Hashtagintro

Viral: ಹೋಟೆಲ್‌ ರೂಮ್‌ನಲ್ಲಿರುವ ಈ ವಸ್ತುಗಳನ್ನು ಫ್ರೀಯಾಗಿ ತಗೊಂಡು ಹೋಗ್ಬೋದು

Viral: ಹೋಟೆಲ್‌ ರೂಮ್‌ನಲ್ಲಿರುವ ಈ ವಸ್ತುಗಳನ್ನು ಫ್ರೀಯಾಗಿ ತಗೊಂಡು ಹೋಗ್ಬೋದು

ಕೆಲವರಿಗೆ ಕಂಡದೆಲ್ಲಾ ಬೇಕು, ಬಾಯಿ ಬಿಟ್ಟೆ ಕೇಳುತ್ತಾರೆ. ಇನ್ನು, ಕೆಲವರು ಹೋಟೆಲ್ ಗಳಲ್ಲಿ ರೂಮ್ ಮಾಡಿದಾಗ ಅಲ್ಲಿದ್ದ ವಸ್ತುಗಳನ್ನು ಹೇಳದೇನೇ ತೆಗೆದುಕೊಂಡು ಹೋಗ್ತಾರೆ. ಆದರೆ ಹೋಟೆಲ್ ರೂಮ್‌ಗಳಲ್ಲಿರುವ (Hotel room) ಈ ವಸ್ತುಗಳನ್ನು ಆರಾಮಾಗಿ ತೆಗೆದು ಕೊಂಡು ಹೋಗಲು ಅವಕಾಶವಿದೆ. ನೀವು ಬಳಸಿದ ಕೆಲ ವಸ್ತುಗಳನ್ನು ಚೆಕ್ ಔಟ್ ನಂತರ ಎಸೆಯಲಾಗುತ್ತದೆ. ಹೀಗಾಗಿ ರೂಮ್‌ನಲ್ಲಿ ಹಿಡಿದು ಶೌಚಾಲಯದಲ್ಲಿರುವ ಈ ಸಣ್ಣ ಪುಟ್ಟ ವಸ್ತುಗಳನ್ನು ಮನೆಗೆ ತರಬಹುದಾಗಿದೆ.

ಹೋಟೆಲ್‌ನಲ್ಲಿ ಯಾವೆಲ್ಲಾ ವಸ್ತುಗಳನ್ನು ಫ್ರೀಯಾಗಿ ತೆಗೆದುಕೊಂಡು ಹೋಗ್ಬಹುದು?

  •  ಶೌಚಾಲಯದಲ್ಲಿರುವ ಶ್ಯಾಂಪೂ, ಕಂಡಿಷನರ್, ಲೋಷನ್, ಸೋಪ್ ಈ ವಸ್ತುಗಳನ್ನು ನೀವು ತೆಗೆದುಕೊಂಡು ಹೋಗ್ಬಹುದು.
  • ವೈಯುಕ್ತಿಕ ಬಳಕೆಗೆಂದು ಇಡಲಾದ ಟೂತ್‌ಬ್ರಷ್, ಪೇಸ್ಟ್ , ರೇಸರ್, ಬಾಚಣಿಗೆ ಈ ವಸ್ತುಗಳನ್ನು ತೆಗೆದು ಹೋದರೆ ಯಾರು ಪ್ರಶ್ನೆ ಮಾಡಲ್ಲ.
  • ಐಷಾರಾಮಿ ಹೋಟೆಲ್‌ಗಳಲ್ಲಿ ಹೆಚ್ಚಾಗಿ ಯೂಸ್ ಆಂಡ್ ಥ್ರೋ ಚಪ್ಪಲಿಗಳನ್ನು ಇಟ್ಟಿರುತ್ತಾರೆ. ನೀವು ಚಪ್ಪಲಿಯನ್ನು ಬಳಸಿದ್ದರೆ ಚೆಕ್ ಔಟ್ ಬಳಿಕ ಅದನ್ನು ಎಸೆಯಲಾಗುತ್ತದೆ. ಹೀಗಾಗಿ ಈ ಚಪ್ಪಲಿಯನ್ನು ಮನೆಗೆ ತೆಗೆದುಕೊಂಡು ಹೋಗಲು ಅವಕಾಶವಿದೆ.
  • ಹೋಟೆಲ್ ರೂಮ್‌ನಲ್ಲಿ ಇಟ್ಟಿರುವ ಸಿಲ್ಡ್ ಕುಡಿಯುವ ನೀರಿನ ಬಾಟಲಿಗಳು ಸೇರಿವೆ.
  • ಟೀ ಬ್ಯಾಗ್, ಕಾಫಿ ಹಾಗೂ ಸಕ್ಕರೆ ಪ್ಯಾಕೆಟ್‌ಗಳು, ಬಿಸಿ ಚಾಕೊಲೇಟ್ ಪ್ಯಾಕೆಟ್‌ಗಳನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಬಹುದು.

ಇದನ್ನೂ ಓದಿ: ಹೋಟೆಲ್‌ಗಳಲ್ಲಿ ರೂಮ್ ನಂಬರ್ 13 ಇಲ್ಲದಿರುವುದರ ಹಿಂದಿದೆ ಈ ಕಾರಣ

  • ಹೋಟೆಲ್ ಲೋಗೋ ಇರುವ ನೋಟ್‌ಪ್ಯಾಡ್, ಪೆನ್, ಪೆನ್ಸಿಲ್ ಗಳನ್ನು ಆರಾಮಾಗಿ ತೆಗೆದುಕೊಂಡು ಹೋಗಲು ಅವಕಾಶವಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Source: TV9 Kannada Lifestyle

Read full article on TV9 Kannada Lifestyle

Leave a Comment

Your email address will not be published. Required fields are marked *

समाचार की भाषा चुनें / Choose News Language