Hashtagintro

ಈ ಸಿಂಪಲ್‌ ಟಿಪ್ಸ್‌ ಅನುಸರಿಸುವ ಮೂಲಕ ಫ್ರೀಜರ್‌ನಲ್ಲಿ ಅತಿಯಾಗಿ ಐಸ್‌ ಕಟ್ಟಿಕೊಳ್ಳುವುದನ್ನು ತಡೆಯಬಹುದು

ಈ ಸಿಂಪಲ್‌ ಟಿಪ್ಸ್‌ ಅನುಸರಿಸುವ ಮೂಲಕ ಫ್ರೀಜರ್‌ನಲ್ಲಿ ಅತಿಯಾಗಿ ಐಸ್‌ ಕಟ್ಟಿಕೊಳ್ಳುವುದನ್ನು ತಡೆಯಬಹುದು

ಫ್ರೀಜರ್‌ನಲ್ಲಿ (freezer) ಐಸ್‌ ಕಟ್ಟಿಕೊಳ್ಳುವುದು ಸಾಮಾನ್ಯ ಸಮಸ್ಯೆಯಾಗಿದೆ. ಈ ಮಂಜುಗಡ್ಡೆಗಳನ್ನು ಎಷ್ಟು ಸಲ ತೆಗೆದು ಹಾಕಿದರೂ ಪದೇ ಪದೇ ಫ್ರೀಜರ್‌ನಲ್ಲಿ ಐಸ್‌ ಕಟ್ಟಿಕೊಳ್ಳುತ್ತವೆ.  ಈ ಒಂದು ಸಮಸ್ಯೆಯಿಂದ ಶೇಖರಣಾ ಸ್ಥಳ ಕಡಿಮೆಯಾಗುವದಲ್ಲದೆ, ರೆಫ್ರಿಜರೇಟರ್‌ನ ತಂಪಾಗಿಸುವಿಕೆ ಮತ್ತು ಕಾರ್ಯಕ್ಷಮತೆಯ ಮೇಲೂ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲದೆ ವಿದ್ಯುತ್‌ ಬಳಕೆ ಕೂಡ ಹೆಚ್ಚಾಗುತ್ತದೆ. ಹಾಗಾಗಿ ಅನೇಕರು ಫ್ರೀಜರ್‌ನಲ್ಲಿ ಕಟ್ಟಿಕೊಂಡ ಮಂಜುಗಡ್ಡೆಯನ್ನು ಕೆಲವು ಮನೆಮದ್ದುಗಳ ಸಹಾಯದಿಂದ ತೆಗೆದು ಹಾಕುತ್ತಾರೆ. ಆದರೂ ಸಹ ಮಂಜುಗಡ್ಡೆ ಪದೇ ಪದೇ ಕಟ್ಟಿಕೊಳ್ಳುತ್ತಿರುತ್ತವೆ. ಈ ಸಮಸ್ಯೆ ಪದೇ ಪದೇ ಉದ್ಭವಿಸಬಾರದೆಂದರೆ ಈ ಕೆಲವು ಸಿಂಪಲ್‌ ಟಿಪ್ಸ್‌ಗಳನ್ನು ನೀವು ಪಾಲಿಸಬಹುದು.

ಫ್ರೀಜರ್‌ನಲ್ಲಿ ದಪ್ಪ ಮಂಜುಗಡ್ಡೆ ಏಕೆ ರೂಪುಗೊಳ್ಳುತ್ತದೆ?

ಫ್ರೀಜರ್‌ನಲ್ಲಿ ಮಂಜುಗಡ್ಡೆಯ ರಚನೆಗೆ ಸಾಮಾನ್ಯ ಕಾರಣವೆಂದರೆ ತೇವಾಂಶ. ಹೊರಗಿನಿಂದ ಬೆಚ್ಚಗಿನ, ತೇವಾಂಶವುಳ್ಳ ಗಾಳಿಯು ಫ್ರೀಜರ್‌ಗೆ ಪ್ರವೇಶಿಸಿದಾಗ, ಅದರ ತೇವಾಂಶವು ಶೀತ ಮೇಲ್ಮೈಯೊಂದಿಗೆ ಸಂಪರ್ಕಕ್ಕೆ ಬಂದು ಮಂಜುಗಡ್ಡೆಯನ್ನು ರೂಪಿಸುತ್ತದೆ. ಇದು ಹಲವಾರು ಆಗಾಗ್ಗೆ ಬಾಗಿಲು ತೆರೆಯುವುದು, ಬಾಗಿಲನ್ನು ಸರಿಯಾಗಿ ಮುಚ್ಚದಿರುವುದು, ಬಿಸಿ ಆಹಾರವನ್ನು ಸಂಗ್ರಹಿಸುವುದು ಅಥವಾ ಆಹಾರವನ್ನು ಮುಚ್ಚದೆ ಸಂಗ್ರಹಿಸುವುದು ಈ ರೀತಿಯ ಹಲವಾರು ಕಾರಣಗಳಿಂದ ಸಂಭವಿಸುತ್ತವೆ. ಫ್ರೀಜರ್‌ನಲ್ಲಿ ಹೀಗೆ ದಪ್ಪ ಮಂಜುಗಡ್ಡೆ ಸಂಗ್ರಹವಾಗುವುದರಿಂದ ಫ್ರೀಜರ್‌ನಲ್ಲಿ ಶೇಖರಣಾ ಸ್ಥಳ ಕಡಿಮೆಯಾಗುತ್ತದೆ. ಇದಲ್ಲದೆ ಇದು ತಂಪಾಗಿಸುವ ದಕ್ಷತೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ವಿದ್ಯುತ್ ಬಳಕೆಯನ್ನು ಹೆಚ್ಚಿಸುತ್ತದೆ.

ಫ್ರೀಜರ್‌ನಲ್ಲಿ ಐಸ್‌ ಕಟ್ಟಿಕೊಳ್ಳುವುದನ್ನು ತಡೆಯುವುದು ಹೇಗೆ?

ರೆಫ್ರಿಜರೇಟರ್ ಬಾಗಿಲು ಆಗಾಗ್ಗೆ ತೆರೆಯುವುದನ್ನು ತಪ್ಪಿಸಿ:

ಪ್ರತಿ ಬಾರಿ ಬಾಗಿಲು ತೆರೆದಾಗ, ಬೆಚ್ಚಗಿನ ಗಾಳಿ ಒಳಗೆ ಪ್ರವೇಶಿಸುತ್ತದೆ, ಇದರಿಂದಾಗಿ ತೇವಾಂಶವು ಹೆಪ್ಪುಗಟ್ಟಿ ಮಂಜುಗಡ್ಡೆಯಾಗಿ ಬದಲಾಗುತ್ತದೆ. ಹಾಗಾಗಿ ಫ್ರಿಡ್ಜ್‌ ಬಾಗಿಲನ್ನು ಪದೇ ಪದೇ ಓಪನ್‌ ಮಾಡಬೇಡಿ.

ರಬ್ಬರ್‌ ಸೀಲ್ ಸರಿಯಾಗಿ ಇಲ್ಲವೇ ಎಂದು ಪರಿಶೀಲಿಸಿ:

ರೆಫ್ರಿಜರೇಟರ್ ಬಾಗಿಲು ಸರಿಯಾಗಿ ಮುಚ್ಚದಿದ್ದರೆ, ತಂಪಾದ ಗಾಳಿ ಹೊರಹೋಗಬಹುದು ಮತ್ತು ತೇವಾಂಶ ಹೊರಹೋಗಬಹುದು, ಇದರಿಂದಾಗಿ ಹೆಚ್ಚಿನ ಮಂಜುಗಡ್ಡೆ ನಿರ್ಮಾಣವಾಗುತ್ತದೆ. ಗ್ಯಾಸ್ಕೆಟ್ (ರಬ್ಬರ್ ಸೀಲ್) ಅನ್ನು ಸ್ವಚ್ಛವಾಗಿಡಿ ಮತ್ತು ಅಗತ್ಯವಿದ್ದರೆ ಅದನ್ನು ಬದಲಾಯಿಸಿ.

ಆಹಾರ ಪದಾರ್ಥಗಳನ್ನು ಸರಿಯಾಗಿ ಸಂಗ್ರಹಿಸಿ:

ಬಿಸಿ ಆಹಾರಗಳನ್ನು ನೇರವಾಗಿ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಬೇಡಿ, ಅವುಗಳು ಸ್ವಲ್ಪ ತಣ್ಣಗಾದ ಬಳಿಕವೇ ಫ್ರಿಡ್ಜ್‌ನಲ್ಲಿಡಿ. ಜೊತೆಗೆ ತೇವಾಂಶ ಹರಡದಂತೆ ಅವುಗಳನ್ನು ಮುಚ್ಚಿಡಿ. ಇಲ್ಲದಿದ್ದರೆ ಇದು ಫ್ರೀಜರ್‌ನಲ್ಲಿ ಐಸ್‌ ಗಟ್ಟಿಯಾಗಲು ಕಾರಣವಾಗಬಹುದು.

ರೆಫ್ರಿಜರೇಟರ್‌ನಲ್ಲಿ ಹೆಚ್ಚು ವಸ್ತುಗಳನ್ನು ತುಂಬಿಸಬೇಡಿ:

ಗಾಳಿಯ ಹರಿವು ಅಡಚಣೆಯಾದರೆ, ರೆಫ್ರಿಜರೇಟರ್ ಹೆಚ್ಚು ಕೆಲಸ ಮಾಡುತ್ತದೆ ಮತ್ತು ಇದು ಮಂಜುಗಡ್ಡೆ ನಿರ್ಮಾಣವಾಗಲು ಕಾರಣವಾಗುತ್ತದೆ. ಆದ್ದರಿಂದ ಫ್ರಿಡ್ಜ್‌ನಲ್ಲಿ ಅತಿಯಾಗಿ ಆಹಾರ ಪದಾರ್ಥಗಳನ್ನು ಶೇಖರಿಸುವುದನ್ನು ನಿಲ್ಲಿಸಿ.

ಇದನ್ನೂ ಓದಿ: ಬಾಳೆಹಣ್ಣಿನ ಸಿಪ್ಪೆಯನ್ನು ಎಸೆಯಬೇಡಿ, ಅದರಿಂದ ಗಿಡಗಳಿಗಾಗಿ ತಯಾರಿಸಿ ಸಾವಯವ ಗೊಬ್ಬರ

ಡಿಫ್ರಾಸ್ಟ್ ಮೋಡ್‌ ಆನ್‌ ಮಾಡಿ:

ನಿಮ್ಮ ರೆಫ್ರಿಜರೇಟರ್ ಡಿಫ್ರಾಸ್ಟ್ ಮೋಡ್ ಹೊಂದಿದ್ದರೆ, ವಾರಕ್ಕೊಮ್ಮೆ ಅದನ್ನು ಆನ್‌ ಮಾಡಿ. ಇದರಿಂದ ಫ್ರೀಜರ್‌ನಲ್ಲಿ ಐಸ್‌ ಸಂಗ್ರಹವಾಗುವುದನ್ನು ತಡೆಯಬಹುದು.

ಥರ್ಮೋಸ್ಟಾಟ್ ಅನ್ನು ಸರಿಯಾದ ತಾಪಮಾನಕ್ಕೆ ಹೊಂದಿಸಿ:

ತಾಪಮಾನವನ್ನು ತುಂಬಾ ಕಡಿಮೆ ಹೊಂದಿಸುವುದರಿಂದ ಹೆಚ್ಚಿನ ಐಸ್ ರಚನೆಗೆ ಕಾರಣವಾಗಬಹುದು. ಸಾಮಾನ್ಯವಾಗಿ, ಅದನ್ನು 3-5 ಡಿಗ್ರಿ ಸೆಲ್ಸಿಯಸ್‌ಗೆ ಹೊಂದಿಸುವುದು ಮುಖ್ಯ.

ಈ ಸರಳ ಸಲಹೆಗಳನ್ನು ಅನುಸರಿಸುವ ಮೂಲಕ, ಫ್ರೀಜರ್‌ನಲ್ಲಿ ಆಗಾಗ್ಗೆ ಮಂಜುಗಡ್ಡೆ ನಿರ್ಮಾಣವಾಗುವ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language