Hashtagintro

SIR ವೇಳೆ ತಪ್ಪು ಮಾಹಿತಿ ನೀಡಿ ಫಾರಂ 7 ಸಲ್ಲಿಕೆ ಕೇಸ್: 12 ಜನರ ವಿರುದ್ಧದ ಎಫ್‌ಐಆರ್​ಗೆ ಹೈಕೋರ್ಟ್ ತಡೆ

SIR ವೇಳೆ ತಪ್ಪು ಮಾಹಿತಿ ನೀಡಿ ಫಾರಂ 7 ಸಲ್ಲಿಕೆ ಕೇಸ್: 12 ಜನರ ವಿರುದ್ಧದ ಎಫ್‌ಐಆರ್​ಗೆ ಹೈಕೋರ್ಟ್ ತಡೆ

ಬೆಂಗಳೂರು, (ನವೆಂಬರ್ 17): ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ವೇಳೆ ಫಾರ್ಮ್-7 ದುರ್ಬಳಕೆ ಮಾಡಿಕೊಂಡು ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಆರೋಪದ ಮೇಲೆ 12 ಜನರ ವಿರುದ್ಧ ದಾಖಲಾಗಿದ್ದ  ಎಫ್‌ಐಆರ್ ಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.  ಫಾರಂ 7 ಸಂಬಂಧ ತೀರ್ಮಾನದ ದಾಖಲೆ ಸಲ್ಲಿಕೆಗೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದ್ದು, ಅಲ್ಲಿಯವರೆಗೆ ಪೊಲೀಸರ ತನಿಖೆಗೆ ತಡೆಯಾಜ್ಞೆ ನೀಡಿ ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗ್ಡೆ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ.

ನಕಲಿ ಸಹಿ ಬಗ್ಗೆ ದೂರು ನೀಡಲು ಎಲ್ಲರಿಗೂ ಅವಕಾಶ ಇದ್ದು, ಬಿಎನ್ಎಸ್ ಸೆ.217 ಅಡಿ ಸರ್ಕಾರಿ ಅಧಿಕಾರಿ ದೂರು ನೀಡಬೇಕು. ಇಲ್ಲವಾದರೆ ಮ್ಯಾಜಿಸ್ಟ್ರೇಟ್ ಕೇಸ್ ಪರಿಜ್ಞಾನಕ್ಕೆ ತೆಗೆದುಕೊಳ್ಳುವಂತಿಲ್ಲ. ಫಾರಂ 7ಗಳ ಬಗ್ಗೆ ಚುನಾವಣಾ ಆಯೋಗ ತೀರ್ಮಾನಿಸಬೇಕು. ಚುನಾವಣಾ ಆಯೋಗದ ತೀರ್ಮಾನದ ಪರಿಣಾಮ ಕೇಸ್​ನ ಮೇಲಾಗುತ್ತದೆ. ಹೀಗಾಗಿ ಫಾರಂ 7 ಬಗ್ಗೆ ಆಯೋಗದ ತೀರ್ಮಾನವನ್ನು ತಿಳಿಸಲು ಸೂಚಿಸಿದೆ.

ರಾಮಕೃಷ್ಣ , ಯು.ಎಚ್. ಲೋಕೇಶ್, ಹರೀಶ್ ಕುಮಾರ್ ಸಿ ಮತ್ತು ಇತರರ ವಿರುದ್ಧದ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.ಇನ್ನು ಜಿ.ಎಸ್. ವಸಂತ ಲಕ್ಷ್ಮಿ ಮತ್ತು ದೀಪಕ್ ಸಿಂಗ್ ಆರ್ ಅವರ ಅಕ್ಟೋಬರ್ 9 ರಂದು ನೀಡಲಾಗಿದ್ದ ಮಧ್ಯಂತರ ಆದೇಶಗಳನ್ನು ತೆರವುಗೊಳಿಸುವಂತೆ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮುಂದೂಡಿದೆ.

ಪ್ರಕರಣದ ಹಿನ್ನೆಲೆ

ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಉದ್ದೇಶದಿಂದ ತಪ್ಪು ಮಾಹಿತಿ ನೀಡಿ ಸಗಟಾಗಿ ‘ನಮೂನೆ-7’ (Form 7) ಆಕ್ಷೇಪಣಾ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂಬ ದೂರುಗಳ ಆಧಾರದ ಮೇಲೆ ಎಫ್​​ಐಆರ್ ದಾಖಲಿಸಲಾಗಿದ್ದು, ಕೆಲವು ದೂರುಗಳಲ್ಲಿ ಮುಸ್ಲಿಂ ಸಮುದಾಯದವರನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದೂ ಆರೋಪಿಸಲಾಗಿದೆ.

ಮಲ್ಲೇಶ್ವರಂ ಪ್ರಕರಣದಲ್ಲಿ, ಎಂಟು ಮತಗಟ್ಟೆಗಳ ವ್ಯಾಪ್ತಿಯಲ್ಲಿ ಒಟ್ಟು 778 ನಮೂನೆ-7 ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ಜಯನಗರದ ದೂರಿನಲ್ಲಿ ಒಟ್ಟು 5,698 ಅರ್ಜಿಗಳ ಬಗ್ಗೆ ಉಲ್ಲೇಖಿಸಲಾಗಿದ್ದು, ಅವುಗಳಲ್ಲಿ 4,327 ಅರ್ಜಿಗಳು ಗುರಪ್ಪನಪಾಳ್ಯ ವಾರ್ಡ್‌ಗೆ ಸಂಬಂಧಿಸಿವೆ. ಉಳಿದ ಪ್ರಕರಣಗಳು ಯಶವಂತಪುರದ 136 ಮತದಾರರು, ಕೊಡಗಿನ 64 ಮತದಾರರು ಮತ್ತು ಮೈಸೂರಿನ ಮತದಾರರಿಗೆ ಸಂಬಂಧಿಸಿವೆ. ಸುಳ್ಳು ಮಾಹಿತಿ ನೀಡಿಕೆ, ನಕಲಿ ಸಹಿಗಳು ಮತ್ತು ವಂಚನೆ (ಒಬ್ಬರ ಹೆಸರಿನಲ್ಲಿ ಮತ್ತೊಬ್ಬರು ಅರ್ಜಿ ಸಲ್ಲಿಸುವುದು) ನಡೆದಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language