Hashtagintro

ಟಾಟಾ ಗ್ರೂಪ್​ನ ಆರು ಕಂಪನಿಗಳ ನಾಯಕತ್ವ ತ್ಯಜಿಸಿದ ನೋಯೆಲ್; ಗ್ರೂಪ್​ನಲ್ಲಿ ಅವರ ಹಿಡಿತಕ್ಕೇನು ಆಗಿಲ್ಲ ಧಕ್ಕೆ

ಟಾಟಾ ಗ್ರೂಪ್​ನ ಆರು ಕಂಪನಿಗಳ ನಾಯಕತ್ವ ತ್ಯಜಿಸಿದ ನೋಯೆಲ್; ಗ್ರೂಪ್​ನಲ್ಲಿ ಅವರ ಹಿಡಿತಕ್ಕೇನು ಆಗಿಲ್ಲ ಧಕ್ಕೆ

ನವದೆಹಲಿ, ನವೆಂಬರ್ 12: ಟಾಟಾ ಗ್ರೂಪ್‌ನ ಸೂತ್ರಧಾರ ನೋಯೆಲ್ ಟಾಟಾ (Noel Tata) ಅವರು ಆರು ಟಾಟಾ ಕಂಪನಿಗಳಲ್ಲಿ ತಮ್ಮ ನಾಯಕತ್ವವನ್ನು ತ್ಯಜಿಸಿದ್ದಾರೆ. ಆದರೆ, ಇಡೀ ಗ್ರೂಪ್ ಅನ್ನು ನಿರ್ವಹಿಸುವ ಟಾಟಾ ಸನ್ಸ್ ಸಂಸ್ಥೆಯ ಮೇಲೆ ಹತೋಟಿ ಹೊಂದಿರುವ ಟಾಟಾ ಟ್ರಸ್ಟ್ಸ್​ನ ಅಧ್ಯಕ್ಷ ಸ್ಥಾನದಲ್ಲಿ ಅವರು ಮುಂದುವರಿಯಲಿದ್ದಾರೆ. ವಯಸ್ಸಿನ ಕಟ್ಟುಪಾಡುಗಳ ಕಾರಣದಿಂದ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

ಅವರು ನಾಯಕತ್ವ ತ್ಯಜಿಸಿರುವ ಆರು ಸಂಸ್ಥೆಗಳ ಪೈಕಿ ನಾಲ್ಕರಲ್ಲಿ ಅವರು ಛೇರ್ಮನ್ ಆಗಿದ್ದರು. ಇನ್ನೆರಡು ಸಂಸ್ಥೆಗಳಲ್ಲಿ ಅವರು ವೈಸ್ ಛೇರ್ಮನ್ ಆಗಿದ್ದರು. ಈಗ ಆ ಸ್ಥಾನಗಳನ್ನು ಅವರು ಬಿಟ್ಟುಕೊಟ್ಟಿದ್ದಾರೆ.

ಟ್ರೆಂಟ್, ವೋಲ್ಟಾಸ್, ಟಾಟಾ ಇನ್ವೆಸ್ಟ್​ಮೆಂಟ್ ಕಾರ್ಪೊರೇಶನ್ ಮತ್ತು ಟಾಟಾ ಇಂಟರ್ನ್ಯಾಷನಲ್ ಸಂಸ್ಥೆಗಳಲ್ಲಿ ಛೇರ್ಮನ್ ಸ್ಥಾನ ಹೊಂದಿದ್ದರು. ಟಾಟಾ ಸ್ಟೀಲ್ ಮತ್ತು ಟೈಟಾನ್ ಕಂಪನಿಯಲ್ಲಿ ವೈಸ್ ಛೇರ್ಮನ್ ಆಗಿದ್ದರು. ಈ ಕಂಪನಿಗಳ ವಾರ್ಷಿಕ ಮಹಾಸಭೆಗಳಲ್ಲೇ ನೋಯೆಲ್ ಟಾಟಾ ಅವರು ತಮ್ಮ ನಿರ್ಗಮನದ ವಿಚಾರವನ್ನು ಬಹಿರಂಗಪಡಿಸಿದ್ದರು ಎನ್ನಲಾಗಿದೆ. ಇವೆಲ್ಲವೂ ನಾನ್-ಎಕ್ಸಿಕ್ಯೂಟಿವ್ ಸ್ಥಾನಗಳಾಗಿವೆ.

ಇದನ್ನೂ ಓದಿ: ಲೈಂಗಿಕ ಹಗರಣದಿಂದ ಎನ್​ವಿಡಿಯಾದಿಂದ ಹೊರಬೀಳಲಿರುವ ಜೆನ್ಸೆನ್ ಹುವಾಂಗ್​ಗೆ ಇಲಾನ್ ಮಸ್ಕ್ ಅವರಿಂದ ಮಸ್ತ್ ಆಫರ್

ನೋಯೆಲ್ ಟಾಟಾ ಸ್ಥಾನ ತುಂಬಿರುವವರು ಇವರು…

ಟ್ರೆಂಟ್ ಕಂಪನಿಯಲ್ಲಿ ನೋಯಲ್ ಅವರ ಛೇರ್ಮನ್ ಸ್ಥಾನವನ್ನು ಬಹ್ರಂ ವಕೀಲ್ ಅವರು ತುಂಬಿದ್ದಾರೆ. ವಕೀಲ್ ಅವರು ಎಝೀಬಿ ಅಂಡ್ ಪಾರ್ಟ್ನರ್ಸ್​ನ ಸಹ-ಸಂಸ್ಥಾಪಕರಾಗಿದ್ದಾರೆ.

ಬಹ್ರಂ ವಕೀಲ್ ಅವರು ಟಾಟಾ ಇನ್ವೆಸ್ಟ್​ಮೆಂಟ್ ಕಾರ್ಪೊರೇಶನ್​ನಲ್ಲಿ ಛೇರ್ಮನ್ ಮತ್ತು ಡೈರೆಕ್ಟರ್ ಸ್ಥಾನ ಹೊಂದಿದ್ದಾರೆ. ಇಲ್ಲಿ ನೋಟೆಲ್ ಟಾಟಾ ಅವರಿಗೆ ವಿಶ್ರಾಂತ ಛೇರ್ಮನ್ ಸ್ಥಾನ ಕೊಡಲಾಗಿದೆ.

ಟಾಟಾ ಸ್ಟೀಲ್​ನ ಸಿಇಒ ಮತ್ತು ಎಂಡಿ ಟಿ.ವಿ. ನರೇಂದ್ರನ್ ಅವರು ಟಾಟಾ ಇಂಟರ್ನ್ಯಾಷನಲ್ ಸಂಸ್ಥೆಯಲ್ಲಿ ನೂತನ ಛೇರ್ಮನ್ ಆಗಿ ನೋಯೆಲ್ ಟಾಟಾ ಅವರ ಸ್ಥಾನ ತುಂಬಿದ್ದಾರೆ.

ಇನ್ನು, ಟಾಟಾ ಸ್ಟೀಲ್ ಮತ್ತು ಟೈಟಾನ್ ಕಂಪನಿಯಲ್ಲಿ ನೋಯೆಲ್ ಅವರು ವೈಸ್ ಛೇರ್ಮನ್ ಸ್ಥಾನ ತ್ಯಜಿಸುತ್ತಿದ್ದಾರೆ. ಅವರ ಸ್ಥಾನಕ್ಕೆ ಇವತ್ತು ಅಥವಾ ನಾಳೆ ಬೇರೆಯವರನ್ನು ಆಯ್ಕೆ ಮಾಡಬಹುದು.

ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್​ನ ಸಿಇಒ ಮತ್ತು ಎಂಡಿಯಾಗಿರುವ ಸುನೀಲ್ ಡಿಸೋಜಾ ಅವರು ವೋಲ್ಟಾಸ್​ನ ಛೇರ್ಮನ್ ಆಗಿದ್ದಾರೆ.

ಇದನ್ನೂ ಓದಿ: ಎನ್​ವಿಡಿಯಾ ಸಿಇಒ ಜೆನ್ಸೆನ್ ಹುವಾಂಗ್ ಹಗರಣದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್; ಚೀನಾದ ಗೂಢಚಾರಿಣಿ ಮತ್ತಾಕೆಯ ಪತಿ ಮತ್ತು ಕಾರ್ಪೊರೇಟ್ ನೆಟ್ವರ್ಕ್

ನೋಯೆಲ್ ಟಾಟಾ ತಮ್ಮ ಛೇರ್ಮನ್ ಸ್ಥಾನಗಳನ್ನು ತ್ಯಜಿಸಿದ್ದು ಯಾಕೆ?

ಟಾಟಾ ಗ್ರೂಪ್​ನ ಆಡಳಿತಾತ್ಮಕ ಮತ್ತು ಆಡಳಿತ ಸುಧಾರಣಾ ನಿಯಮಗಳ (Governance Policy) ಪ್ರಕಾರ, ನಾನ್-ಎಕ್ಸಿಕ್ಯೂಟಿವ್ ನಿರ್ದೇಶಕರು 70 ವರ್ಷ ಪೂರ್ಣಗೊಂಡ ನಂತರ ತಮ್ಮ ಹುದ್ದೆಗಳಿಂದ ನಿವೃತ್ತರಾಗಬೇಕು. ಈ ನಿಯಮದಂತೆ ನೋಯೆಲ್ ಟಾಟಾ ಅವರು ಈ ನಿರ್ಧಾರ ತೆಗೆದುಕೊಂಡಿದ್ದು, ಇದು ಗ್ರೂಪ್‌ನ ನಿಗದಿತ ಆಡಳಿತಾತ್ಮಕ ಪ್ರಕ್ರಿಯೆಯಾಗಿದೆ.

ನೋಯೆಲ್ ಟಾಟಾ ಅವರ ಅಧಿಕಾರ ಮೊಟಕುಗೊಂಡಿದೆಯಾ?

ಆರು ಕಂಪನಿಗಳ ನಾಯಕತ್ವ ಸ್ಥಾನವನ್ನು ನೋಯೆಲ್ ಟಾಟಾ ತ್ಯಜಿಸಿರುವರಾದರೂ ಒಟ್ಟಾರೆ ಟಾಟಾ ಗ್ರೂಪ್ ಮೇಲೆ ಅವರ ಹಿಡಿತ ಕುಂದುವುದಿಲ್ಲ. ಟಾಟಾ ಸನ್ಸ್ ಕಂಪನಿಯು ಟಾಟಾ ಗ್ರೂಪ್​ನ ಹಲವಾರು ಕಂಪನಿಗಳನ್ನು ನಿರ್ವಹಿಸುತ್ತದೆ. ಈ ಟಾಟಾ ಸನ್ಸ್​ನ ಮೇಲೆ ಟಾಟಾ ಟ್ರಸ್ಟ್ಸ್ ಹಿಡಿತ ಹೊಂದಿದೆ. ಈ ಟಾಟಾ ಟ್ರಸ್ಟ್ಸ್​ಗೆ ಛೇರ್ಮನ್ ಸ್ಥಾನವನ್ನು ಅವರು ಹೊಂದಿದ್ದಾರೆ. ಹಾಗೆಯೇ, ಟಾಟಾ ಸನ್ಸ್​ನ ಮಂಡಳಿಯಲ್ಲಿ ಅವರು ಟಾಟಾ ಟ್ರಸ್ಟ್ಸ್ ಪರವಾಗಿ ನಾಮಿನಿ ಡೈರೆಕ್ಟರ್ ಆಗಿ ಮುಂದುವರಿಯುತ್ತಾರೆ. ಹೀಗಾಗಿ, ಟಾಟಾ ಗ್ರೂಪ್​ನ ಮೇಲೆ ಸ್ಥೂಲವಾಗಿ ಅವರ ಹಿಡಿತ ಇದ್ದೇ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source: TV9 Kannada Business

Read full article on TV9 Kannada Business

Leave a Comment

Your email address will not be published. Required fields are marked *

समाचार की भाषा चुनें / Choose News Language