
ನವದೆಹಲಿ, ನವೆಂಬರ್ 8: ಜೊಮಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ ಅವರ ಹೆಲ್ತ್-ಟೆಕ್ ಸಂಸ್ಥೆಯು ಟೆಂಪಲ್ ಎನ್ನುವ ಸಾಧನವೊಂದನ್ನು ಪರಿಚಯಿಸಿದೆ. 85,000 ರೂ ಬೆಲೆಯ ಈ ಸಾಧನವು ಈಗಾಗಲೇ ಚಾಲ್ತಿಯಲ್ಲಿರುವ ಬೇರೆ ಬೇರೆ ಕಂಪನಿಗಳ ಸಾಧನಗಳಿಗಿಂತ ಬಹಳ ಹೆಚ್ಚಿನ ಬೆಲೆ ಹೊಂದಿದೆ. ಆದರೆ, ಫಿಟ್ನೆಸ್ ಟ್ರ್ಯಾಕರ್ ಮಾತ್ರವಲ್ಲ, ಇನ್ನೂ ಹೆಚ್ಚಿನ ಗಂಭೀರವಾದ ಮತ್ತು ಉಪಯುಕ್ತವಾದ ಫೀಚರ್ಸ್ ಅನ್ನು ಟೆಂಪಲ್ ಒಳಗೊಂಡಿದೆ ಎಂದು ಕಂಪನಿ ಹೇಳಿಕೊಂಡಿದೆ. ಒಂದು ವರ್ಗದ ವೈದ್ಯಕೀಯ ಸಮುದಾಯವು ಟೆಂಪಲ್ನ ಕೆಲ ಫೀಚರ್ಸ್ ಮತ್ತು ದುಬಾರಿ ಬೆಲೆಯನ್ನು ಪ್ರಶ್ನಿಸಿದೆ. ಇದು ಈಗ ಟೆಂಪಲ್ ಕಂಪನಿ ಸಂಸ್ಥಾಪಕ ದೀಪಿಂದರ್ ಗೋಯಲ್ ಮತ್ತು ಕೆಲ ವೈದ್ಯರ ಮಧ್ಯೆ ಏಟು ತಿರುಗೇಟು ಎನ್ನುವಂತಹ ಹೇಳಿಕೆ ಪ್ರತಿಹೇಳಿಕೆಗಳು ಬರುತ್ತಿವೆ. ಆನ್ಲೈನ್ಲಲ್ಲಿ ಚರ್ಚೆಗಳು ನಡೆದಿವೆ.
ಪ್ರಖ್ಯಾತ ಹೆಪಟಾಲಜಿಸ್ಟ್ ಡಾ. ಸಿರಿಯಾಕ್ ಅಬ್ಬಿ ಫಿಲಿಪ್ಸ್ (TheLiverDoc) ಸೇರಿದಂತೆ ಹಲವು ವೈದ್ಯರು ಈ ಸಾಧನವನ್ನು ತೀವ್ರವಾಗಿ ಖಂಡಿಸಿದ್ದಾರೆ. ಡಾ. ಲಿವರ್ಡಾಕ್ ಅವರು, “ಹಣೆಯ ಮೇಲ್ಭಾಗದ ರಕ್ತನಾಳಗಳ ಚಲನೆಯನ್ನು ಅಳೆದು ಮೆದುಳಿನ ಆಂತರಿಕ ರಕ್ತಸಂಚಾರವನ್ನು (Cerebral Blood Flow) ಕಂಡುಹಿಡಿಯಲು ಸಾಧ್ಯವಿಲ್ಲ. ಇದಕ್ಕೆ ಯಾವುದೇ ಪೀರ್-ರಿವ್ಯೂಡ್ ವೈಜ್ಞಾನಿಕ ಆಧಾರಗಳಿಲ್ಲ. ಇದು ಸೈಂಟಿಫಿಕ್ ಫ್ರಾಡ್ (ವಿಜ್ಞಾನದ ಹೆಸರಿನ ವಂಚನೆ)” ಎಂದು ಆರೋಪಿಸಿದ್ದಾರೆ.
ಎಐಐಎಂಎಸ್ (AIIMS) ವೈದ್ಯರು ಸೇರಿದಂತೆ ನರರೋಗ ತಜ್ಞರು, ಕ್ಲಿನಿಕಲ್ ಸಾಕ್ಷ್ಯಗಳಿಲ್ಲದೆ ಪ್ರಮುಖ ನರರೋಗ ಅಥವಾ ಜೈವಿಕ ವಯಸ್ಸಾಗುವಿಕೆಯ ಮುನ್ಸೂಚನೆ ನೀಡುವುದು ಅಸಾಧ್ಯ ಎಂದು ಎಚ್ಚರಿಸಿದ್ದಾರೆ. ಲಿವರ್ಡಾಕ್ ಅವರಂತೂ ಟೆಂಪಲ್ ಸಾಧನವನ್ನು ಒಂದು ಸ್ಕ್ಯಾಮ್ ಎಂದು ಕರೆದು ಹರಿಹಾಯ್ದಿದ್ದಾರೆ.
ಇದನ್ನೂ ಓದಿ: ಹಳೆಯ ಫೋನ್ಗಳಲ್ಲಿ ಬ್ಯಾಟರಿ ಉಬ್ಬುವುದೇಕೆ? ಇದು ಎಷ್ಟು ಅಪಾಯಕಾರಿ?
ದೀಪಿಂದರ್ ಗೋಯಲ್ ಪ್ರತಿಕ್ರಿಯೆಗಳು
ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಈ ವಿವಾದ ಬಿಸಿಯೇರಿದಾಗ ದೀಪಿಂದರ್ ಗೋಯಲ್ ತೀವ್ರವಾಗಿ ತಿರುಗೇಟು ನೀಡಿದರು. ವೈದ್ಯಕೀಯ ಸಮುದಾಯವು ಸುಮ್ಮನೆ ಆಕ್ರೋಶ ಹೊರಹಾಕುತ್ತಿದೆ ಎಂದು ಒಂದು ವಿಸ್ತೃತ ಪೋಸ್ಟ್ ಮೂಲಕ ಬೇಸರ ಹೊರಹಾಕಿದರು.
ವೈದ್ಯರ ಆಕ್ಷೇಪಣೆಗಳಿಗೆ ಪ್ರತಿಕ್ರಿಯಿಸುತ್ತಾ, “ನಮ್ಮ ವಿಜ್ಞಾನದ ಬಗ್ಗೆ ನಮಗೆ ನಂಬುಗೆ ಇದೆ. ಈ ಉತ್ಪನ್ನವು ಅದರ ಬೆಲೆಗೆ ಯೋಗ್ಯವಾಗಿದೆ ಎನಿಸುತ್ತದೆ. ಸಾರ್ವಜನಿಕರು ಇದರ ಯೋಗ್ಯತೆಯನ್ನು ನಿರ್ಧರಿಸುತ್ತಾರೆ” ಎಂದು ವ್ಯಂಗ್ಯವಾಡಿದ್ದರು.
ದೀಪಿಂದರ್ ಗೋಯಲ್ ಅವರ ಪೋಸ್ಟ್
Dear Concerned Indian Doctors,
I see your rage against Temple on X. I have a few points
to make:1. First and foremost, a business lesson: if Temple were a scam, and any of what we said weren’t true, people would know it in just a few days of using Temple. We have 14-day, no-questions-asked returns (which even Apple doesn’t offer in India). If the product doesn’t work, it fails out of the gate and the company dies before recovering a tenth of its R&D.
2. We have already spent $30m building Temple, $20m out of which is my own money. Selling a few thousand devices recovers a small fraction of this investment. A scam that pays nothing is not a scam anyone would run.
3. I left the Eternal CEO role to chase purpose with Temple. This is not about money. I have enough of it to last for generations. My incentives are fully aligned with getting the science right. I am not staking a reputation earned over 20 years on making a quick buck.
4. Our employees bought into our round a few months ago. The round we’re raising now is mostly our customers. Scams don’t build that cap table.
5. Most wearable companies start with internal studies. Whoop shipped its band in 2015, and the first published validation followed a few years later. We hold ourselves to a higher standard; pre-prints are a step prior to peer reviewed publications, and they are coming up.
6. At some point you have to stick your neck out and say: we believe in our science, and the product is now valuable enough for people to pay for and use. We believe we are there. More validation continues in public.
7. We are confident that we are building something that the world is going to be positively astonished with. We stand by our science and our methods. Each of our claims is easily verifiable by individuals and institutions alike, and you will see a lot of independent studies come up on their own when the device becomes available to use.
Last but not the least, the most ground breaking features in Temple are not even public yet. And some of them, thankfully, have nothing to do with doctors
Hope this addresses some or all of your concerns. If not, keep raging
— Deepinder Goyal (@deepigoyal) November 5, 2026
ಟೆಂಪಲ್ ಸಾಧನದ ಮೂಲಕ ತಮಗೆ ಹಣ ಮಾಡುವ ಉದ್ದೇಶ ಇಲ್ಲ. ತಮ್ಮ ಬಳಿ ಹಲವು ತಲೆಮಾರುಗಳಿಗೆ ಆಗುಷ್ಟು ಹಣ ಇದೆ. ಈ ಸಾಧನವನ್ನು ತಯಾರಿಸಲೆಂದು ತಾನು ಜೊಮಾಟೊವನ್ನು ಬಿಟ್ಟು ಬಂದಿದ್ದೇನೆ. ಇದರ ಆರ್ ಅಂಡ್ ಡಿ ಗಾಗಿ ಸಾಕಷ್ಟು ಹಣ ವ್ಯಯಿಸಿದ್ದೇವೆ. ಟೆಂಪಲ್ ಸಾಧನ ಚೆನ್ನಾಗಿಲ್ಲದಿದ್ದರೆ ಅಥವಾ ಉಪಯುಕ್ತವಿಲ್ಲದಿದ್ದರೆ ಜನರು ಖರೀದಿಸುವುದಿಲ್ಲ. ಕೆಲವರು ಆರೋಪಿಸುವಂತೆ ಇದು ಯಾವುದೋ ಸ್ಕ್ಯಾಮ್ ಅಲ್ಲ ಎಂದು ದೀಪಿಂದರ್ ಗೋಯಲ್ ಹೇಳಿದರು.
ಇದಕ್ಕೆ ಲಿವರ್ಡಾಕ್ ಹಾಗೂ ಇತರ ಕೆಲ ವೈದ್ಯರು ಆನ್ಲೈನ್ನಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಟೆಂಪಲ್ನದ್ದು ಕೆಟ್ಟ ವಿಜ್ಞಾನ. ಯಾವುದೇ ಕ್ಲಿನಿಕಲ್ ಟ್ರಯಲ್ ನಡೆದಿಲ್ಲ. ಇದು ವಂಚನೆ. ದೀಪಿಂದರ್ ಮತ್ತವರ ತಂಡ ಎಷ್ಟು ದಿನ ಜನರನ್ನು ಯಾಮಾರಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಲಿವರ್ ಡಾಕ್ ಅವರ ಪೋಸ್ಟ್
The founder of the wearable device Temple, Mr. Deepinder Goyal (who has blocked me on Twitter) has now put out an official statement regarding concerns raised by the medical community on the said device being a scam.
As expected, he has written a word salad. This man has provided no real evidence or proof that his device, which he is selling for INR 85,000/- can measure and interpret brain flow from a superficial artery (superficial temporal artery – which is an extracranial artery – meaning a blood vessel placed entirely outside the skull, supplying blood to the side of the face, temple, and scalp regions).
His own Science Lead (Avi Roy) has accepted that the fact that their device is not yet proven to measure brain flow or “entropy” as they claim on their website and additionally, has directly addressed concerns of poor methodology as well as statisitical misrepresentation, without respond to clear evidence of data falsification in their pre-print papers.
Other wearables like Whoop (which he cited) measured and validated exactly what the wearable can measure within limits of human anatomy and physiology. Temple is overdoing it and defrauding its potential customers. The device can only measure blood flow and flushing to the face in humans and has ansolutely NOTHING to do with the brain as they claim. This is the issue, not what can happen in the future. The device itself fails its primary objective.
There is no our science and your science. But there is bad science, fringe science and science fraud and Team Temple, embraced all of these.
Temple device is a scam. There is no doubt about it. The question is however, how long can this man and his team keep defrauding people under the garb of “we are spending millions for you” or “we are trying our best” or “we are taking the risk” kind of responses?
These farts in the windtunnel responses are not what is expected from a company who’s website claims “solid science”. There is solid fraud though – pathetic little businessmen.
— TheLiverDoc
(@theliverdoc) November 5, 2026
ಇದರ ಮಧ್ಯೆ ದೀಪಿಂದರ್ ಗೋಯಲ್ ಅವರು ವೈದ್ಯರಿಗೆ ಕ್ಷಮೆಯಾಚಿಸಿದ್ದಾರೆ. “ವೈದ್ಯರನ್ನು ಅಥವಾ ವೈದ್ಯಕೀಯ ರಂಗವನ್ನು ಕೀಳಾಗಿ ಕಾಣುವುದು ನನ್ನ ಉದ್ದೇಶವಾಗಿರಲಿಲ್ಲ. ವೈದ್ಯರ ಕಾಳಜಿಗಳನ್ನು ಗೌರವಿಸುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
ಲಿವರ್ಡಾಕ್ ಅವರ ಪೋಸ್ಟ್
Deepu: Guys! We made a wearable that can track your brain activity in real time! Just place it on your temple.
Doctors: Wow! Damn cool bro. Show us how it works! We are interested!Deepu: Ehhh…why you raging!!?? It’s actually a fitness tracker.
Doctors: Oh! That’s ok. We anyway need one from India! All the ones now are by the West! Go India! How does it stack up to the current cheaper validated wearables though?Deepu:
— TheLiverDoc
(@theliverdoc) November 6, 2026
ಉಪಕರಣದ ಸಮರ್ಥನೆ: ಕ್ಷಮೆ ಕೋರಿದ ನಂತರವೂ ಉಪಕರಣದ ವಿಜ್ಞಾನವನ್ನು ಗೋಯಲ್ ಬಲವಾಗಿ ಸಮರ್ಥಿಸಿಕೊಂಡರು. “ಟೆಂಪಲ್ ಎಂಬುದು ವೈದ್ಯಕೀಯ ಸಾಧನವಲ್ಲ (Not a medical device), ಇದು ಕೇವಲ ಫಿಟ್ನೆಸ್ ಮತ್ತು ವೆಲ್ನೆಸ್ (Fitness & Wellness) ಟ್ರ್ಯಾಕರ್. ಆದ್ದರಿಂದ ಇದಕ್ಕೆ ಕ್ಲಿನಿಕಲ್ ಟ್ರಯಲ್ ನಿಯಮಗಳು ಅನ್ವಯಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
ಡಾ. ರಿಷಬ್ ಜೈನ್ ಅವರ ಪೋಸ್ಟ್
Dear Temple Team,
Doctors are asking for scientific evidence, not your financial history, personal sacrifices, or business credentials. Stop calling legitimate scientific scrutiny “rage.”
You have responded to questions about medical accuracy with investment figures, return policies, personal reputation, and promises of future studies. None of these constitutes scientific validation.
A few simple points:
1.A 14-day return policy is not scientific validation. Patients can feel better on placebo treatments too. Subjective satisfaction cannot establish medical accuracy.
2.Spending $30 million doesn’t prove efficacy. Medical history is full of expensive technologies that failed rigorous testing.
3.Personal reputation is not evidence. Science doesn’t become more credible because a successful entrepreneur believes in it.
4.Customer investment is not independent validation. Financial confidence and scientific credibility are two different things.
5.Promising future publications doesn’t validate present claims. If you make health-related claims today, doctors are justified in asking for evidence today.
6.Individual experiences cannot replace properly designed validation studies. We need accuracy, reproducibility, clinically meaningful outcomes, and independent testing.
And one final point:
Doctors are not against innovation. We are against asking the public to trust medical claims before the evidence is available.
If Temple delivers what it promises, doctors will be among its biggest supporters.
But science is not a popularity contest, and criticism is not “rage.”
You cannot answer questions about scientific evidence with a balance sheet, a biography, and emojis.
Publish the data. Let independent researchers examine it. Let the evidence speak.
That’s all we’re asking.
@theliverdoc
— Dr Rishabh Jain (@DrRishabhOnco) November 5, 2026
ದೀಪಿಂದರ್ ಅವರ ಕ್ಷಮೆಯಾಚನೆಯ ಪೋಸ್ಟ್
Apologies where they are due: last night, I should not have bucketed all Indian doctors into one single box. We work with so many of them. Even my elder brother is one of them.
All my emotion last night was directed at a few influencer doctors, who are more influencers than doctors. They did not read our research in detail, and spread twisted facts to call something new a scam. They get views by piling on us. They wouldn’t do that to a startup doing the same thing from some other first-time founder, because it would not get them views.
That’s actually more a reflection of their petty mindset, than other doctors, our country, or our team.
Happy Diwali everyone! Have a good one. Keep building. We have a long way to go.
— Deepinder Goyal (@deepigoyal) November 6, 2026
ಇದನ್ನೂ ಓದಿ: ಭಾರತದಲ್ಲಿ ಬೆಳೆಯುತ್ತಿರುವ ಸೆಮಿಕಂಡಕ್ಟರ್ ಕ್ಷೇತ್ರ; ಸೆಮಿಕಾನ್ 2.0 ವೆಬ್ ಅಪ್ಲಿಕೇಶನ್ ಪೋರ್ಟಲ್ ಲೋಕಾರ್ಪಣೆ
‘ಟೆಂಪಲ್’ ಉಪಕರಣದ ಪ್ರಮುಖ ಫೀಚರ್ಸ್
ಕಂಪನಿ ಹೇಳಿಕೊಂಡ ಪ್ರಕಾರ ಟೆಂಪಲ್ ಸಾಧನ ಹಾಗು ಅದರಲ್ಲಿರುವ ಫೀಚರ್ಸ್ ಆಕರ್ಷಕ ಎನಿಸುತ್ತವೆ. ಈ ಸಾಧನವನ್ನು ಕಣ್ಣು ಮತ್ತು ಕಿವಿ ಮಧ್ಯೆ ಇರುವ ಹಣೆ ಭಾಗದಲ್ಲಿ ಅಂಟಿಸಬಹುದು. ಇದರ ಪ್ರಮುಖ ಫೀಚರ್ಸ್ ಇಂತಿವೆ:
- ರೂಮ್-ಡೆಫ್ (Room-Deaf) ವಾಯ್ಸ್ ಎಐ ಕಂಪಾನಿಯನ್: ಸಾಮಾನ್ಯ ಸ್ಮಾರ್ಟ್ಫೋನ್ ಅಥವಾ ಇಯರ್ಫೋನ್ಗಳಲ್ಲಿರುವಂತೆ ಇದರಲ್ಲಿ ಮೈಕ್ರೋಫೋನ್ (Microphone) ಇರುವುದಿಲ್ಲ. ಬದಲಿಗೆ, ಬಳಕೆದಾರರು ಮಾತನಾಡುವಾಗ ಉಂಟಾಗುವ ಮೂಳೆಯ ಶಬ್ದದ ಕಂಪನಗಳನ್ನು (Vibrations) ಸಂವೇದಕಗಳ (Sensors) ಮೂಲಕ ಗ್ರಹಿಸುತ್ತದೆ. ಇದರಿಂದಾಗಿ ಸುತ್ತಮುತ್ತಲಿನ ಶಬ್ದಗಳು ಅಥವಾ ಇತರರ ಧ್ವನಿಯನ್ನು ಕಡೆಗಣಿಸಿ (Room-Deaf), ಕೇವಲ ಧರಿಸಿದ ವ್ಯಕ್ತಿಯ ಧ್ವನಿಯನ್ನು ಮಾತ್ರ ನೆಟ್ವರ್ಕ್ ಗ್ರಹಿಸುತ್ತದೆ.
- ಎಂಟ್ರೋಪಿ ಬಯೋಮಾರ್ಕರ್: ಮಾನವ ದೇಹವು ಜೀವಂತವಾಗಿರಲು ಅನುಭವಿಸುವ ನೈಜ-ಸಮಯದ ಪಚನ ವೆಚ್ಚವನ್ನು (Metabolic cost of being alive) ಇದು 1 ರಿಂದ 250 ರ ಅಳತೆಯಲ್ಲಿ (Scale) ಲೆಕ್ಕಹಾಕುತ್ತದೆ. ಬಳಕೆದಾರರು ತೀವ್ರ ವ್ಯಾಯಾಮದಲ್ಲಿದ್ದಾಗ ಹೆಚ್ಚಿನ ಅಂಕಗಳನ್ನು ಮತ್ತು ಆಳವಾದ ಧ್ಯಾನ/ವಿಶ್ರಾಂತಿಯಲ್ಲಿದ್ದಾಗ ಕಡಿಮೆ ಅಂಕಗಳನ್ನು ಇದು ತೋರಿಸುತ್ತದೆ.
- ಬ್ರೈನ್-ಫ್ಲೋ ಇಂಡೆಕ್ಸ್ (BrainFlow Index): ಹಣೆಯ ಮೇಲ್ಭಾಗದಲ್ಲಿ ಆಪ್ಟಿಕಲ್ ಸೆನ್ಸಾರ್ (Optical Sensor) ಬಳಸಿ, ಮೆದುಳಿನ ರಕ್ತಸಂಚಾರದಲ್ಲಾಗುವ ಪ್ರಾದೇಶಿಕ ಬದಲಾವಣೆಗಳನ್ನು ಮತ್ತು ಆಕ್ಸಿಜನ್ ಮಟ್ಟವನ್ನು ಆಪ್ಟಿಕಲ್ ಮಾಪನದ ಮೂಲಕ ಟ್ರ್ಯಾಕ್ ಮಾಡುತ್ತದೆ.
- ಮೊಮೆಂಟಮ್ ಮೇಟ್ರಿಕ್ (Momentum Metric): ಹೃದಯದ ಬಡಿತ, ದೇಹದ ಚಟುವಟಿಕೆ ಮತ್ತು ಎಂಟ್ರೋಪಿ ದತ್ತಾಂಶವನ್ನು ಸಂಯೋಜಿಸಿ, ಬಳಕೆದಾರರ ದಿನನಿತ್ಯದ ಒಟ್ಟಾರೆ ಶಾರೀರಿಕ ಪ್ರದರ್ಶನ ಮತ್ತು ವಿಶ್ರಾಂತಿಯ ಅಗತ್ಯತೆಯನ್ನು ‘ಮೊಮೆಂಟಮ್’ ರೂಪದಲ್ಲಿ ಪ್ರದರ್ಶಿಸುತ್ತದೆ.
ದೀಪಿಂದರ್ ಗೋಯಲ್ ಅವರು ತಮ್ಮ ಒಂದು ಪೋಸ್ಟ್ನಲ್ಲಿ, ಟೆಂಪಲ್ ಸಾಧನದಲ್ಲಿ ಇನ್ನೂ ಬಹಿರಂಗಪಡಿಸದೇ ಇರುವ ಅಚ್ಚರಿಯ ಕೆಲ ಫೀಚರ್ಸ್ ಇವೆ ಎಂದಿದ್ದಾರೆ. ಇವೆಲ್ಲವೂ ಅದು ಮಾರುಕಟ್ಟೆಗೆ ಬಂದ ಬಳಿಕ ತಿಳಿಯಬಹುದು. ಸದ್ಯ, ನವೆಂಬರ್ 1ರಿಂದ ಪ್ರೀ ಆರ್ಡರ್ ಅವಕಾಶ ತೆರೆಯಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Source: TV9 Kannada Business




(@theliverdoc)