Hashtagintro

ದಿನ ಭವಿಷ್ಯ: ಇಂದು ಈ ರಾಶಿಯವರು ಮೋಸದ ಆಟದಲ್ಲಿ ಸಿಲುಕುವರು

ದಿನ ಭವಿಷ್ಯ: ಇಂದು ಈ ರಾಶಿಯವರು ಮೋಸದ ಆಟದಲ್ಲಿ ಸಿಲುಕುವರು

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಆಶ್ವಯುಜ, ಸೌರ ಮಾಸ : ತುಲಾ, ಮಹಾನಕ್ಷತ್ರ : ಚಿತ್ರಾ, ವಾರ : ಭಾನು, ಪಕ್ಷ : ಶುಕ್ಲ, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಅಶ್ವಿನೀ, ಯೋಗ : ಹರ್ಷಣ, ಕರಣ : ಭದ್ರ, ಸೂರ್ಯೋದಯ – 06 – 12 am, ಸೂರ್ಯಾಸ್ತ – 05 – 54 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 16:27 – 17:55, ಯಮಗಂಡ ಕಾಲ 12:04 – 13:31, ಗುಳಿಕ ಕಾಲ 14:59 – 16:27.

ಮೇಷ ರಾಶಿ: ಶತ್ರುಗಳ ಬಗ್ಗೆ ನೀವು ಸರಿಯಾದ ಮಾಹಿತಿಯನ್ನು ಪಡೆಯುವಿರಿ. ಅನಿರೀಕ್ಷಿತ ವಾರ್ತೆಗಳು ನಿಮ್ಮ ಮನಸ್ಸನ್ನು ಖಿನ್ನಗೊಳಿಸುವುದು. ಬಂಧುಗಳ ಪ್ರೀತಿಯು ನಿಮಗೆ ಸಿಗಲಿದೆ. ನಿಮ್ಮ ಪ್ರಾಮಾಣಿಕತೆಯನ್ನು ಬಿಡುವುದು ಬೇಡ. ಸುಳ್ಳು ಹೇಳವ ಸಂದರ್ಭವೂ ಬರಬಹುದು. ಉದ್ವೇಗಕ್ಕೆ ಸಿಲುಕಿ ಏನನ್ನಾದರೂ ಮಾಡಲು ಹೋಗುವಿರಿ. ಸಮೂಹದ ಜೊತೆ ನಿಮ್ಮ ಕೆಲಸವು ಆಗುವುದು. ಸುಲಭವಾದ ಕಾರ್ಯವನ್ನು ಮೊದಲು ಮಾಡಿ ಮುಗಿಸಿ.

ವೃಷಭ ರಾಶಿ: ಮನಸ್ಸಿನ ನಿಯಂತ್ರಣದಿಂದ ಇಂದಿನ ಎಲ್ಲ ಒತ್ತಡವನ್ನೂ ಸರಿಮಾಡಿಕೊಳ್ಳುವಿರಿ. ಬಂಧುಗಳ ನಿಮ್ಮ ಬಗ್ಗೆ ಆಡಿಕೊಳ್ಳಬಹುದು. ಯಾರ ಮೇಲಾದರೂ ನಿಮ್ಮ ತಪ್ಪನ್ನು ಹಾಕುವಿರಿ. ಬರುವ ಆದಾಯಕ್ಕೆ ಅಡೆತಡೆಗಳು ಬರಬಹುದು. ಸ್ನೇಹವು ಶಿಥಿಲವಾಗುವುದು. ನಿಮಗೆ ಬೇಕಾದುದನ್ನು ಮಾತ್ರ ಇಟ್ಟುಕೊಂಡು ಬೇಡದ್ದನ್ನು ಕೊಡಿ. ಆರಂಭಿಸುವ ಕೆಲಸದ ಬಗ್ಗೆ ಪೂರ್ಣ ಮಾಹಿತಿ ಇರಲಿ. ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸುವಿರಿ. ಅಧಿಕ ಓಡಾಟದಿಂದ ದಣಿವಾಗಲಿದೆ.

ಮಿಥುನ ರಾಶಿ: ಉದ್ಯೋಗದಲ್ಲಿ ಆಗದ ಸಣ್ಣ ತಪ್ಪಿನಿಂದ ನಷ್ಟವಾಗಲಿದ್ದು ಅದು ನಿಮ್ಮ ಮೇಲೆ ಬರಬಹುದು.‌ ಭೂಮಿಯ ವ್ಯವಹಾರದಲ್ಲಿ ಲಾಭವಾಗದೇ ಕೇವಲ ಓಡಾಟವನ್ನು ಮಾಡಬೇಕಾಗಬಹುದು. ತುರ್ತು ಹಣವು ಬೇಕಾಗಿದ್ದು ಸಾಲವನ್ನು ಮಾಡಲು ನಿಮಗೆ ಹೆದರಿಕೆ ಆಗಬಹುದು. ಯಾವ ಕಾರಣಕ್ಕೂ ಸಾಲವನ್ನು ಮಾಡಲು ಹೋಗುವುದು ಬೇಡ. ನಿಮ್ಮ ಕೌಶಲವನ್ನು ಪ್ರದರ್ಶಿಸಲು ಅವಕಾಶವಿದೆ. ನೀವು ಕಾರ್ಯದಲ್ಲಿ ಮಗ್ನರಾಗಿದ್ದು ಯಾವ ವಿಷಯಕ್ಕೂ ಭಾಗಿಯಾಗಲಾರಿರಿ.

ಕರ್ಕಾಟಕ ರಾಶಿ: ಅವಶ್ಯಕತೆಯನ್ನು ನೋಡಿ ಮುಂದುವರಿಯಿರಿ. ಇಂದು ನೀವು ಬಹಳ ದಿನಗಳ ಅನಂತರ ಸಂಗಾತಿಯ ಜೊತೆ ದೂರದ ಊರಿಗೆ‌ ಪ್ರಯಾಣ ಮಾಡುವಿರಿ. ಹಠದ ಸ್ವಭಾವದಿಂದ ಪ್ರೀತಿಯನ್ನು ಕಳೆದುಕೊಳ್ಳುವಿರಿ. ಇಂದು ವ್ಯವಹಾರವನ್ನು ಮಾಡಲು ನಿಮಗೆ ಧೈರ್ಯವು ಸಾಕಾಗದು. ಹೂಡಿಕೆಯಿಂದ ಹಿಂಜರಿಯುವ ಸಾಧ್ಯತೆ ಇದೆ. ಆಪ್ತರ ಮಾತಿನಿಂದ ನಿಮಗೆ ಬೇಸರವಾಗಲಿದೆ. ಕುಟುಂಬ ಮೇಲೆ ಬೇಸರ ಬರಬಹುದು. ನಿಮ್ಮ ಭಾವವನ್ನು ಬಂಧಿಸಿಟ್ಟರೂ ಅದು ಗೊತ್ತಾಗುವುದು.

ಸಿಂಹ ರಾಶಿ: ಗೃಹ ಬಳಕೆಗೆ ಬೇಕಾದ ಸಾಮಾನುಗಳನ್ನು ನೀವು ಖರೀದಿಸುವ ಭರದಲ್ಲಿ ಖರ್ಚಿನ ಬಗ್ಗೆಯೂ ಸೂಕ್ತ ಆಲೋಚನೆಯನ್ನು ಮಾಡಿ. ಶತ್ರುಗಳ ವಿರುದ್ಧ ಸಮರಸಾರದೇ ತಾಳ್ಮೆಯಿಂದ ನಿರ್ವಹಿಸುವಿರಿ. ಮೇಲಧಿಕಾರಿಗಳ ಜೊತೆ ನಿಮ್ಮ ಒಡನಾಟವು ಚೆನ್ನಾಗಿರುವುದು. ಬೇಡವೆನಿಸಿದ್ದನ್ನು ಒತ್ತಾಯಪೂರ್ವಕ ಪಡೆಯುವುದು ಬೇಡ. ಸಂಗಾತಿಯ ವಿಷಯದಲ್ಲಿ ವಾಗ್ವಾದ ನಡೆಯಲಿದೆ. ಕೆಲವು ತೊಂದರೆಗಳನ್ನು ನೀವು ತೆಗೆದುಕೊಳ್ಳುವುದು ಅನಿವಾರ್ಯ.

ಕನ್ಯಾ ರಾಶಿ: ನಿಮ್ಮ ವ್ಯವಹಾರದಲ್ಲಿ ಕೆಲವು ಬದಲಾವಣೆಗಳು ಬೇಕು ಎಂದು ಅನ್ನಿಸಬಹುದು. ಉದ್ಯಮದಲ್ಲಿ ಆಗುವ ಒತ್ತಡವನ್ನು ನಿವಾರಿಸಿಕೊಳ್ಳಲು ಅನ್ಯ ಮಾರ್ಗವನ್ನು ಕಂಡುಕೊಳ್ಳಿ.‌ ಮರೆವು ನಿಮಗೆ ಉತ್ತಮ ಎನಿಸಬಹುದು. ನಿಮ್ಮ ವಿರುದ್ಧ ನಡೆಸುವ ತಂತ್ರಗಾರಿಕೆಯು ನಿಲ್ಲದು. ವಿದೇಶಿ ಕಂಪನಿಗಳ ಜೊತೆ ಒಪ್ಪಂದ ಸಾಧ್ಯವಾಗದು. ಸಂಬಂಧಗಳನ್ನು ಬೆಳೆಸಿಕೊಂಡಾಗಲಷ್ಟೇ ಬಾಂಧವ್ಯ ಬೆಳೆಡಯುವುದು. ಯಾರ ಮಾತನ್ನೂ ಕೇಳುವ ಸಹನೆ ಇಲ್ಲವಾದೀತು.

ತುಲಾ ರಾಶಿ: ಕೆಲವು ವಿಚಾರದಲ್ಲಿ ನಿಮಗೆ ಸೂಕ್ಷ್ಮತೆಯ ಕೊರತೆಯು ಕಾಣುವುದು. ನಿಮ್ಮದೇ ಆದ ದಾರಿಯಲ್ಲಿ ನೀವು ಸಾಗುವಿರಿ. ವಿದ್ಯಾರ್ಥಿಗಳು ಓದಿನ ಬಗ್ಗೆ ಗಮನವನ್ನು ಹೆಚ್ಚುಕೊಡಬೇಕಾದೀತು. ಪ್ರಯೋಜನವಿಲ್ಲದೆ ಯಾವ ಕಾರ್ಯವನ್ನೂ ಮಾಡಲು ಇಷ್ಟಪಡುವುದಿಲ್ಲ. ಜನರ ಜೊತೆ ಬೆರೆಯುವುದು ಕಷ್ಟವಾದೀತು.‌ ನಿಮಗೆ ಸಿಗಬೇಕಾದ ಗೌರವವು ಗೊಂದಲದಲ್ಲಿ ಇದ್ದು ಕೊನೆಗೂ ನಿಮಗೇ ಸಿಗಲಿದೆ.

ವೃಶ್ಚಿಕ ರಾಶಿ: ಮಕ್ಕಳ ಪ್ರೀತಿಯಲ್ಲಿ ನೀವು ಕಳೆದುಹೋಗುವಿರಿ. ನಿಮ್ಮ ಇಂದಿನ ದೀರ್ಘ ಪ್ರಯಾಣವು ಹಲವು ತೊಡಕುಗಳಿಂದ ಇರಬಹುದು. ವಾಹನ ವಿಚಾರವಾಗಿ ಮನೆಯಲ್ಲಿ ಕಲಹವಾಗಬಹುದು.‌ ಸಂಗಾತಿಯ ಮಾತಿಗೆ ನಿಮ್ಮ ಪ್ರತಿಕ್ರಿಯೆಯು ಇಲ್ಲದಿರುವುದು ಬೇಸರವನ್ನು ತರಿಸಬಹುದು. ನಿಮ್ಮ ಕೆಲಸಗಳನ್ನು ಇನ್ನೊಬ್ಬರಿಗೆ ಕೊಟ್ಟುಬಿಡುವಿರಿ. ನಿಮ್ಮದಲ್ಲದ ವಸ್ತುಗಳನ್ನು ಜೋಪಾನ ಮಾಡುವುದು ಅನಿವಾರ್ಯ. ಸಮಯದ ಬೆಲೆಯನ್ನು ಅನ್ಯರಿಂದ ಪಡೆಯುವಿರಿ.

ಧನು ರಾಶಿ: ಒಳ್ಳೆಯ ಸುದ್ದಿಯನ್ನು ನಾಲ್ಕು ಜನರ ಜೊತೆ ಹಂಚಿಕೊಳ್ಳುವಿರಿ. ಇಂದು ಕಛೇರಿಯಲ್ಲಾಗಲಿ ನಿಮ್ಮ ಮಾತನ್ನು ಬೆಂಬಲಿಸತ್ತಾರೆ. ವಿವಾಹ ಯೋಗವು ಬಂದಿದ್ದು ಅದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಳ್ಳಿ.‌ ನಿಮ್ಮ‌ ಮಾತು ಯಾರನ್ನಾದರೂ ಘಾಸಿ ಮಾಡೀತು. ಬಂಧುಗಳ ಪ್ರೀತಿಗೆ ಪಾತ್ರರಾಗುವಿರಿ. ವ್ಯವಹಾರದಲ್ಲಿ ಶುದ್ಧತೆ ಇರಲಿ. ಭವಿಷ್ಯದ ಬಗ್ಗೆ ಬಹಳ ಆಲೋಚನೆಯನ್ನು ಮಾಡುವಿರಿ. ಕಾನೂನಿಗೆ ವಿರುದ್ಧವಾದ ನಡೆಯು ನಿಮಗೆ ಅಪಾಯಕಾರಿ. ದೂರದ ಬಂಧುಗಳು ಹತ್ತಿರವಾಗುವರು.

ಮಕರ ರಾಶಿ: ಇಂದು ನಿಮಗೆ ಸೇವೆಯಲ್ಲಿ ಸಂತೋಷ ಸಿಗಲಿದೆ. ನೀವು ಇಂದು ಕಾರ್ಯದಲ್ಲಿ ಮಗ್ನರಾಗಿದ್ದು ಯಾವ ವಿಷಯಕ್ಕೂ ನೀವು ಭಾಗಿಯಾಗಲಾರಿರಿ. ಸಂಬಂಧಿಕರನ್ನೇ ಪಾಲುದಾರಿಕೆಯಲ್ಲಿ ಇಟ್ಟಕೊಳ್ಳುವಿರಿ. ಸರ್ಕಾರದ‌‌‌ ಕೆಲಸಕ್ಕೆ ಹೆಚ್ಚು ಓಡಾಟ ಮಾಡಬೇಕಾದೀತು. ಪಾಲುದಾರಿಕೆಯು ಬಳಕೆ ಇಲ್ಲದೇ ತಪ್ಪಿಹೋಗುವುದು. ಉದ್ಯೋಗದಲ್ಲಿ ನಿಮ್ಮ ಕಣ್ತಪ್ಪಿನಿಂದ ಆದ ತಪ್ಪಿಗೆ ನೀವೇ ಜವಾಬ್ದಾರಿ ಆಗಿರುವಿರಿ.

ಕುಂಭ ರಾಶಿ: ವಿಪರೀತ ಓಡಾಟದಿಂದ‌ ನಿಮಗೆ ದಣಿವಾಗಲಿದೆ. ಹೆಚ್ಚಿನ ಸುಖಸಂಪತ್ತನ್ನು ನಿರೀಕ್ಷಿಸುವಿರಿ. ತಾಯಿಯ ಕಡೆಯಿಂದ ನಿಮಗೆ ಪ್ರೋತ್ಸಾಹವು ಸಿಗಲಿದೆ. ಮುಖವಾಡವನ್ನು ಹಾಕಿಕೊಂಡು ವರ್ತಿಸುವ ಜನರ ಜೊತೆ ಮೈಯೆಲ್ಲ ಕಣ್ಣಾಗಿ ಇರಬೇಕಾಗುವುದು. ಅಪರಿಚಿತರ ಸಹವಾಸವನ್ನು ಮಾಡುವಿರಿ. ಇಂದಿನ ಒಂದು ಸಂದರ್ಭ ನಿಮ್ಮನ್ನು ಅಪಾಯದಿಂದ ತಪ್ಪಿಸುವುದು.

ಮೀನ ರಾಶಿ: ಅತಿಥಿಗಳ ಸತ್ಕಾರವನ್ನು ಮನೆಯಲ್ಲಿ ಮಾಡುವಿರಿ. ಸಂಗಾತಿಯ ಜೊತೆ ಸರಸದಿಂದ ಹರಟೆ ಹೊಡೆಯುವಿರಿ. ಮಕ್ಕಳ‌ ಕಾರ್ಯವು ನಿಮಗೆ ಹೆಮ್ಮೆ ಎನಿಸುವುದು. ನಿಮಗೆ ಉತ್ಸಾಹವನ್ನು ತುಂಬುವ ಜನರ ಅವಶ್ಯಕತೆ ಇರಲಿದೆ. ಬೇಕೆಂದೇ ನಿಮ್ಮ ಮೇಲೆ ಯಾರಾದರೂ ಎರಗಿ ಬರಬಹುದು. ಕುಟುಂಬದಲ್ಲಿ ಐಕಮತ್ಯದ ಕೊರತೆಯು ಕಾಣಿಸುವುದು. ವಸ್ತುಗಳು ಕಾಣೆಯಾಗಬಹುದು. ಎಲ್ಲವನ್ನೂ ನಿಮ್ಮ ಮೇಲೆ‌ ಹೇರಬಹುದು.

ಲೋಹಿತ್ ಹೆಬ್ಬಾರ್ – 8762924271 (what’s app only)

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language