Hashtagintro

ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅಮೆಜಾನ್ ಭರ್ಜರಿ ಕೊಡುಗೆ: 4 ವರ್ಷಕ್ಕೆ 2 ಲಕ್ಷ ವಿದ್ಯಾರ್ಥಿವೇತನ, ಉಚಿತ ಲ್ಯಾಪ್‌ಟಾಪ್ ಜೊತೆಗೆ ಇಂಟರ್ನ್‌ಶಿಪ್ ಅವಕಾಶ!

ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅಮೆಜಾನ್ ಭರ್ಜರಿ ಕೊಡುಗೆ: 4 ವರ್ಷಕ್ಕೆ 2 ಲಕ್ಷ ವಿದ್ಯಾರ್ಥಿವೇತನ, ಉಚಿತ ಲ್ಯಾಪ್‌ಟಾಪ್ ಜೊತೆಗೆ ಇಂಟರ್ನ್‌ಶಿಪ್ ಅವಕಾಶ!

ಪ್ರತಿಭಾನ್ವಿತ ಹಾಗೂ ಆರ್ಥಿಕವಾಗಿ ಹಿಂದುಳಿದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪ್ರಮುಖ ಇ-ಕಾಮರ್ಸ್ ದೈತ್ಯ ಅಮೆಜಾನ್ ಇಂಡಿಯಾ (Amazon India) ಭರ್ಜರಿ ಸಿಹಿಸುದ್ದಿ ನೀಡಿದೆ. ಫೌಂಡೇಶನ್ ಫಾರ್ ಎಕ್ಸಲೆನ್ಸ್ (FFE) ಸಹಯೋಗದೊಂದಿಗೆ ‘ಅಮೆಜಾನ್ ಫ್ಯೂಚರ್ ಎಂಜಿನಿಯರ್ ಸ್ಕಾಲರ್‌ಶಿಪ್ 2026’ (Amazon Future Engineer Scholarship 2026) ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯಡಿ ಆಯ್ಕೆಯಾಗುವ ಅರ್ಹ ವಿದ್ಯಾರ್ಥಿಗಳಿಗೆ ನಾಲ್ಕು ವರ್ಷಗಳ ಕಾಲ ಆರ್ಥಿಕ ನೆರವಿನ ಜೊತೆಗೆ ಉಚಿತ ಲ್ಯಾಪ್‌ಟಾಪ್, ತಾಂತ್ರಿಕ ತರಬೇತಿ ಹಾಗೂ ಅಮೆಜಾನ್‌ನಲ್ಲಿ ಇಂಟರ್ನ್‌ಶಿಪ್ ಮಾಡುವ ಸುವರ್ಣಾವಕಾಶ ಸಿಗಲಿದೆ. ಆಸಕ್ತ ವಿದ್ಯಾರ್ಥಿಗಳು ನವೆಂಬರ್ 30 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಈ ವಿದ್ಯಾರ್ಥಿವೇತನದ ಪ್ರಮುಖ ಪ್ರಯೋಜನಗಳು:

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 50,000ರೂ. ದಂತೆ, ನಾಲ್ಕು ವರ್ಷಗಳ ಎಂಜಿನಿಯರಿಂಗ್ ಕೋರ್ಸ್ ಪೂರ್ಣಗೊಳ್ಳುವವರೆಗೆ ಒಟ್ಟು 2,00,000 ರೂ. ವಿದ್ಯಾರ್ಥಿವೇತನ ಸಿಗಲಿದೆ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚವನ್ನು ಭರಿಸಲು ದೊಡ್ಡ ಮಟ್ಟದಲ್ಲಿ ನೆರವಾಗಲಿದೆ. ಆಯ್ಕೆಯಾದ ಪ್ರಥಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತಾಂತ್ರಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಅನುಕೂಲವಾಗುವಂತೆ ಉಚಿತ ಲ್ಯಾಪ್‌ಟಾಪ್ ವಿತರಿಸಲಾಗುವುದು. ಕೇವಲ ಹಣಕಾಸಿನ ನೆರವಿಗೆ ಸೀಮಿತವಾಗದೆ, ಅಮೆಜಾನ್ ಎಂಜಿನಿಯರ್‌ಗಳಿಂದ ನೇರ ಮಾರ್ಗದರ್ಶನ (Mentorship), ತಾಂತ್ರಿಕ ಬೂಟ್‌ಕ್ಯಾಂಪ್‌ಗಳು, ವೆಬಿನಾರ್‌ಗಳು ಹಾಗೂ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರಗಳನ್ನು ಆಯೋಜಿಸಲಾಗುವುದು. ಎಂಜಿನಿಯರಿಂಗ್‌ನ ಎರಡನೇ ವರ್ಷ ಪೂರ್ಣಗೊಳಿಸಿದ ನಂತರ, ಅರ್ಹ ವಿದ್ಯಾರ್ಥಿಗಳಿಗೆ ಅಮೆಜಾನ್ ಕಂಪನಿಯಲ್ಲಿ 8 ವಾರಗಳ ಪಾವತಿಸಿದ ಇಂಟರ್ನ್‌ಶಿಪ್ ಮಾಡುವ ಅವಕಾಶವನ್ನೂ ಕಲ್ಪಿಸಲಾಗುತ್ತದೆ.

ಇದನ್ನೂ ಓದಿ: 68ರ ವಯಸ್ಸಿನಲ್ಲೂ ಕಲಿಕೆಯ ಉತ್ಸಾಹ; ನಿವೃತ್ತ ಅಧಿಕಾರಿ ಈಗ ಸೈಕಾಲಜಿ ಸ್ಟೂಡೆಂಟ್!

ಅರ್ಜಿ ಸಲ್ಲಿಸಲು ಯಾರು ಅರ್ಹರು?

ದೇಶಾದ್ಯಂತ ಮಾನ್ಯತೆ ಪಡೆದ ಕಾಲೇಜುಗಳಲ್ಲಿ ಪದವಿಪೂರ್ವ (UG) ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯ್ಕೆಯಲ್ಲಿ ಈ ಕೆಳಗಿನವರಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ:

  • ಕೋರ್ಸ್: ಕಂಪ್ಯೂಟರ್ ಸೈನ್ಸ್ (CS), ಮಾಹಿತಿ ತಂತ್ರಜ್ಞಾನ (IT) ಅಥವಾ ಸಂಬಂಧಿತ ಎಂಜಿನಿಯರಿಂಗ್ ವಿಭಾಗಗಳಲ್ಲಿ ಅಧ್ಯಯನ ಮಾಡುತ್ತಿರಬೇಕು.
  • ಆದಾಯ ಮಿತಿ: ಕುಟುಂಬದ ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಕಡಿಮೆ ಇರಬೇಕು.
  • ಪ್ರವೇಶಾತಿ: ಮೆರಿಟ್ ಪ್ರವೇಶ ಪರೀಕ್ಷೆ ಅಥವಾ ಸರ್ಕಾರಿ ಕೌನ್ಸೆಲಿಂಗ್ ಮೂಲಕ ಎಂಜಿನಿಯರಿಂಗ್ ಸೀಟು ಪಡೆದಿರಬೇಕು.
  • ಮಹಿಳಾ ವಿದ್ಯಾರ್ಥಿಗಳಿಗೆ ಆದ್ಯತೆ: ಪ್ರಥಮ ವರ್ಷದಲ್ಲಿ ಓದುತ್ತಿರುವ ಪ್ರತಿಭಾನ್ವಿತ ಹಾಗೂ ಆರ್ಥಿಕವಾಗಿ ಹಿಂದುಳಿದ ಮಹಿಳಾ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಆಯ್ಕೆಯಲ್ಲಿ ವಿಶೇಷ ಆದ್ಯತೆ ನೀಡಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಹಾಗೂ ಆಸಕ್ತ ವಿದ್ಯಾರ್ಥಿಗಳು ಫೌಂಡೇಶನ್ ಫಾರ್ ಎಕ್ಸಲೆನ್ಸ್ (FFE) ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಕೊನೆಯ ಕ್ಷಣದ ತಾಂತ್ರಿಕ ತೊಂದರೆಗಳನ್ನು ತಪ್ಪಿಸಲು ನವೆಂಬರ್ 30 ರ ಕೊನೆಯ ದಿನಾಂಕಕ್ಕೂ ಮುನ್ನವೇ ಅರ್ಜಿ ಸಲ್ಲಿಸುವುದು ಉತ್ತಮ.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language