ಸಮೀರ್ ಬಂದೂಕು ನೀಡಿದ್ದ ಕುನಾಲ್ ಒಟ್ಟು 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಕ್ಟೋಬರ್ 18ರ ಸಂಜೆ, ಜುಹುವಿನಲ್ಲಿ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಗುಂಡು ಹಾರಿಸಿ ನಂತರ ಮೋಟಾರ್ ಸೈಕಲ್‌ನಲ್ಲಿ ಪರಾರಿಯಾಗಿದ್ದರು. ಮುಂಬೈ ಪೊಲೀಸ್ ಇಲಾಖೆಯ ಪ್ರಕಾರ, ಐದರಿಂದ ಆರು ಸುತ್ತು ಗುಂಡುಗಳನ್ನು ಹಾರಿಸಲಾಗಿದೆ. ಘಟನೆಯಲ್ಲಿ ಟೈಗರ್ ಶ್ರಾಫ್ ಅವರ ಚಾಲಕ ಹಾಗೂ ಒಬ್ಬ ಯೂಟ್ಯೂಬರ್ ಗಾಯಾಳು ಆಗಿದ್ದಾರೆ. ಟೈಗರ್ ಶ್ರಾಫ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ದಾಳಿಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯಿ ಗ್ಯಾಂಗಿನವ ಎಂದು ಹೇಳಿಕೊಂಡಿರುವ ಅನಿಲ್ ಪಂಡಿತ್ ಎಂಬಾತ ಹೊತ್ತುಕೊಂಡಿದ್ದಾನೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language