Hashtagintro

ಚಿಕ್ಕದಾಗಿ ಕಾಣುವ ಹಸಿರು ಬಟಾಣಿ ಆರೋಗ್ಯದ ಖಜಾನೆ! ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನಗಳನ್ನು ತಿಳಿದುಕೊಳ್ಳಿ

ಚಿಕ್ಕದಾಗಿ ಕಾಣುವ ಹಸಿರು ಬಟಾಣಿ ಆರೋಗ್ಯದ ಖಜಾನೆ! ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನಗಳನ್ನು ತಿಳಿದುಕೊಳ್ಳಿ

ಚಳಿಗಾಲ ಆರಂಭವಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ತಾಜಾ ಹಸಿರು ಬಟಾಣಿ ಹೆಚ್ಚಾಗಿ ದೊರೆಯುತ್ತದೆ. ಆಲೂಗಡ್ಡೆ ಬಟಾಣಿ ಪಲ್ಯ, ಬಟಾಣಿ ಪನೀರ್, ಬಟಾಣಿ ಪರೋಟಾ ಸೇರಿದಂತೆ ಹಲವು ರುಚಿಕರ ಖಾದ್ಯಗಳನ್ನು ಇದರಿಂದ ತಯಾರಿಸಬಹುದು. ಆದರೆ ಹಸಿರು ಬಟಾಣಿ ಕೇವಲ ರುಚಿಗೆ ಮಾತ್ರವಲ್ಲ, ಪೌಷ್ಟಿಕಾಂಶದ ದೃಷ್ಟಿಯಿಂದಲೂ ಉತ್ತಮ ಆಹಾರವಾಗಿದೆ. ಇದರಲ್ಲಿ ಪ್ರೋಟೀನ್, ನಾರಿನಂಶ, ಕಬ್ಬಿಣ ಮತ್ತು ಫೋಲೇಟ್‌ನಂತಹ ಪ್ರಮುಖ ಪೋಷಕಾಂಶಗಳು ಕಂಡುಬರುತ್ತವೆ. ಹಾಗಾದರೆ ಇದರ ಸೇವನೆಯಿಂದ ಸಿಗುವ ಪ್ರಯೋಜನಗಳೇನು ತಿಳಿದುಕೊಳ್ಳಿ.

ನಾರಿನಂಶದಿಂದ ಸಮೃದ್ಧವಾಗಿದೆ

ಬೇಯಿಸಿದ ಒಂದು ಕಪ್ ಹಸಿರು ಬಟಾಣಿಯಲ್ಲಿ ಸುಮಾರು 9 ಗ್ರಾಂ ನಾರಿನಂಶ ದೊರೆಯುತ್ತದೆ. ಇದು ಜೀರ್ಣಕ್ರಿಯೆ ಸರಾಗವಾಗಿರಲು ಮತ್ತು ಕರುಳಿನ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ನಾರಿನಂಶವು ಮಲಬದ್ಧತೆಯ ಸಮಸ್ಯೆಯನ್ನು ಕಡಿಮೆ ಮಾಡಲು ಮತ್ತು ಹೊಟ್ಟೆ ದೀರ್ಘಕಾಲ ತುಂಬಿದ ಅನುಭವ ನೀಡಲು ಸಹಕಾರಿಯಾಗಿದೆ.

ಕಬ್ಬಿಣದ ಉತ್ತಮ ಮೂಲ

100 ಗ್ರಾಂ ಬೇಯಿಸಿದ ಹಸಿರು ಬಟಾಣಿಯಲ್ಲಿ ಸುಮಾರು 1.5 ಮಿಲಿಗ್ರಾಂ ಕಬ್ಬಿಣ ದೊರೆಯುತ್ತದೆ. ದೇಹದಲ್ಲಿ ಹಿಮೋಗ್ಲೋಬಿನ್ ಉತ್ಪಾದನೆಗೆ ಕಬ್ಬಿಣ ಅಗತ್ಯವಾಗಿದೆ. ಇದರಲ್ಲಿರುವ ವಿಟಮಿನ್ ಸಿ ಕೂಡ ಸಸ್ಯಾಹಾರದಿಂದ ದೊರೆಯುವ ಕಬ್ಬಿಣವನ್ನು ದೇಹ ಹೀರಿಕೊಳ್ಳಲು ನೆರವಾಗುತ್ತದೆ.

ಇದನ್ನೂ ಓದಿ: ಸಬ್ಬಸಿಗೆ ಬೀಜಗಳ ಆರೋಗ್ಯ ಪ್ರಯೋಜನಗಳು: ಸೇವಿಸುವ ಮೊದಲು ತಿಳಿಯಬೇಕಾದ ಸಂಗತಿಗಳು

ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿ

ಹಸಿರು ಬಟಾಣಿಯಲ್ಲಿರುವ ನಾರಿನಂಶ ಮತ್ತು ಹುದುಗುವ ಕಾರ್ಬೋಹೈಡ್ರೇಟ್‌ಗಳು ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳಿಗೆ ಆಹಾರ ಒದಗಿಸುತ್ತವೆ. ಇದರಿಂದ ಕರುಳಿನ ಸೂಕ್ಷ್ಮಜೀವಿಗಳ ಸಮತೋಲನ ಕಾಪಾಡಲು ಸಹಾಯವಾಗಬಹುದು.

ಜೀವಕೋಶಗಳ ಬೆಳವಣಿಗೆಗೆ ಫೋಲೇಟ್

ಹಸಿರು ಬಟಾಣಿಯಲ್ಲಿ ವಿಟಮಿನ್ ಬಿ9 ಅಂದರೆ ಫೋಲೇಟ್ ಇದೆ. ಇದು ಡಿಎನ್‌ಎ ನಿರ್ಮಾಣ ಮತ್ತು ಜೀವಕೋಶಗಳ ಸಾಮಾನ್ಯ ಬೆಳವಣಿಗೆ ಹಾಗೂ ವಿಭಜನೆಗೆ ಅಗತ್ಯವಾಗಿದೆ. 100 ಗ್ರಾಂ ಬೇಯಿಸಿದ ಬಟಾಣಿಯಲ್ಲಿ ಸುಮಾರು 63 ಮೈಕ್ರೋಗ್ರಾಂ ಫೋಲೇಟ್ ದೊರೆಯುತ್ತದೆ.

ಪ್ರೋಟೀನ್‌ನ ಉತ್ತಮ ಮೂಲ

ಒಂದು ಕಪ್ ಬೇಯಿಸಿದ ಹಸಿರು ಬಟಾಣಿಯಲ್ಲಿ ಸುಮಾರು 9 ಗ್ರಾಂ ಪ್ರೋಟೀನ್ ಇರುತ್ತದೆ. ಇದು ಸ್ನಾಯುಗಳ ನಿರ್ವಹಣೆ ಮತ್ತು ದೇಹದ ಬೆಳವಣಿಗೆಗೆ ನೆರವಾಗುತ್ತದೆ. ನಾರಿನಂಶದ ಜೊತೆಗೆ ಪ್ರೋಟೀನ್ ಇರುವುದರಿಂದ ಹೊಟ್ಟೆ ತುಂಬಿದ ಅನುಭವ ಹೆಚ್ಚು ಸಮಯ ಉಳಿಯಬಹುದು.

ಹಸಿರು ಬಟಾಣಿಯನ್ನು ಆರೋಗ್ಯಕರವಾಗಿ ಸೇವಿಸುವುದು ಹೇಗೆ?

  • ಬಟಾಣಿಯೊಂದಿಗೆ ಸ್ವಲ್ಪ ನಿಂಬೆ ರಸ ಸೇರಿಸಿ ಸೇವಿಸಿ.
  • ಹೆಚ್ಚು ಹೊತ್ತು ಬೇಯಿಸುವ ಬದಲು ಹಬೆಯಲ್ಲಿ ಬೇಯಿಸುವುದು ಉತ್ತಮ.
  • ರಾಗಿ, ಗೋಧಿ ಅಥವಾ ಇತರ ಧಾನ್ಯಗಳ ಜೊತೆಗೆ ಸೇರಿಸಿ ಸೇವಿಸಬಹುದು.
  • ತರಕಾರಿ ಪಲ್ಯ, ಸೂಪ್ ಮತ್ತು ಸಲಾಡ್‌ಗಳಲ್ಲಿಯೂ ಬಳಸಬಹುದು.

ಬಟಾಣಿ ತಿನ್ನುವಾಗ ಎಚ್ಚರ ವಹಿಸಿ

ಹಸಿರು ಬಟಾಣಿಯಲ್ಲಿರುವ ಕಾರ್ಬೋಹೈಡ್ರೇಟ್‌ಗಳಿಂದ ಕೆಲವರಿಗೆ ಹೊಟ್ಟೆ ಉಬ್ಬರ ಮತ್ತು ಗ್ಯಾಸ್ ಸಮಸ್ಯೆ ಉಂಟಾಗಬಹುದು. ವಿಶೇಷವಾಗಿ ಐಬಿಎಸ್ ಇರುವವರು ಕಡಿಮೆ ಪ್ರಮಾಣದಲ್ಲಿ ಸೇವಿಸಲು ಆರಂಭಿಸಿ, ದೇಹಕ್ಕೆ ಹೊಂದಿಕೊಳ್ಳುವಂತೆ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada Health

Read full article on TV9 Kannada Health

Leave a Comment

Your email address will not be published. Required fields are marked *

समाचार की भाषा चुनें / Choose News Language