Hashtagintro

ಥಿಯೇಟರ್​​ನಲ್ಲಿ ರಿಲೀಸ್ ಆದ ತಿಂಗಳೊಳಗೆ ಒಟಿಟಿಗೆ ಕಾಲಿಟ್ಟ ‘ಪ್ಯಾರಡೈಸ್’ ಸಿನಿಮಾ

ಥಿಯೇಟರ್​​ನಲ್ಲಿ ರಿಲೀಸ್ ಆದ ತಿಂಗಳೊಳಗೆ ಒಟಿಟಿಗೆ ಕಾಲಿಟ್ಟ ‘ಪ್ಯಾರಡೈಸ್’ ಸಿನಿಮಾ

ಟಾಲಿವುಡ್‌ ನಟ ನಾನಿ ಹಾಗೂ ನಿರ್ದೇಶಕ ಶ್ರೀಕಾಂತ್ ಒಡೆಲ ಕಾಂಬಿನೇಷನ್ ಅಲ್ಲಿ ಮೂಡಿ ಬಂದ ‘ಪ್ಯಾರಡೈಸ್’ ಸಿನಿಮಾ ಸೆಪ್ಟೆಂಬರ್ 24ರಂದು ಥಿಯೇಟರ್​​ನಲ್ಲಿ ರಿಲೀಸ್ ಆಗಿತ್ತು. ಈ ಚಿತ್ರ ಜನರನ್ನು ಇಂಪ್ರೆಸ್ ಮಾಡಲು ವಿಫಲವಾಗಿತ್ತು. ಈ ಚಿತ್ರ ಈಗ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಅದು ಕೂಡ ತಿಂಗಳ ಒಳಗಾಗಿ ಅನ್ನೋದು ಅಚ್ಚರಿಯ ವಿಷಯ.

‘ದಸರಾ’ ಸಿನಿಮಾ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡಿತ್ತು. ಈ ಸಿನಿಮಾದಲ್ಲಿ ನಾನಿ ಹಾಗೂ ಶ್ರೀಕಾಂತ್ ಒಟ್ಟಾಗಿ ಕೆಲಸ ಮಾಡಿದ್ದರು. ಈಗ ಅದೇ ಜೋಡಿ ‘ಪ್ಯಾರಡೈಸ್’ ಸಿನಿಮಾಗೆ  ಮತ್ತೆ ಒಂದಾಗಿತ್ತು. 80ರ ದಶಕದ ಕಥೆಯಲ್ಲಿ ‘ಪ್ಯಾರಡೈಸ್’ ಸಾಗಿತ್ತು. ಪ್ಯಾರಡೈಸ್ ಎಂಬ ಕೊಳೆಗೇರಿಯಲ್ಲಿ ಬದುಕುವ ಸವಾರೀ ಎಂಬ ಸಮುದಾಯದ ಬದುಕಿನ ಕರಾಳ ಸತ್ಯಗಳನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.

ಈ ಚಿತ್ರದಲ್ಲಿ ನಾನಿ ಸಂಪೂರ್ಣ ವಿಭಿನ್ನ ಹಾಗೂ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ‘ಜಡಲ್’ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಹಿರಿಯ ನಟ ಮೋಹನ್ ಬಾಬು, ಶಿಕಂಜಾ ಮಾಲಿಕ್ ಪಾತ್ರದಲ್ಲಿ ಹಾಗೂ ರಾಘವ್ ಜುಯಲ್ ವಿಕ್ರಮ್ ಮಾಲಿಕ್ ಪಾತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾದಲ್ಲಿನ ಹಿಂಸೆ, ತಾರತಮ್ಯ ಹಾಗೂ ಅಸ್ತಿತ್ವಕ್ಕಾಗಿನ ಹೋರಾಟದ ಕಥೆಯು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ವಿಫಲವಾಗೊದೆ.

ಎಸ್‌ಎಲ್ ವೀ ಸಿನಿಮನ್ಸ್ ಬ್ಯಾನರ್ ಅಡಿಯಲ್ಲಿ ಸುಧಾಕರ್ ಚೆರುಕುರಿ ಅವರು ಈ ಸಿನಿಮಾವನ್ನು ಅತ್ಯಂತ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರ ಹಿನ್ನೆಲೆ ಸಂಗೀತ ಅಷ್ಟಾಗಿ ಮೋಡಿ ಮಾಡಿಲ್ಲ. ಥಿಯೇಟರ್‌ನಲ್ಲಿ ಸೋತಿರುವ ಈ ಸಿನಿಮಾನ ಪ್ರೇಕ್ಷಕರು ಇಷ್ಟಪಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಈ ವಿಷಯದಲ್ಲಿ ಯಶ್‌ಗಿಂತ ನಾನಿ ಬೆಸ್ಟ್; ನಟಿ ಶ್ರೀನಿಧಿ ಶೆಟ್ಟಿ ನೇರ ಮಾತು

ಸೆಪ್ಟೆಂಬರ್ 24ರಂದು ತೆರೆಕಂಡಿದ್ದ ಈ ಚಿತ್ರವು ಈಗ ಅಕ್ಟೋಬರ್ 22ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಅಧಿಕೃತವಾಗಿ ಸ್ಟ್ರೀಮಿಂಗ್ ಆರಂಭಿಸಲಿದೆ. ‘ವೆಲ್ಕಮ್ ಟು ಜಡಲ್ ಜಮಾನಾ’ ಎಂಬ ವಿಭಿನ್ನ ಕ್ಯಾಪ್ಷನ್‌ನೊಂದಿಗೆ ನೆಟ್‌ಫ್ಲಿಕ್ಸ್ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. ಥಿಯೇಟರ್‌ನಲ್ಲಿ ಮಿಸ್ ಮಾಡಿಕೊಂಡ ಸಿನಿಪ್ರಿಯರು ಈಗ ಮನೆಯಲ್ಲೇ ಕುಳಿತು ಈ ಹೈ ವೋಲ್ಟೇಜ್ ಆಕ್ಷನ್ ಸಿನಿಮಾವನ್ನು ಕಣ್ತುಂಬಿಕೊಳ್ಳಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language