
ರಾಯಚೂರು, ನವೆಂಬರ್ 15: ಜಿಲ್ಲೆಯಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದೆ. ಹಳ್ಳಿಹಳ್ಳಿಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಕುಡಿಯುವ ನೀರು ಕೊಡಿ ಸ್ವಾಮಿ ಅಂತ ಗ್ರಾಮದ ಜನ ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕಿದ್ದಾರೆ. ಅಲ್ಲೇ ಊಟ ಮಾಡುವ ಮೂಲಕ ಗ್ರಾಮಸ್ಥರು ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಮಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ
ಗಡಿ ಜಿಲ್ಲೆ ರಾಯಚೂರಿನಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಭೀಕರ ಬರಗಾಲ ಹಿನ್ನೆಲೆ ಒಂದು ಕಡೆ ಬೆಳೆ ಒಣಗಿ ಹೋಗುತ್ತಿದ್ದರೆ, ಮತ್ತೊಂದು ಕಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಕಳೆದೊಂದು ತಿಂಗಳಿನಿಂದ ಜಿಲ್ಲೆಯ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಜನರು ಹೋರಾಟಕ್ಕೆ ಇಳಿದಿದ್ದಾರೆ. ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ, ಅಲ್ಲೇ ಊಟ ಮಾಡುವ ಮೂಲಕ ಗ್ರಾಮಸ್ಥರು ವಿನೂತನ ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ಭೀಕರ ಜಲ ಸಂಕಷ್ಟ: ರಾಯಚೂರು, ಕಲಬುರಗಿ, ಬೀದರ್‌ನಲ್ಲಿ ಕುಡಿಯುವ ನೀರಿಗಾಗಿ ಪರದಾಟ
ರಾಯಚೂರು ಮಟ್ಟೂರು ತಾಂಡಾದಲ್ಲಿ ಕಳೆದ ಹಲವು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪ. ಇದರಿಂದ ಆಕ್ರೋಶಗೊಂಡ ತಾಂಡಾದ ಜನರು ಖಾಲಿ ಕೊಡಗಳನ್ನು ಹಿಡಿದು ಗ್ರಾಮ ಪಂಚಾಯಿತಿಗೆ ಆಗಮಿಸಿ ಪ್ರತಿಭಟನೆ ನಡೆಸಿದ್ದಾರೆ.
.liveTvWebbx {
background: #fff;
margin-bottom: 10px;
}
.liveTvWebbx span {
display: flex;
align-items: center;
justify-content: center;
background: #dc0000;
padding: 5px 0;
}
.liveTvWebbx span a {
color: #fff;
font-size: 22px;
display: flex;
align-items: center;
justify-content: center;
font-weight: 600;
line-height: 28px;
text-decoration: none;
}
.liveTvWebbx span a:hover{color:#fff;}
.liveTvWebbx span a svg {
width: 2rem;
height: 2rem;
margin-right: 5px;
display: inline-block;
flex-shrink: 0;
vertical-align: middle;
fill: none;
stroke: #fff;
stroke-width: 2;
stroke-linecap: round;
stroke-linejoin: round;
transform-origin: center;
animation: livePulse 1.3s ease-in-out infinite;
}
@keyframes livePulse {
0% {
transform: scale(1);
opacity: 1;
}
50% {
transform: scale(1.08);
opacity: 1;
}
100% {
transform: scale(1);
opacity: 1;
}
}
.liveTvWebbx iframe,
.liveTvWebbx amp-iframe {
width: 100%; height: auto; aspect-ratio: 16 / 9; display: block; border: none;
}
LIVE TV
document.addEventListener(‘DOMContentLoaded’, function () {
let liveTV = document.querySelector(‘.live-tv-tracking’);
if (liveTV) {
liveTV.addEventListener(‘click’, function () {
if (typeof dataLayer !== ‘undefined’) {
dataLayer.push({
‘event’: ‘article_live_tv_click’,
‘widget_name’: ‘article_live_tv’,
‘click_location’: ‘article’
});
}
});
}
});
ನೀರಿನ ಸಮಸ್ಯೆ ಬಗೆಹರಿಸುವುದಾಗಿ ಪಿಡಿಒ ಭರವಸೆ
ಅಷ್ಟೇ ಅಲ್ಲ, ಮನೆಯಿಂದಲೇ ಬುತ್ತಿ ಕಟ್ಟಿಕೊಂಡು ಬಂದಿದ್ದ ಗ್ರಾಮಸ್ಥರು ಪಂಚಾಯಿತಿ ಆವರಣದಲ್ಲೇ ಊಟ ಮಾಡಿದ್ದಾರೆ. ಬಳಿಕ ಊಟ ಇದೆ, ಅನ್ನ ಇದೆ, ಆದರೆ ಕುಡಿಯುವುದಕ್ಕೆ ನೀರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಕಳೆದ ಒಂದು ತಿಂಗಳುಗಳಿಂದ ನೀರಿನ ಸಮಸ್ಯೆ ಎದುರಾದರೂ ಸ್ಪಂದಿಸದ ಪಿಡಿಒ ವಿರುದ್ಧ ಗ್ರಾಮಸ್ಥರು ಕಿಡಿಕಾರಿದ್ದಾರೆ. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಗ್ರಾಮ ಪಂಚಾಯಿತಿ ಪಿಡಿಒ ಮಟ್ಟೂರು ತಾಂಡಾಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಕುಸಿತ, ಒಳಹರಿವು ಸ್ಥಗಿತ: ಭತ್ತ ಬೆಳೆ ಕೈ ತಪ್ಪುವ ಆತಂಕದಲ್ಲಿ 4 ಜಿಲ್ಲೆಗಳ ರೈತರು
ಇತ್ತ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನಲ್ಲೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಮಾನ್ವಿ ತಾಲ್ಲೂಕಿನ ನಂದಿಹಾಳ, ನಕ್ಕುಂದಿ, ನಸ್ಲಾಪುರ, ಜಾನೇಕಲ್, ಅಮರಾವತಿ ಸೇರಿ ಹತ್ತಾರು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆ ಸ್ಥಳೀಯ ಗ್ರಾಮಸ್ಥರು ಹಳ್ಳಕ್ಕೆ ನೀರು ಹರಿಸಿ ಅಂತ ಹೋರಾಟ ನಡೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Source: TV9 Kannada National
