Hashtagintro

‘ಟಾಕ್ಸಿಕ್’ ಸಿನಿಮಾ ಸೋತಿದೆ ಎಂದು ಟೀಕಿಸಿದ ಸಮಯ್​ಗೆ ಖಡಕ್ ತಿರುಗೇಟು ಕೊಟ್ಟ ಹುಮಾ ಖುರೇಷಿ

‘ಟಾಕ್ಸಿಕ್’ ಸಿನಿಮಾ ಸೋತಿದೆ ಎಂದು ಟೀಕಿಸಿದ ಸಮಯ್​ಗೆ ಖಡಕ್ ತಿರುಗೇಟು ಕೊಟ್ಟ ಹುಮಾ ಖುರೇಷಿ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ ಟಾಕ್ಸಿಕ್‘ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣದೆ ನಿರಾಸೆ ಮೂಡಿಸಿದ್ದು ಗೊತ್ತೇ ಇದೆ. ಇದೀಗ ಜನಪ್ರಿಯ ಹಾಸ್ಯನಟ ಸಮಯ್ ರೈನಾ ಈ ಚಿತ್ರದ ಸೋಲಿನ ಬಗ್ಗೆ ಬಹಿರಂಗವಾಗಿ ವ್ಯಂಗ್ಯವಾಡಿದ್ದಾರೆ. ತಮ್ಮ ಶೋಗೆ ಅತಿಥಿಯಾಗಿ ಬಂದಿದ್ದ ನಟಿ ಹುಮಾ ಖುರೇಷಿ ಎದುರೇ ಸಿನಿಮಾದ ಕಳಪೆ ಪ್ರದರ್ಶನವನ್ನು ಕೆಣಕುವ ಮೂಲಕ ಸಮಯ್ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.

ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಮೂಲಕ ಯಶ್ ನಾಲ್ಕು ವರ್ಷಗಳ ಬಳಿಕ ತೆರೆಗೆ ಮರಳಿದ್ದರು. ಕೆಜಿಎಫ್ ಸರಣಿಯ ನಂತರ ಬಂದ ಈ ಬಿಗ್ ಬಜೆಟ್ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇತ್ತು. ಆದರೆ ಬಾಕ್ಸ್ ಆಫೀಸ್‌ನಲ್ಲಿ ಚಿತ್ರ ಮುಗ್ಗರಿಸಿದ್ದು 350 ಕೋಟಿ ರೂಪಾಯಿ ಒಳಗೇ ತನ್ನ ಗಳಿಕೆಯನ್ನು ಮುಗಿಸಿದೆ. ಈ ಚಿತ್ರದಲ್ಲಿ ನಟಿ ಹುಮಾ ಖುರೇಷಿ ಎಲಿಜಬೆತ್ ಎಂಬ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ಇತ್ತೀಚೆಗೆ ಹುಮಾ ಖುರೇಷಿ ಅವರು ಸಮಯ್ ರೈನಾ ನಡೆಸಿಕೊಡುವ ‘ಇಂಡಿಯಾಸ್ ಗಾಟ್ ಲೇಟೆಂಟ್’ ಶೋಗೆ ಅತಿಥಿಯಾಗಿ ಬಂದಿದ್ದರು. ಈ ವೇಳೆ ಸಮಯ್ ಅವರಿಗೆ ಕಾಲೆಳೆಯುವ ಅವಕಾಶವನ್ನು ಬಿಡಲಿಲ್ಲ. ಸಾಮಾನ್ಯವಾಗಿ ಜನರು ನಮ್ಮ ಶೋಗೆ ಬಂದ ಮೇಲೆ ಅವರ ಸಿನಿಮಾ ಫ್ಲಾಪ್ ಆಗುತ್ತದೆ. ಆದರೆ ನೀವೇ ಮೊದಲು ಸಿನಿಮಾ ಫ್ಲಾಪ್ ಮಾಡಿಕೊಂಡು ಇಲ್ಲಿಗೆ ಬಂದಿದ್ದೀರಿ ಎಂದು ಸಮಯ್ ನೇರವಾಗಿ ಕಾಲೆಳೆದರು.

ಸಮಯ್ ಮಾತಿಗೆ ಹುಮಾ ಕೂಡ ಖಾರವಾಗಿಯೇ ತಿರುಗೇಟು ನೀಡಿದರು. ನಾನು ಕೇವಲ ಟಾಕ್ಸಿಕ್ ಹೆಸರಿನ ಸಿನಿಮಾದಲ್ಲಿ ನಟಿಸಿದ್ದೇನೆ. ಆದರೆ ನೀನು ನಿಜಜೀವನದಲ್ಲೇ ಟಾಕ್ಸಿಕ್ ಆಗಿದ್ದೀಯ ಎಂದು ನಗುತ್ತಲೇ ಟಾಂಗ್ ಕೊಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಸಮಯ್ ಕನಿಷ್ಠ ನನ್ನ ಶೋವನ್ನು ಜನ ನೋಡುತ್ತಾರೆ ಎಂದರು. ಇತ್ತೀಚಿನ ದಿನಗಳಲ್ಲಿ ದ್ವೇಷದಿಂದ ನೋಡುವವರ ಸಂಖ್ಯೆಯೂ ಹೆಚ್ಚಾಗಿದೆ ಎಂದು ಹುಮಾ ಹೇಳಿದಾಗ ಟಾಕ್ಸಿಕ್ ಟ್ರೇಲರ್‌ನಲ್ಲಿ ಸಾಕಷ್ಟು ಬೋಲ್ಡ್ ದೃಶ್ಯಗಳಿದ್ದವು ಎಂದು ಸಮಯ್ ಕಿಚಾಯಿಸಿದರು.

ಇದನ್ನೂ ಓದಿ: ‘ಟಾಕ್ಸಿಕ್ ಚಿತ್ರದಿಂದ ನನಗೆ ಲಾಭವೇ ಆಗಿದೆ’; ಅಚ್ಚರಿಯ ಮಾಹಿತಿ ರಿವೀಲ್ ಮಾಡಿದ ದಿಲ್ ರಾಜು

ಅತಿಥಿಗಳನ್ನು ಕರೆಯುವಾಗ ತುಂಬಾ ಒಳ್ಳೆಯವನಂತೆ ಮಾತನಾಡಿ ಶೋನಲ್ಲಿ ವಿಷ ಕಾರುತ್ತೀಯ ಎಂದು ಹುಮಾ ತಮಾಷೆಯಾಗಿ ಹೇಳಿದರು. ಆಗಸ್ಟ್ 26 ರಂದು ಬಿಡುಗಡೆಯಾಗಿದ್ದ ‘ಟಾಕ್ಸಿಕ್’ ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ನಟಿಸಿದ್ದಾರೆ. ಸೆನ್ಸಾರ್ ಮಂಡಳಿಯಿಂದ ‘ಎ’ ಪ್ರಮಾಣಪತ್ರ ಪಡೆದಿದ್ದ ಈ ಸಿನಿಮಾ ತನ್ನ ಹಸಿಬಿಸಿ ದೃಶ್ಯಗಳು ಮತ್ತು ಸಂಭಾಷಣೆಗಳಿಂದಲೂ ಭಾರಿ ವಿವಾದಕ್ಕೆ ಕಾರಣವಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language