Hashtagintro

ಹೊಸ ವರ್ಷದಿಂದ ಹೊಸ ಚೆಕ್​ಬುಕ್ ನಿಯಮಗಳು ಬರುತ್ತವಾ? ವದಂತಿ ತಳ್ಳಿಹಾಕಿದ ಆರ್​ಬಿಐ

ಹೊಸ ವರ್ಷದಿಂದ ಹೊಸ ಚೆಕ್​ಬುಕ್ ನಿಯಮಗಳು ಬರುತ್ತವಾ? ವದಂತಿ ತಳ್ಳಿಹಾಕಿದ ಆರ್​ಬಿಐ

ನವದೆಹಲಿ, ನವೆಂಬರ್ 8: ಹೊಸ ವರ್ಷದಿಂದ ಹೊಸ ಸೆಕ್ಯೂರಿಟಿ ಫೀಚರ್ಸ್ ಇರುವ ಹೊಸ ‘ಚೆಕ್ ಟ್ರಂಕೇಶನ್ ಸಿಸ್ಟಮ್’ (CTS) ಚೆಕ್ ಬುಕ್‌ಗಳು ಕಡ್ಡಾಯವಾಗಿ ಬರಲಿವೆ ಎಂಬ ಸಂದೇಶಗಳು ಹರಿದಾಡುತ್ತಿವೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ಸುದ್ದಿಯನ್ನು ತಳ್ಳಿಹಾಕಿದೆ. ಇಂಥ ಯಾವುದೇ ಪ್ರಸ್ತಾಪ ಆರ್​ಬಿಐ ಬಳಿ ಇಲ್ಲ. ಇದು ಸದ್ಯಕ್ಕೆ ದೂರವಾದ ಮತ್ತು ದಾರಿ ತಪ್ಪಿಸುವ ಸುಳ್ಳು ವರದಿ ಎಂದು ಸ್ಪಷ್ಟಪಡಿಸಿದೆ.

ಹಳೆಯ ಚೆಕ್ ಬುಕ್‌ ನಿಯಮಗಳೇ ಮುಂದುವರಿಕೆ

ಪ್ರಸ್ತುತ ಚಾಲ್ತಿಯಲ್ಲಿರುವ ಚೆಕ್ ಬುಕ್‌ಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಡಿಸೆಂಬರ್ 31, 2026 ರ ನಂತರ ಹಳೆಯ ಚೆಕ್ ಬುಕ್‌ಗಳು ಅಮಾನ್ಯವಾಗುತ್ತವೆ ಎಂಬ ವಾದಗಳು ಸಂಪೂರ್ಣವಾಗಿ ತಪ್ಪು ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ.

ಇದನ್ನೂ ಓದಿ: ಜೊಮಾಟೊ ಸಂಸ್ಥಾಪಕರ ‘ಟೆಂಪಲ್’ ಸುತ್ತ ವಿವಾದ; ವೈದ್ಯರ ಆಕ್ಷೇಪಣೆಗಳು, ದೀಪಿಂದರ್ ಗೋಯಲ್ ಅವರ ಪ್ರತಿಕ್ರಿಯೆ

ಅಧಿಕೃತ ಮಾಹಿತಿಯಷ್ಟೇ ನಂಬಲು ಮನವಿ: ಬ್ಯಾಂಕಿಂಗ್ ನಿಯಮಗಳು ಮತ್ತು ಚೆಕ್ ಬಳಕೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಯಾವುದೇ ವದಂತಿಗಳನ್ನು ನಂಬದೆ, ಕೇವಲ ಆರ್‌ಬಿಐನ ಅಧಿಕೃತ ಪ್ರಕಟಣೆಗಳು ಮತ್ತು ವೆಬ್‌ಸೈಟ್ ಮೂಲಕ ಬರುವ ಮಾಹಿತಿಯನ್ನು ಮಾತ್ರ ಅವಲಂಬಿಸಬೇಕು ಎಂದು ಆರ್‌ಬಿಐ ಎಚ್ಚರಿಸಿದೆ.

ಸುಳ್ಳು ಸುದ್ದಿಯಲ್ಲಿ ತಿಳಿಸಿರುವ ಹೊಸ ನಿಯಮಗಳೇನು?

  • 2027ರ ಜನವರಿ 1ರಿಂದ ಹೊಸ ಚೆಕ್ ಸಿಸ್ಟಂ ಜಾರಿಗೆ ಬರುತ್ತದೆ. ಹಳೆಯ ಚೆಕ್​ಗೆ 50,000 ರೂ ಮಿತಿ ಇರುತ್ತದೆ.
  • ಹೊಸ ಚೆಕ್​ನಲ್ಲಿ ಅಕ್ಷರ ಅಂಕಿ ಸಂಯೋಜನೆಯ ಸಂಖ್ಯೆ, ಹೊಸ ಎಂಐಸಿಆರ್ ಕೋಡ್ ಇರುತ್ತದೆ.
  • ಕೋಡ್​ವೊಂದನ್ನು ಮರೆಮಾಚಲಾಗಿರುತ್ತದೆ. ಅದು ಯುವಿ ಮೂಲಕವಷ್ಟೇ ಕಾಣುಬಲ್ಲುದು.
  • ಪ್ರತೀ ಚೆಕ್ ಹಾಳೆಯೂ ಅರ್​ಬಿಐ ಸಿಸ್ಟಂ ಜೊತೆ ನೇರವಾಗಿ ಲಿಂಕ್ ಆಗಿರುತ್ತದೆ.

ಇದನ್ನೂ ಓದಿ: ಭಾರತದಲ್ಲಿ ಬೆಳೆಯುತ್ತಿರುವ ಸೆಮಿಕಂಡಕ್ಟರ್ ಕ್ಷೇತ್ರ; ಸೆಮಿಕಾನ್ 2.0 ವೆಬ್ ಅಪ್ಲಿಕೇಶನ್ ಪೋರ್ಟಲ್ ಲೋಕಾರ್ಪಣೆ
ಆರ್​ಬಿಐ ಟ್ವೀಟ್

ಈ ಮೇಲಿನ ಅಂಶಗಳನ್ನೊಳಗೊಂಡ ನೋಟೀಸ್ ಅನ್ನು ಆರ್​ಬಿಐ ಹೆಸರಿನಲ್ಲಿ ತಯಾರಿಸಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗುತ್ತಿದೆ. ಇದೆಲ್ಲಾ ವದಂತಿ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source: TV9 Kannada Business

Read full article on TV9 Kannada Business

Leave a Comment

Your email address will not be published. Required fields are marked *

समाचार की भाषा चुनें / Choose News Language