Hashtagintro

ಕ್ಯಾನ್ವಾ ಸಂಸ್ಥೆಯಿಂದ ಭಾರೀ ಉದ್ಯೋಗ ಕಡಿತ; ಶೇ. 22ರಷ್ಟು ಉದ್ಯೋಗಿಗಳ ಮೇಲೆ ಪರಿಣಾಮ

ಕ್ಯಾನ್ವಾ ಸಂಸ್ಥೆಯಿಂದ ಭಾರೀ ಉದ್ಯೋಗ ಕಡಿತ; ಶೇ. 22ರಷ್ಟು ಉದ್ಯೋಗಿಗಳ ಮೇಲೆ ಪರಿಣಾಮ

ಸಿಡ್ನಿ, ನವೆಂಬರ್ 4: ವಿಶ್ವದಾದ್ಯಂತ ಜನಪ್ರಿಯವಾಗಿರುವ ಗ್ರಾಫಿಕ್ ಡಿಸೈನ್ ಪ್ಲಾಟ್‌ಫಾರ್ಮ್ ಕ್ಯಾನ್ವಾ (Canva), ತನ್ನ ವ್ಯವಹಾರದಲ್ಲಿ ಮರುರಚನೆ (Restructuring) ಮಾಡುವ ಸಲುವಾಗಿ ಭಾರಿ ಪ್ರಮಾಣದ ಉದ್ಯೋಗ ಕಡಿತವನ್ನು ಘೋಷಿಸಿದೆ. ಆಸ್ಟ್ರೇಲಿಯಾ ಮೂಲದ ಈ ಕಂಪನಿಯು ತನ್ನ 13 ವರ್ಷಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಈ ಕಠಿಣ ನಿರ್ಧಾರ ಕೈಗೊಂಡಿದೆ.

ಕಂಪನಿಯ ಗ್ಲೋಬಲ್ ವರ್ಕ್​ಫೋರ್ಸ್​ನ ಶೇ. 22ರಷ್ಟಿರುವ ಒಟ್ಟು 1,271 ಉದ್ಯೋಗಿಗಳು ಈ ಪುನರ್ರಚನೆಯಿಂದ ಬಾಧಿತರಾಗಲಿದ್ದಾರೆ. ಇವರಲ್ಲಿ ಕೆಲವು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದರೆ, ಇನ್ನು ಕೆಲವರದ್ದು ಸ್ಥಾನಪಲ್ಲಟವಾಗಲಿದೆ. ಕೆಲವರನ್ನು ಕೇಂದ್ರ ಕಚೇರಿಗಳಿಗೆ ಸ್ಥಳಾಂತರಗೊಳ್ಳುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: ಬಸ್, ರೈಲಿನಂತೆ ವಿಮಾನದಲ್ಲೂ ‘ಹಾರ್ನ್’ ಇದೆಯಾ? ಯಾರಿಗೂ ಗೊತ್ತಿರದ ಏರ್‌ಲೈನ್ಸ್‌ಗಳ ಆಸಕ್ತಿಕರ ವಿಷಯ

ಕ್ಯಾನ್ವಾದ ಈ ನಿರ್ಧಾರಕ್ಕೆ ಕಾರಣವೇನು?

ಕಳೆದ ಒಂದು ದಶಕದಿಂದ ನಿರಂತರವಾಗಿ ಬೆಳೆಯುತ್ತಿದ್ದ ಕ್ಯಾನ್‌ವಾ ಸಂಸ್ಥೆಯ ಬೆಳವಣಿಗೆಯ ವೇಗದಲ್ಲಿ ಇಳಿಕೆಯಾಗಿರುವುದು ಮತ್ತು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದಿಂದ ಮಾರುಕಟ್ಟೆಯಲ್ಲಿ ಉಂಟಾಗಿರುವ ಬದಲಾವಣೆಗಳಿಗೆ ಅನುಗುಣವಾಗಿ ತನ್ನ ಕಾರ್ಯಾಚರಣೆಯನ್ನು ಸರಳಗೊಳಿಸಲು ಕಂಪನಿಯು ಈ ಕ್ರಮ ಕೈಗೊಂಡಿದೆ.

ಉದ್ಯೋಗ ಬಿಟ್ಟುಹೋಗುವವರಿಗೆ ಪರಿಹಾರ ಪ್ಯಾಕೇಜ್

ಕೆಲಸ ಕಳೆದುಕೊಳ್ಳುವ ಉದ್ಯೋಗಿಗಳಿಗೆ ನೆರವಾಗಲು ಕ್ಯಾನ್‌ವಾ ಸಂಸ್ಥೆಯು ಅತ್ಯುತ್ತಮ ಪರಿಹಾರ ಪ್ಯಾಕೇಜ್ ಘೋಷಿಸಿದೆ. ಇದರಡಿ ಕನಿಷ್ಠ 6 ತಿಂಗಳ ವೇತನ, ಮುಂದಿನ 12 ತಿಂಗಳ ಆರೋಗ್ಯ ವಿಮೆ ಸೌಲಭ್ಯ, ವೃತ್ತಿ ಬೆಂಬಲ (Career support) ಹಾಗೂ ತಾವು ಬಳಸುತ್ತಿದ್ದ ಮ್ಯಾಕ್‌ಬುಕ್ (MacBooks) ಲ್ಯಾಪ್‌ಟಾಪ್‌ಗಳನ್ನು ಅವರೇ ಇಟ್ಟುಕೊಳ್ಳಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಟಾಟಾ ಗ್ರೂಪ್ ವಿವಾದ ಸೌಹಾರ್ದಯುತವಾಗಿ ಬಗೆಹರಿಯಬೇಕು, ಸರ್ಕಾರದ ಮಧ್ಯಪ್ರವೇಶದ ಅಗತ್ಯವಿಲ್ಲ: ನಿರ್ಮಲಾ ಸೀತಾರಾಮನ್

ಸಿಇಒ ಸ್ಪಷ್ಟನೆ: ಇದು ಕಂಪನಿಯ ಇತಿಹಾಸದಲ್ಲಿಯೇ ಅತ್ಯಂತ ಕಠಿಣ ಕ್ಷಣ ಎಂದು ಕ್ಯಾನ್‌ವಾ ಮುಖ್ಯಸ್ಥೆ ಮತ್ತು ಸಹ-ಸಂಸ್ಥಾಪಕಿ ಮೆಲಾನಿ ಪರ್ಕಿನ್ಸ್ (Melanie Perkins) ಉದ್ಯೋಗಿಗಳಿಗೆ ಕಳುಹಿಸಿರುವ ಆಂತರಿಕ ಇಮೇಲ್‌ನಲ್ಲಿ ತಿಳಿಸಿದ್ದಾರೆ. ಮಾರುಕಟ್ಟೆಯಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಿರಲು ಮತ್ತು ಸಣ್ಣ ಹಾಗೂ ಪರಿಣಾಮಕಾರಿ ತಂಡಗಳನ್ನು ರೂಪಿಸಲು ಈ ಪುನರ್ರಚನೆ ಅನಿವಾರ್ಯವಾಗಿತ್ತು ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source: TV9 Kannada Business

Read full article on TV9 Kannada Business

Leave a Comment

Your email address will not be published. Required fields are marked *

समाचार की भाषा चुनें / Choose News Language