Hashtagintro

‘ಮಾತೃಭೂಮಿ’ ಸಿನಿಮಾ ನೋಡುವ ಹಿರಿಯರಿಗೆ ಸಲ್ಮಾನ್ ಖಾನ್ ಕೊಟ್ಟರು ಆಫರ್

‘ಮಾತೃಭೂಮಿ’ ಸಿನಿಮಾ ನೋಡುವ ಹಿರಿಯರಿಗೆ ಸಲ್ಮಾನ್ ಖಾನ್ ಕೊಟ್ಟರು ಆಫರ್

ಸಲ್ಮಾನ್ ಖಾನ್ ನಟನೆಯ ‘ಮಾತೃಭೂಮಿ’ ಸಿನಿಮಾ ಹಲವು ಅಡೆ-ತಡೆಗಳು, ವಿಳಂಬಗಳ ಬಳಿಕ ಕೊನೆಗೂ ಬಿಡುಗಡೆಗೆ ರೆಡಿಯಾಗಿದೆ. ಚೀನಾ ಜೊತೆಗಿನ ಸಂಘರ್ಷದ ಕತೆಯನ್ನು ಈ ಸಿನಿಮಾ ಒಳಗೊಂಡಿದ್ದು, ಈ ಹಿಂದೆ ಘೋಷಿಸಲಾಗಿದ್ದ ಸಮಯಕ್ಕಿಂತಲೂ ಸಾಕಷ್ಟು ತಡವಾಗಿ ಸಿನಿಮಾ ಅನ್ನು ಬಿಡುಗಡೆ ಮಾಡಲಾಗುತ್ತಿದೆ. ಇತ್ತೀಚೆಗಷ್ಟೆ ಸಲ್ಮಾನ್ ಖಾನ್ ಅವರು ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡುವ ಜೊತೆಗೆ ಸಿನಿಮಾ ನೋಡುವ ಹಿರಿಯ ಪ್ರೇಕ್ಷಕರಿಗೆ ಭರ್ಜರಿ ಆಫರ್ ಒಂದನ್ನು ಘೋಷಣೆ ಸಹ ಮಾಡಿದ್ದಾರೆ.

ಸಲ್ಮಾನ್ ಖಾನ್ ಅವರ ‘ಮಾತುಭೂಮಿ’ ಚಿತ್ರದ ಟ್ರೈಲರ್ ಅನ್ನು ನಿನ್ನೆ (ನವೆಂಬರ್ 6) ರಂದು ಬಿಡುಗಡೆ ಮಾಡಲಾಯಿತು. ಸಿನಿಮಾ ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಆಗಲಿದೆ. ಇದೇ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಹಿರಿಯ ನಾಗರಿಕರಿಗಾಗಿ ಒಂದು ವಿಶೇಷ ಕೊಡುಗೆಯನ್ನು ಘೋಷಿಸಿದರು. 75 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪ್ರೇಕ್ಷಕರು ಈ ಚಲನಚಿತ್ರವನ್ನು ಕೇವಲ 11 ರೂಪಾಯಿಗಳಿಗೆ ವೀಕ್ಷಿಸಬಹುದು ಎಂದು ಅವರು ಘೋಷಿಸಿದರು. ‘ಮಾತೃಭೂಮಿ’ ಸಿನಿಮಾವನ್ನು ಯಾವುದೇ ಚಿತ್ರಮಂದಿರದಲ್ಲಿ ವೀಕ್ಷಿಸಲು ಬರುವ ಹಿರಿಯ ನಾಗರಿಕರು ಕೇವಲ 11 ರೂಪಾಯಿ ಹಣ ನೀಡಿ ಸಿನಿಮಾ ವೀಕ್ಷಣೆ ಮಾಡಬಹುದಾಗಿರುತ್ತದೆ. ಹಿರಿಯ ಜೀವಿಗಳಿಗಾಗಿ ಸಲ್ಮಾನ್ ಖಾನ್ ಅವರು ಈ ವಿಶೇಷ ಆಫರ್ ಅನ್ನು ಪ್ರಕಟಣೆ ಮಾಡಿದ್ದಾರೆ.

ಈ ಸಿನಿಮಾವು ಗಾಲ್ವಾನ್ ಸಂಘರ್ಷದ ಕತೆಯನ್ನು ಒಳಗೊಂಡಿದೆ. ಚೀನಾ ಮತ್ತು ಭಾರತದ ಸೈನಿಕರು ಪರಸ್ಪರ ಹೊಡೆದಾಡಿಕೊಂಡಿದ್ದರು. ಈ ವಿಷಯ ಭಾರತೀಯ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ಹಿಂದೆ ಈ ಸಿನಿಮಾಕ್ಕೆ ‘ಬ್ಯಾಟಲ್ ಆಫ್ ಗಲ್ವಾನ್’ ಎಂದೇ ಹೆಸರಿಡಲಾಗಿತ್ತು. ಆದರೆ ಆ ಬಳಿಕ ‘ಮಾತೃಭೂಮಿ’ ಎಂದು ಬದಲಾಯಿಸಲಾಯ್ತು. ಈ ಬದಲಾವಣೆಗೆ ಕೇಂದ್ರ ಸರ್ಕಾರ ಹೇರಿದ ಒತ್ತಡವೇ ಕಾರಣ ಎನ್ನಲಾಗಿತ್ತು.

ಇದನ್ನೂ ಓದಿ:‘ಬಜೆಟ್, ವಿಎಫ್​​ಎಕ್ಸ್ ಬಗ್ಗೆ ಚರ್ಚೆ ಸರಿಯಲ್ಲ’; ‘ರಾಮಾಯಣ’ ಬೆಂಬಲಿಸಿದ ಸಲ್ಮಾನ್ ಖಾನ್

ಆದರೆ ಈ ಆರೋಪಗಳನ್ನು ತಳ್ಳಿ ಹಾಕಿದ ನಟ ಸಲ್ಮಾನ್ ಖಾನ್, ಸರ್ಕಾರದ ಕಡೆಯಿಂದ ಸ್ಕ್ರಿಪ್ಟ್ ಬದಲಾಯಿಸುವಂತೆ ಯಾವುದೇ ಒತ್ತಡವಿರಲಿಲ್ಲ ಎಂದು ಸ್ಪಷ್ಟಪಡಿಸಿದರು. ಅಂತಹ ವಾದಗಳೆಲ್ಲವೂ ಸುಳ್ಳು ಎಂದು ತಳ್ಳಿಹಾಕಿದ ಅವರು, ಇದು ಸೈನಿಕರ ಮತ್ತು ಅವರ ಕುಟುಂಬಗಳ ತ್ಯಾಗವನ್ನು ತೋರಿಸುವ ಕಥೆಯಾಗಿದೆ ಎಂದರು. ಚಿತ್ರದ ಬಿಡುಗಡೆ ವಿಳಂಬವಾದ ಬಗ್ಗೆ ಮಾತನಾಡಿದ ಅವರು, ಸಿನಿಮಾದ ವಿಎಫ್‌ಎಕ್ಸ್ (VFX) ಕೆಲಸಗಳು ಬಾಕಿ ಉಳಿದಿದ್ದರಿಂದ ಬಿಡುಗಡೆ ತಡವಾಗಿದೆ ಎಂದು ತಿಳಿಸಿದರು. ಅಂತಿಮವಾಗಿ ಈ ಚಿತ್ರವು ಡಿಸೆಂಬರ್ 4 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language