Hashtagintro

ಟೈಗರ್ ಶ್ರಾಫ್ ಮೇಲೆ ದಾಳಿ, ತನಿಖೆಯಲ್ಲಿ ಮಹತ್ವದ ಬೆಳವಣಿಗೆ

ಟೈಗರ್ ಶ್ರಾಫ್ ಮೇಲೆ ದಾಳಿ, ತನಿಖೆಯಲ್ಲಿ ಮಹತ್ವದ ಬೆಳವಣಿಗೆ

ಬಾಲಿವುಡ್ ಯುವ ನಟ ಟೈಗರ್ ಶ್ರಾಫ್ ಮೇಲೆ ಭಾನುವಾರ ರಾತ್ರಿ ಗುಂಡಿನ ದಾಳಿ ನಡೆದಿದ್ದು, ಟೈಗರ್ ಅವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ದಾಳಿಕೋರರನ್ನು ಮುಂಬೈ ಪೊಲೀಸರು ಈಗಾಗಲೇ ಬಂಧಿಸಿದ್ದು, ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಟೈಗರ್ ಶ್ರಾಫ್ ಮೇಲಿನ ದಾಳಿಯ ಕುರಿತು ಹಲವಾರು ಸುದ್ದಿಗಳು, ಕೆಲ ಸುಳ್ಳು ಸುದ್ದಿಗಳು ಸಹ ಹರಿದಾಡುತ್ತಿದ್ದು, ಈ ಬಗ್ಗೆ ಪೊಲೀಸರು ಸ್ಪಷ್ಟನೆಗಳನ್ನು ನೀಡಿದ್ದಾರೆ ಜೊತೆಗೆ ತನಿಖೆಯ ಪ್ರಗತಿಯ ಬಗ್ಗೆಯೂ ಮಾಹಿತಿಯನ್ನು ಮಾಧ್ಯಮಗಳ ಬಳಿ ಹಂಚಿಕೊಂಡಿದ್ದಾರೆ.

ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ನಡೆಸಿದವರಲ್ಲಿ ಅಪ್ರಾಪ್ತ ಬಾಕನೂ ಇದ್ದ ಎನ್ನಲಾಗಿತ್ತು. ಆದರೆ ಪೊಲೀಸರು ಅದನ್ನು ಅಲ್ಲಗಳೆದಿದ್ದು ಬಂಧಿತರಾಗಿವ ಮೂವರು ಆರೋಪಿಗಳಲ್ಲಿ ಯಾರೂ ಸಹ ಅಪ್ರಾಪ್ತರಿಲ್ಲ ಎಂದಿದ್ದಾರೆ. ಅಲ್ಲದೆ ಆರೋಪಿಗಳು ಕ್ರಿಮಿನಲ್ ಹಿನ್ನೆಲೆ ಉಳ್ಳವರಾಗಿದ್ದು ಈಗಾಗಲೇ ಅವರ ಮೇಲೆ ಕೆಲವು ಪ್ರಕರಣಗಳು ದಾಖಲಾಗಿರುವುದಾಗಿ ಹೇಳಿದ್ದಾರೆ.

ಜಾಮ್ ಆದ ಬಂದೂಕು

ಟೈಗರ್ ಶ್ರಾಫ್ ಮೇಲೆ ನಡೆದ ಗುಂಡಿನ ದಾಳಿ ಘಟನೆಯ ಕೆಲ ವಿಡಿಯೋಗಳು ಇದೀಗ ಹೊರ ಬಂದಿದ್ದು, ಒಂದು ಸಿಸಿಟಿವಿ ದೃಶ್ಯದ ಪ್ರಕಾರ, ಒಬ್ಬ ಶೂಟರ್​​​ನ ಗನ್ನು ಜಾಮ್ ಆಗಿದೆ. ಅದೇ ಶೂಟರ್ ಟೈಗರ್ ಶ್ರಾಫ್ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದು, ಆತನ ಬಂದೂಕು ಜಾಮ್ ಆದ ಕಾರಣ ಆತನಿಗೆ ಗುಂಡು ಹಾರಿಸಲು ಸಾಧ್ಯವಾಗಿಲ್ಲ. ಒಂದೊಮ್ಮೆ ಆ ಬಂದೂಕು ಜಾಮ್ ಆಗದೇ ಇದ್ದಿದ್ದರೆ ಬಹುಷಃ ಪರಿಸ್ಥಿತಿ ಬೇರೆಯೇ ಇರುತ್ತಿತ್ತು.

ಇದನ್ನೂ ಓದಿ:ಬಾಲಿವುಡ್​​ಗೆ ಕಾಲಿಡಲಿದ್ದಾರೆ ದಕ್ಷಿಣ ಭಾರತದ ಸೆನ್ಸೇಷನ್​​ ನಟಿ ಮಮಿತಾ ಬೈಜು

ಈ ಹಿಂದೆಲ್ಲ ಕೆಲ ನಟ-ನಟಿಯರಿಗೆ ಮೊದಲಿಗೆ ಬೆದರಿಕೆ ಕರೆ, ಪತ್ರಗಳು ಬಂದು ಬಳಿಕ ದಾಳಿಗಳಾಗುತ್ತವೆ. ಆದರೆ ಟೈಗರ್ ಶ್ರಾಫ್ ಅವರಿಗೆ ಯಾವುದೇ ಬೆದರಿಕೆ ಕರೆಗಳಾಗಲಿ, ಬೆದರಿಕೆ ಪತ್ರಗಳಾಗಲಿ ಬಂದಿರಲಿಲ್ಲ ಎನ್ನಲಾಗಿದೆ. ನೇರವಾಗಿ, ಏಕಾ-ಏಕಿ ದಾಳಿಯನ್ನು ಅಗಂತುಕರು ಮಾಡಿದ್ದಾರೆ. ಬಂಧಿತ ಆರೋಪಿಗಳನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಕೃತ್ಯಕ್ಕೆ ಬಳಸಿದ್ದ ವಾಹನವನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಮಹಾರಾಷ್ಟ್ರ ಸರ್ಕಾರವು ಈ ದಾಳಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಯನ್ನು ಬಲು ಚುರುಕಿನಿಂದ ಮಾಡಲಾಗುತ್ತಿದೆ. ನಿನ್ನೆಯಷ್ಟೆ ಡಿಸಿಎಂ ಶಿಂಧೆ ಅವರು ಟೈಗರ್ ಶ್ರಾಫ್ ನಿವಾಸಕ್ಕೆ ಭೇಟಿ ನೀಡಿ ಯುವನಟನೊಟ್ಟಿಗೆ ಮಾತುಕತೆ ನಡೆಸಿದ್ದಾರೆ. ಬಾಲಿವುಡ್​​ನ ಹಲವು ಸೆಲೆಬ್ರಿಟಿಗಳು ಸಹ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಇದು ಮತ್ತೆ ಪುನರಾವರ್ತನೆ ಆಗಬಾರದು ಎಂದು ಮನವಿ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language