Hashtagintro

ಮನೆಯಲ್ಲಿ ಹಳೆಯ ಕ್ಯಾಲೆಂಡರ್ ನೇತುಹಾಕಬಾರದು ಏಕೆ? ವಾಸ್ತು ಎಚ್ಚರಿಕೆ ಇಲ್ಲಿದೆ

ಮನೆಯಲ್ಲಿ ಹಳೆಯ ಕ್ಯಾಲೆಂಡರ್ ನೇತುಹಾಕಬಾರದು ಏಕೆ? ವಾಸ್ತು ಎಚ್ಚರಿಕೆ ಇಲ್ಲಿದೆ

ಸಾಮಾನ್ಯವಾಗಿ ಮನೆ ಅಲಂಕಾರ ಮತ್ತು ದಿನನಿತ್ಯದ ವಸ್ತುಗಳ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಪ್ರತಿಯೊಂದು ವಸ್ತುವು ವಾತಾವರಣ ಮತ್ತು ಸಕಾರಾತ್ಮಕ ಶಕ್ತಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಇಂತಹ ಕೆಲವು ವಸ್ತುಗಳು ಮನೆಯಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸುವುದಲ್ಲದೆ, ಕುಟುಂಬ ಸದಸ್ಯರ ಪ್ರಗತಿಗೂ ಅಡ್ಡಿಯಾಗಬಹುದು ಎಂದು ನಂಬಲಾಗಿದೆ. ಆದ್ದರಿಂದ, ಮನೆಯಲ್ಲಿರುವ ಸಣ್ಣಪುಟ್ಟ ವಿಷಯಗಳ ಬಗ್ಗೆಯೂ ಗಮನ ಹರಿಸುವುದು ಅತ್ಯಂತ ಮುಖ್ಯವಾಗಿದೆ.

ಹಳೆಯ ಕ್ಯಾಲೆಂಡರ್‌ಗಳನ್ನು ಮನೆಯಲ್ಲಿ ಇಡುವುದು ಏಕೆ ಅಶುಭ?

ಮನೆಗಳ ಗೋಡೆಗಳ ಮೇಲೆ ಕ್ಯಾಲೆಂಡರ್ ನೇತಾಡುವುದನ್ನು ನಾವು ಸಾಮಾನ್ಯವಾಗಿ ನೋಡುತ್ತೇವೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಗೋಡೆಯ ಮೇಲೆ ಹಳೆಯ ಕ್ಯಾಲೆಂಡರ್ ಅನ್ನು ಹಾಗೆಯೇ ಮುಂದುವರಿಸಿಕೊಂಡು ಹೋಗುವುದು ಮನೆಗೆ ಅಶುಭವೆಂದು ಪರಿಗಣಿಸಲಾಗುತ್ತದೆ. ಹಳೆಯ ಕ್ಯಾಲೆಂಡರ್‌ಗಳನ್ನು ಹಿಂದಿನ ಸಮಯ ಮತ್ತು ನಿಶ್ಚಲ ಶಕ್ತಿಯ (Stagnant Energy) ಸಂಕೇತವೆಂದು ನಂಬಲಾಗಿದೆ. ಇದನ್ನು ಮನೆಯಲ್ಲಿ ನೇತುಹಾಕಿಕೊಳ್ಳುವುದರಿಂದ ವ್ಯಕ್ತಿಯ ಜೀವನದ ಪ್ರಗತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ವಾಸ್ತು ನಂಬಿಕೆಗಳ ಪ್ರಕಾರ, ಹಳೆಯ ಕ್ಯಾಲೆಂಡರ್‌ಗಳು ಭೂತಕಾಲವನ್ನು ಸಂಕೇತಿಸುತ್ತವೆ. ಅವುಗಳನ್ನು ದೀರ್ಘಕಾಲದವರೆಗೆ ಮನೆಯಲ್ಲಿ ಇಡುವುದರಿಂದ ಸಕಾರಾತ್ಮಕ ಶಕ್ತಿಯ ಹರಿವಿಗೆ ತಡೆಯಾಗುತ್ತದೆ. ಇದು ವ್ಯಕ್ತಿಯ ಪ್ರಗತಿ ಮತ್ತು ಮಾನಸಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಹೊಸ ವರ್ಷಕ್ಕೆ ಏನು ಮಾಡಬೇಕು?

ವಾಸ್ತು ಪ್ರಕಾರ, ಹೊಸ ವರ್ಷದ ಆರಂಭದಲ್ಲಿ ಅಥವಾ ಹಳೆಯ ವರ್ಷ ಮುಗಿದ ಕೂಡಲೇ ಹಳೆಯ ಕ್ಯಾಲೆಂಡರ್‌ಗಳನ್ನು ಗೋಡೆಯಿಂದ ತೆಗೆದುಹಾಕಬೇಕು. ಅವುಗಳ ಜಾಗದಲ್ಲಿ ಹೊಸ ಕ್ಯಾಲೆಂಡರ್ ಅನ್ನು ಹಾಕಬಹುದು. ಇದು ಮನೆಯಲ್ಲಿ ಹೊಸ ಆರಂಭ ಮತ್ತು ಸಕಾರಾತ್ಮಕ ಶಕ್ತಿಯ ವಾತಾವರಣವನ್ನು ಸೃಷ್ಟಿಸುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ: ದುರ್ಗಾ ದೇವಿಯ ಕೈಯಲ್ಲಿರುವ ಆಯುಧಗಳ ರಹಸ್ಯವೇನು? ತ್ರಿಶೂಲದಿಂದ ಚಕ್ರದವರೆಗೆ ಎಲ್ಲದರ ಮಹತ್ವ ಇಲ್ಲಿದೆ!

ದೇವಾನುದೇವತೆಗಳ ಚಿತ್ರಗಳಿರುವ ಹಳೆಯ ಕ್ಯಾಲೆಂಡರ್ ಜಾಗ್ರತೆ:

ಒಂದು ವೇಳೆ ನಿಮ್ಮ ಹಳೆಯ ಕ್ಯಾಲೆಂಡರ್‌ನಲ್ಲಿ ದೇವರು ಮತ್ತು ದೇವತೆಗಳ ಚಿತ್ರಗಳಿದ್ದು, ನೀವು ಅವುಗಳನ್ನು ಸಂರಕ್ಷಿಸಲು ಬಯಸಿದರೆ, ಕ್ಯಾಲೆಂಡರ್‌ನ ಆ ಚಿತ್ರವಿರುವ ಭಾಗವನ್ನು ಎಚ್ಚರಿಕೆಯಿಂದ ಕತ್ತರಿಸಿ ಸುರಕ್ಷಿತ ಸ್ಥಳದಲ್ಲಿ ಸಂಗ್ರಹಿಸಬಹುದು. ಆದರೆ ಹಳೆಯ ಕ್ಯಾಲೆಂಡರ್ ಅನ್ನು ಹಾಗೆಯೇ ದೀರ್ಘಕಾಲ ಗೋಡೆ ಮೇಲೆ ನೇತುಹಾಕುವ ಬದಲು, ಉಳಿದ ಭಾಗವನ್ನು ವಿಲೇವಾರಿ ಮಾಡುವುದು ಉತ್ತಮ.

ಹಳೆಯ ಕ್ಯಾಲೆಂಡರ್ ಅನ್ನು ಸರಿಯಾಗಿ ವಿಲೇವಾರಿ ಮಾಡುವುದು ಹೇಗೆ?

ಹಳೆಯ ಕ್ಯಾಲೆಂಡರ್‌ಗಳನ್ನು ಎಲ್ಲೆಂದರಲ್ಲಿ ಹರಿದು ಹಾಕುವುದು, ಕಸಕ್ಕೆ ಎಸೆಯುವುದು ಅಥವಾ ಸುಡುವುದು ಒಳ್ಳೆಯದಲ್ಲ. ಅವುಗಳನ್ನು ಅತ್ಯಂತ ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಆ ಕ್ಯಾಲೆಂಡರ್‌ಗಳು ಕಾಗದದಿಂದ ಮಾಡಲ್ಪಟ್ಟಿರುವುದರಿಂದ, ಅವುಗಳನ್ನು ರಿಸೈಕ್ಲಿಂಗ್‌ಗೆ (ಮರುಬಳಕೆ) ನೀಡುವುದು ಉತ್ತಮ. ಈ ರೀತಿಯಾಗಿ, ನಿಮ್ಮ ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ಹೊರಹಾಕಿ, ಸಕಾರಾತ್ಮಕ ವಾತಾವರಣವನ್ನು ಕಾಪಾಡಿಕೊಳ್ಳಬಹುದು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language