Hashtagintro

ಧನ್ವೀರ್ ಫೋಟೋಗೆ ಮಸಿ ಬಳಿದು ಝೈದ್ ಖಾನ್ ಅಭಿಮಾನಿಗಳ ಆಕ್ರೋಶ

ಧನ್ವೀರ್ ಫೋಟೋಗೆ ಮಸಿ ಬಳಿದು ಝೈದ್ ಖಾನ್ ಅಭಿಮಾನಿಗಳ ಆಕ್ರೋಶ

ನಟ ಧನ್ವೀರ್ ಮತ್ತು ವಿಜಯಲಕ್ಷ್ಮಿ ದರ್ಶನ್ ನಡುವೆ ಮನಸ್ತಾಪ ಆಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಆಡಿಯೋ ತುಣುಕುಗಳು ವೈರಲ್ ಆಗಿವೆ. ಅದರಲ್ಲಿ ಧನ್ವೀರ್ ಅವರು ನಟ ಝೈದ್ ಖಾನ್​ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪ ಎದುರಾಗಿದೆ. ಹಾಗಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಝೈದ್ ಖಾನ್ ಅಭಿಮಾನಿಗಳು ದೂರು ನೀಡಲು ಮುಂದಾಗಿದ್ದಾರೆ. ಧನ್ವೀರ್ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿ ಫಿಲ್ಮ್ ಚೇಂಬರ್​ಗೆ ಮನವಿ ಮಾಡಲಾಗಿದೆ. ಆದರೆ ದೂರು ಸ್ವೀಕರಿಸಲು ಫಿಲ್ಮ್​ ಚೇಂಬರ್ ಅಧ್ಯಕ್ಷೆ ಜಯಮಾಲಾ ನಿರಾಕರಣೆ ಮಾಡಿದ್ದಾರೆ. ‘ವೈಯಕ್ತಿಕ ಜಗಳಕ್ಕೆ ದೂರು ಸ್ವೀಕರಿಸುವುದಿಲ್ಲ’ ಎಂದು ಜಯಮಾಲಾ ಹೇಳಿದ್ದಾರೆ. ಝೈದ್ ಖಾನ್ ಅವರು ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯನಲ್ಲದ ಕಾರಣ ಕಲಾವಿದರ ಸಂಘಕ್ಕೆ ದೂರು ನೀಡುವಂತೆ ಜಯಮಾಲಾ ಸೂಚನೆ ನೀಡಿದ್ದಾರೆ. ಝೈದ್ ಖಾನ್ ಅಭಿಮಾನಿಗಳು ಧನ್ವೀರ್ ಫೋಟೋಗೆ ಮಸಿ ಬಳಿದು, ಚಪ್ಪಲಿ ಹಾರ ಹಾಕಿರುವ ಫೋಟೋ ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language