Hashtagintro

ಮದುವೆಯಾಗುವಂತೆ ವಿಜಯ್ ಬಳಿ ಹಲವಾರು ಬಾರಿ ಕೇಳಿಕೊಂಡಿದ್ದರಂತೆ ರಶ್ಮಿಕಾ ಮಂದಣ್ಣ

ಮದುವೆಯಾಗುವಂತೆ ವಿಜಯ್ ಬಳಿ ಹಲವಾರು ಬಾರಿ ಕೇಳಿಕೊಂಡಿದ್ದರಂತೆ ರಶ್ಮಿಕಾ ಮಂದಣ್ಣ

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಪ್ರಸ್ತುತ ದಕ್ಷಿಣ ಭಾರತೀಯ ಚಿತ್ರರಂಗದ ಬಲು ಜನಪ್ರಿಯ ಜೋಡಿ. ಇದೇ ವರ್ಷ ಫೆಬ್ರವರಿ ತಿಂಗಳಲ್ಲಿ ವಿವಾಹವಾದ ಈ ಜೋಡಿ ಇನ್ನೂ ‘ಹನಿಮೂನ್ ಫೇಸ್​’ ನಲ್ಲಿದ್ದಾರೆ. ಮದುವೆಯ ಬಳಿಕ ಒಟ್ಟಿಗೆ ‘ರಣಬಾಲಿ’ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಕೊಂಡ ರಶ್ಮಿಕಾ ಮತ್ತು ವಿಜಯ್ ಅವರು ಇದೀಗ ಜಂಟಿಯಾಗಿ ‘ಕಾಫಿ ವಿತ್ ಕರಣ್’ಶೋನಲ್ಲಿ ಭಾಗಿ ಆಗಿದ್ದಾರೆ. ಇಬ್ಬರೂ ಸಹ ತಮ್ಮ ಖಾಸಗಿ ಜೀವನದ ಬಗ್ಗೆ ಲವ್ ಲೈಫ್ ಬಗ್ಗೆ ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ವಿಜಯ್ ದೇವರಕೊಂಡ ಈ ಮೊದಲೇ ಒಮ್ಮೆ ಕಾಫಿ ವಿತ್ ಕರಣ್ ಶೋನಲ್ಲಿ ಭಾಗಿ ಆಗಿದ್ದರು. ಇಬ್ಬರೂ ಭಾಗಿ ಆಗಿರುವ ಎಪಿಸೋಡಿನ ಪ್ರೋಮೊ ಈಗಾಗಲೇ ರಿಲೀಸ್ ಆಗಿದೆ. ರಶ್ಮಿಕಾ ಇದೇ ಮೊದಲ ಬಾರಿಗೆ ಕಾಫಿ ವಿತ್ ಕರಣ್​​ ಶೋಗೆ ಆಗಮಿಸಿದ್ದಾರೆ. ಇಬ್ಬರಿಗೂ ಅವರ ಖಾಸಗಿ ಜೀವನದ ಬಗ್ಗೆ ಲವ್ ಲೈಫ್ ಬಗ್ಗೆ ಹಲವು ಪ್ರಶ್ನೆಗಳನ್ನು ಕರಣ್ ಜೋಹರ್ ಕೇಳಿದ್ದಾರೆ. ಮಾತ್ರವಲ್ಲದೆ ಇಬ್ಬರ ಕೈಯಿಂದ ಹಲವು ಗೇಮ್​​ಗಳನ್ನು ಸಹ ಕರಣ್ ಜೋಹರ್ ಆಡಿಸಿದ್ದಾರೆ. ಪ್ರಶ್ನೋತ್ತರದ ವೇಳೆ ರಶ್ಮಿಕಾ, ತಾವೇ ವಿಜಯ್​​ಗೆ ಮದುವೆ ಆಗುವಂತೆ ಹಲವಾರು ಬಾರಿ ಕೇಳಿಕೊಂಡಿದ್ದೆ ಎಂಬ ವಿಷಯ ಹೇಳಿದ್ದಾರೆ.

ಪ್ರೋಮೊನಲ್ಲಿ ತೋರಿಸಿರುವಂತೆ, ಕರಣ್ ಜೋಹರ್ ಅವರು ವಿಜಯ್ ಅವರನ್ನು ತಾವು ಅಧಿಕೃತವಾಗಿ ಪ್ರಪೋಸ್ ಮಾಡಿದ್ದೀರಾ ಎಂದು ಕೇಳಿದಾಗ ದಂಪತಿಗಳ ನಡುವಿನ ಮಾತುಕತೆ ಶುರುವಾಗುತ್ತದೆ. ರಶ್ಮಿಕಾ ತಲೆಯಾಡಿಸಿದಾಗ, ಮದುವೆಯಾಗುವಂತೆ ಮೊದಲು ಪ್ರಸ್ತಾಪಿಸಿದ್ದು ರಶ್ಮಿಕಾ ಎಂದು ವಿಜಯ್ ಹೇಳಿದರು. ವಿಜಯ್ ಮಾತನಾಡಿ, “ಅವಳು (ರಶ್ಮಿಕಾ) ನಾವಿಬ್ಬರೂ ಮದುವೆ ಮಾಡಿಕೊಳ್ಳೋಣ’ ಎಂದಳು. ಅದಕ್ಕೆ ನಾನು, ‘ಸರಿ, ನೀನು ಇದನ್ನು ನೂರಾರು ಬಾರಿ ಈಗಾಗಲೇ ಕೇಳಿದ್ದೀಯಾ’ ಎಂದಿದ್ದೆ’ ಎಂದು ಹೇಳಿದ್ದಾರೆ. ಬಳಿಕ ರಶ್ಮಿಕಾ, ‘ಹೌದು, ನಾನು ಒಂದು ಇಡೀ ವರ್ಷ ನಾವು ಮದುವೆ ಆಗೋಣ ಎಂದು ಕೇಳುತ್ತಲೇ ಇದ್ದೆ’ ಎಂದು ಕರಣ್ ಎದುರು ಹೇಳಿದ್ದಾರೆ. ಆಗ ವಿಜಯ್, ‘ನಾನೇನು ಅಷ್ಟು ಕೆಟ್ಟವನಲ್ಲ’ ಎಂದಿದ್ದಾರೆ. ಆದರೆ ಆ ಚರ್ಚೆ ಹೇಗೆ ಶುರುವಾಯ್ತು, ಹೇಗೆ ಅಂತ್ಯವಾಯ್ತು, ವಿಜಯ್ ಮದುವೆ ಆಗಲು ತಡ ಮಾಡಿದ್ದು ಏಕೆ ಎಂಬುದಕ್ಕೆ ಉತ್ತರ ಸಿಗಲು ಎಪಿಸೋಡ್ ರಿಲೀಸ್ ಆಗಬೇಕಿದೆ.

‘ಕಾಫಿ ವಿತ್ ಕರಣ್’ ರಶ್ಮಿಕಾ-ವಿಜಯ್ ಎಪಿಸೋಡ್ ಪ್ರೋಮೊ

 

View this post on Instagram

 

A post shared by Karan Johar (@karanjohar)

ಪ್ರೋಮೊನಲ್ಲಿ ತೋರಿಸಿರುವಂತೆ ಕರಣ್ ಜೋಹರ್, ಹಲವು ಪ್ರಶ್ನೆಗಳನ್ನು ಜೋಡಿಗೆ ಕೇಳಿದ್ದಾರೆ. ‘ರಣ್​​ಬೀರ್ ಕಪೂರ್ ಮತ್ತು ಅಲ್ಲು ಅರ್ಜುನ್ ನಡುವೆ ಒಬ್ಬರನ್ನು ಚೂಸ್ ಮಾಡುವ ಆಯ್ಕೆ ನೀಡಿದಾಗ ರಶ್ಮಿಕಾ, ಅಲ್ಲು ಅರ್ಜುನ್ ಅವರನ್ನು ಆಯ್ಕೆ ಮಾಡಿದ್ದಾರೆ. ಅದಾದ ಬಳಿಕ ಯಾರು ಬೇಗನೆ ಒಬ್ಬ ಸೆಲೆಬ್ರಿಟಿಗೆ ಕರೆ ಮಾಡುತ್ತಾರೆ ಎಂಬ ಪ್ರಶ್ನೆ ಎದುರಾದಾಗ ವಿಜಯ್ ದೇವರಕೊಂಡ, ಅಲ್ಲು ಅರ್ಜುನ್ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ನಟ ರಾಕಿಂಗ್ ಸ್ಟಾರ್ ಬಗ್ಗೆಯೂ ಪ್ರಶ್ನೆಯನ್ನು ಶೋನಲ್ಲಿ ಕೇಳಲಾಗಿದೆ.

ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಜಂಟಿಯಾಗಿ ಭಾಗವಹಿಸಿರುವ ‘ಕಾಫಿ ವಿತ್ ಕರಣ್’ ಶೋನ ಹೊಸ ಎಪಿಸೋಡ್ ಅಕ್ಟೋಬರ್ 21ರಂದು ಪ್ರಸಾರ ಆಗಲಿದೆ. ಇದು ಈ ಸೀಸನ್ನಿನ ಎರಡನೇ ಎಪಿಸೋಡ್ ಆಗಿದ್ದು, ಮೊದಲ ಎಪಿಸೋಡಿನಲ್ಲಿ ಸಲ್ಮಾನ್ ಖಾನ್ ಮತ್ತು ಕರಿಶ್ಮಾ ಕಪೂರ್ ಅವರುಗಳು ಭಾಗಿ ಆಗಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language