Hashtagintro

ನಾಯಕಿ ಗ್ಲಾಮರಸ್ ಬಟ್ಟೆ ತೊಟ್ಟಿದ್ದಕ್ಕೆ ಜೊತೆಗೆ ನಟಿಸಲು ನಿರಾಕರಿಸಿದ್ದ ಸಲ್ಮಾನ್

ನಾಯಕಿ ಗ್ಲಾಮರಸ್ ಬಟ್ಟೆ ತೊಟ್ಟಿದ್ದಕ್ಕೆ ಜೊತೆಗೆ ನಟಿಸಲು ನಿರಾಕರಿಸಿದ್ದ ಸಲ್ಮಾನ್

ಬಾಲಿವುಡ್​​ ಸಿನಿಮಾಗಳೆಂದರೆ ಅವುಗಳಲ್ಲಿ ಗ್ಲಾಮರ್, ಬಿಕಿನಿ ಧರಿಸಿದ ಯುವತಿಯರು, ಹಸಿ-ಬಿಸಿ ದೃಶ್ಯಗಳ ಸರಮಾಲೆ ತೀರಾ ಸಾಮಾನ್ಯ. ನಾಯಕಿಯರಂತೂ ಸಾಧ್ಯವಾದಷ್ಟು ಕಡಿಮೆ ಬಟ್ಟೆಗಳನ್ನು ಧರಿಸಲು ಶತಪ್ರಯತ್ನ ಮಾಡುತ್ತಾರೆ. ಇನ್ನು ಚುಂಬನದ ದೃಶ್ಯಗಳಂತೂ ಸರ್ವೇ ಸಾಮಾನ್ಯ. ಕೆಲವೊಂದು ಸಿನಿಮಾಗಳಲ್ಲಿ ಅಂತೂ ಚುಂಬನದ ದೃಶ್ಯಗಳ ನಡುವೆ ಕತೆಯನ್ನು ಹುಡುಕಿ ತೆಗೆಯಬೇಕು ಪ್ರೇಕ್ಷಕ. ಆದರೆ ಇದು ಎಲ್ಲ ನಟರ ಸಿನಿಮಾಗಳಲ್ಲಿ ಅಲ್ಲ. ಸಲ್ಮಾನ್ ಖಾನ್, ಈ ವರೆಗೆ ತೆರೆಯ ಮೇಲೆ ಚುಂಬನದ ದೃಶ್ಯಗಳಲ್ಲಿ ನಟಿಸಿದವರಲ್ಲ. ಇತ್ತೀಚೆಗೆ ಕಾಫಿ ವಿತ್ ಕರಣ್ ಶೋನಲ್ಲಿ ಭಾಗಿ ಆಗಿದ್ದರು ಸಲ್ಮಾನ್ ಖಾನ್. ಒಮ್ಮೆ ನಾಯಕಿ ತುಸು ಹೆಚ್ಚು ಗ್ಲಾಮರಸ್ ಆದ ಉಡುಗೆ ತೊಟ್ಟಿದ್ದಕ್ಕೆ ಜೊತೆಯಲು ನಟಿಸಲು ಸಹ ನಿರಾಕರಿಸಿದ್ದರು ಎಂಬ ವಿಷಯ ಶೋನಲ್ಲಿ ಬಹಿರಂಗಗೊಂಡಿದೆ.

‘ಕಾಫಿ ವಿತ್ ಕರಣ್’ ಶೋನ ಒಂಬತ್ತನೇ ಮತ್ತು ಕೊನೆಯ ಸೀಸನ್ನಿನ ಮೊದಲ ಅತಿಥಿಯಾಗಿ ನಟ ಸಲ್ಮಾನ್ ಖಾನ್ ಆಗಮಿಸಿದ್ದರು. ಈ ಸಂಚಿಕೆಯಲ್ಲಿ ಸಲ್ಮಾನ್ ಖಾನ್ ಜೊತೆಗೆ ‘ದುಲ್ಹನ್ ಹಮ್ ಲೇ ಜಾಯೇಂಗೆ’ ಚಿತ್ರದ ಅವರ ಸಹ-ನಟಿ ಕರೀನಾ ಕಪೂರ್ ಕೂಡ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಇಬ್ಬರೂ ತಮ್ಮ ಹಳೆಯ ದಿನಗಳ ಮಧುರ ಹಾಗೂ ಸ್ವಾರಸ್ಯಕರ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಸಂದರ್ಶನದ ವೇಳೆ ಕರೀನಾ ಕಪೂರ್ ಅವರು, ತಾವು ಮತ್ತು ಸಲ್ಮಾನ್ ಖಾನ್ ಒಟ್ಟಿಗೆ ಕೆಲಸ ಮಾಡುವಾಗ ಸೆಟ್‌ನಲ್ಲಿ ಆಗಾಗ್ಗೆ ಜಗಳವಾಡಿಕೊಳ್ಳುತ್ತಿದ್ದರು ಎಂದು ಬಹಿರಂಗಪಡಿಸಿದರು. ಶೂಟಿಂಗ್ ಆರಂಭವಾಗುವ ಮುನ್ನ ಬೆಳಗಿನ ಉಪಾಹಾರದ ಸಮಯದಲ್ಲಿ ತಾವು ಇಬ್ಬರೂ ಒಟ್ಟಿಗೆ ಚಾಕೊಲೇಟ್‌ಗಳನ್ನು ಸವಿಯುತ್ತಿದ್ದೆವು ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು. ಆದರೆ ಅದೇ ಸಮಯದಲ್ಲಿ ಸಣ್ಣಪುಟ್ಟ ವಿಚಾರಗಳಿಗೂ ತಮ್ಮಿಬ್ಬರ ನಡುವೆ ವಾಗ್ವಾದಗಳು ನಡೆಯುತ್ತಿದ್ದವು ಎಂದು ಕರೀನಾ ತಿಳಿಸಿದರು.

ಇದನ್ನೂ ಓದಿ:‘ಕೆಜಿಎಫ್‌ ಸ್ಟೈಲ್ ರಿಪೀಟ್ ಆಗಿದೆ’; ರಾಮಾಯಣದ ಯಶ್ ಗೆಟಪ್ ಬಗ್ಗೆ ಬಾಲಿವುಡ್ ನಟನ ಟೀಕೆ

‘ದುಲ್ಹನ್ ಹಮ್ ಲೇ ಜಾಯೇಂಗೆ’ ಚಿತ್ರದ ಶೂಟಿಂಗ್ ಸಮಯವನ್ನು ನೆನಪಿಸಿಕೊಂಡ ಕರೀನಾ, ತಾನು ಆ ಚಿತ್ರದಲ್ಲಿ ಧರಿಸಿದ್ದ ವಿಶೇಷವಾದ ಉಡುಪಿನ ಬಗ್ಗೆ ತುಂಬಾ ಉತ್ಸುಕಳಾಗಿದ್ದೆ ಎಂದು ಹೇಳಿದರು. ತಾನು ಆ ಡ್ರೆಸ್‌ನಲ್ಲಿ ತುಂಬಾ ಚೆನ್ನಾಗಿ ಕಾಣಿಸುತ್ತೇನೆ ಎಂದುಕೊಂಡಿದ್ದೆ. ಆದರೆ ಸಲ್ಮಾನ್ ಖಾನ್ ಅದನ್ನು ನೋಡಿ, ‘ನೀವು ಏನು ಧರಿಸಿದ್ದೀರಿ? ಈ ರೀತಿಯ ಬಟ್ಟೆ ಧರಿಸಿ ನಾನು ನಿಮ್ಮೊಂದಿಗೆ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುವುದಿಲ್ಲ’ ಎಂದು ಸ್ಪಷ್ಟವಾಗಿ ನಿರಾಕರಿಸಿದ್ದರು ಎಂದು ಕರೀನಾ ಬಹಿರಂಗಪಡಿಸಿದರು.

ಸಲ್ಮಾನ್ ಖಾನ್ ಶೂಟಿಂಗ್ ಮಾಡಲು ಒಪ್ಪದಿದ್ದಾಗ, ಕರೀನಾ ಕಪೂರ್ ನೇರವಾಗಿ ಚಿತ್ರದ ನಿರ್ದೇಶಕ ಡೇವಿಡ್ ಧವನ್ ಅವರ ಬಳಿ ತೆರಳಿ ಸಲ್ಮಾನ್ ತಮ್ಮ ಉಡುಪಿಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವ ಬಗ್ಗೆ ದೂರು ನೀಡಿದ್ದರು. ಆ ಉಡುಪು ಹೆಚ್ಚು ಗ್ಲಾಮರಸ್ ಆಗಿತ್ತು ಎಂಬ ಕಾರಣಕ್ಕೆ ಸಲ್ಮಾನ್ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಕರೀನಾ ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ಸಲ್ಮಾನ್ ಖಾನ್, ಕರೀನಾ ಧರಿಸಿದ್ದ ಬಟ್ಟೆ ತುಂಬಾ ಚಿಕ್ಕದಾಗಿತ್ತು. ಪ್ರತಿಯೊಂದು ಟೇಕ್ ಗೂ ಮುನ್ನ ತಾನು ಆ ಬಟ್ಟೆಯನ್ನು ಸ್ವಲ್ಪ ಕೆಳಗೆ ಎಳೆದುಕೊಳ್ಳುವಂತೆ ಕರೀನಾಗೆ ಹೇಳುತ್ತಿದ್ದೆ ಎಂದು ಸಲ್ಮಾನ್ ವಿವರಿಸಿದರು. ಕರೀನಾ ಕಪೂರ್ ಕೂಡ ಮಾತನಾಡಿ, ಸಲ್ಮಾನ್ ತಮ್ಮ ಬಗ್ಗೆ ಅತಿಯಾದ ರಕ್ಷಣಾತ್ಮಕ ಭಾವ ಹೊಂದಿದ್ದರು ಮತ್ತು ‘ಹೋಗಿ ಅದನ್ನು ಬದಲಾಯಿಸಿ, ನನಗೆ ಈ ಬಟ್ಟೆ ಇಷ್ಟವಿಲ್ಲ’ ಎಂದು ಹೇಳುತ್ತಿದ್ದರು ಎಂದು ತಿಳಿಸಿದರು.

90ರ ದಶಕದಲ್ಲಿ ಈ ಜೋಡಿಯು ‘ಜುಡ್ವಾ’, ‘ಬೀವಿ ನಂ. 1’, ‘ಹಮ್ ಸಾಥ್-ಸಾಥ್ ಹೈನ್’ ಸೇರಿದಂತೆ ಹಲವು ಯಶಸ್ವಿ ಚಿತ್ರಗಳಲ್ಲಿ ಒಟ್ಟಿಗೆ ನಟಿಸುವ ಮೂಲಕ ಬಾಲಿವುಡ್‌ನ ಅತ್ಯಂತ ನೆಚ್ಚಿನ ಆನ್-ಸ್ಕ್ರೀನ್ ಜೋಡಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language