
ಚಾಮರಾಜನಗರ, ನವೆಂಬರ್ 10: ತಮಿಳುನಾಡಿನ ಗಾಜನೂರಿನಲ್ಲಿರುವ ಡಾ.ರಾಜಕುಮಾರ್ ಅವರ ಸಂಬಂಧಿ ಮನೆಯಲ್ಲಿ ಸಂಭವಿಸಿದ ನಿಗೂಢ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಮಾನ ಹಿನ್ನೆಲೆ ಕೆಲ ಯುವಕರನ್ನು ತಮಿಳುನಾಡು ಪೊಲೀಸರು ವಶಕ್ಕೆ ಪಡೆದು ಸ್ಥಳ ಮಹಜರಿಗಾಗಿ ಕರೆತಂದಿದ್ದಾರೆ. ಮೂರ್ನಾಲ್ಕು ಆಟೋ ಬಾಂಬ್‌ಗಳನ್ನ ಜೋಡಿಸಿ ಸ್ಫೋಟಿಸಿರುವುದಾಗಿ ಹೇಳಿದ್ದಾರೆ. ಆದರೆ ರಾಜಕುಮಾರ್ ಸಂಬಂಧಿ ಕುಟುಂಬದವರು ಇದನ್ನು ಒಪ್ಪಲು ತಯಾರಿಲ್ಲ. ಹಾಗಾದರೆ ಆ ಪಟಾಕಿಯನ್ನು ಮತ್ತೆ ಹೊಡೆದು ತೋರಿಸಿ. ಪಟಾಕಿ ಸ್ಫೋಟದಿಂದ ಬಾಗಿಲು, ಕಿಟಕಿ ಗಾಜು ಪುಡಿಪುಡಿಯಾಗಲು ಹೇಗೆ ಸಾಧ್ಯ. ಇದು ಕೇವಲ ಪಟಾಕಿಯಿಂದ ಆಗಿರಲು ಸಾಧ್ಯವಿಲ್ಲ, ಇದರ ಹಿಂದೆ ಬೇರೆ ಏನೋ ನಡೆದಿದೆ ಎಂದು ಕುಟುಂಬಸ್ಥರು ಬಲವಾಗಿ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ವೇಳೆ ಕೆಲ ಕಾಲ ಮನೋಜ್ಞ ಮನೆಯ ಎದುರು ಹೈಡ್ರಾಮಾ ನಡೆದಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Source: TV9 Kannada National
