Hashtagintro

ಪಟಾಕಿ ಹಚ್ಚಿದವರಿಗಿಂತ ನೋಡುತ್ತಿದ್ದವರಿಗೇ ಹೆಚ್ಚು ಅಪಾಯ: ಬೆಂಗಳೂರಿನಲ್ಲಿ 150ರ ಗಡಿ ದಾಟಿದ ಪ್ರಕರಣಗಳು

ಪಟಾಕಿ ಹಚ್ಚಿದವರಿಗಿಂತ ನೋಡುತ್ತಿದ್ದವರಿಗೇ ಹೆಚ್ಚು ಅಪಾಯ: ಬೆಂಗಳೂರಿನಲ್ಲಿ 150ರ ಗಡಿ ದಾಟಿದ ಪ್ರಕರಣಗಳು

ಬೆಂಗಳೂರು, ನವೆಂಬರ್​​ 10: ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಎನ್ನುವಂತಾಗಿದೆ. ಪಟಾಕಿ ಹಚ್ಚಿದವರಿಗಿಂತ ಪಟಾಕಿ ಹಚ್ಚದೇ ಇದ್ದವರಿಗೆ ಈ ಬಾರಿ ಹೆಚ್ಚು ಅಪಾಯ ಎದುರಾಗಿದೆ. ರಸ್ತೆಯಲ್ಲಿ ಹೋಗುವವರು, ನಿಂತು ನೋಡುವವರು, ಆಟವಾಡುವ ಪುಟ್ಟ ಮಕ್ಕಳು ಹೀಗೆ ಅನೇಕರ ಕಣ್ಣಿಗೆ ಪಟಾಕಿ ಕಿಡಿ ತಗುಲಿ ಆಸ್ಪತ್ರೆ ಸೇರುವಂತಾಗಿದೆ. ಬೆಳಕಿನ ಹಬ್ಬದಲ್ಲಿ ಅದೆಷ್ಟೋ ಕುಟುಂಬಗಳ ಬದುಕಿನಲ್ಲಿ ಕತ್ತಲು ಆವರಿಸಿದೆ. ಬೆಂಗಳೂರಿನಲ್ಲಿ ಪಟಾಕಿ ಅವಘಡಗಳ ಸಂಖ್ಯೆ 150ರ ಗಡಿ ದಾಟಿದ್ದು, ಕಣ್ಣಿನ ಆಸ್ಪತ್ರೆಗಳು ಗಾಯಾಳುಗಳಿಂದ ತುಂಬಿವೆ.

ಬೆಳಕಿನ ಹಬ್ಬ ದೀಪಾವಳಿ ಹಬ್ಬ ಅನೇಕರ ಪಾಲಿಗೆ ಕಣ್ಣೀರಿನ ಕಥೆಯಾಗಿದೆ. ಪ್ರತಿವರ್ಷ ಪಟಾಕಿ ಸಿಡಿತದಿಂದಾಗುವ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಿದರೂ ಪ್ರಯೋಜನವಾಗುತ್ತಿಲ್ಲ. ಈ ವರ್ಷವಂತೂ ಬೆಂಗಳೂರಿನಲ್ಲಿ ಪಟಾಕಿ ಅವಘಡಗಳ ಸಂಖ್ಯೆ ಆತಂಕಕಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಅದರಲ್ಲೂ ವಿಶೇಷವಾಗಿ ಪಟಾಕಿ ಹಚ್ಚಿದವರಿಗಿಂತ ಬೇರೆಯವರು ಹಚ್ಚಿದ ಪಟಾಕಿಗೆ ಗಾಯಗೊಂಡವರ ಸಂಖ್ಯೆಯೇ ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಬೈಸ್ಟ್ಯಾಂಡರ್ಸ್‌ಗಳಿಗೇ ಹೆಚ್ಚು ಸಕಷ್ಟ

ಈ ಬಾರಿ ಪಟಾಕಿ ಅವಘಡಗಳಲ್ಲಿ ಬೈಸ್ಟ್ಯಾಂಡರ್ಸ್‌ಗಳೇ ಹೆಚ್ಚು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, ಮನೆ ಮುಂದೆ ನಿಂತು ನೋಡುವಾಗ, ಎಲ್ಲಿಂದಲೋ ಹಾರಿ ಬಂದ ರಾಕೆಟ್ ಮತ್ತು ಪಟಾಕಿ ಕಿಡಿಗಳು ಕಣ್ಣಿಗೆ ಬಿದ್ದು ಗಾಯಗೊಂಡಿದ್ದಾರೆ. ಸರಿಸುಮಾರು 40ಕ್ಕೂ ಹೆಚ್ಚು ಬೈಸ್ಟ್ಯಾಂಡರ್ಸ್‌ಗಳು ಪಟಾಕಿ ಅವಘಡದಿಂದ ಕಣ್ಣಿನ ಗಾಯಕ್ಕೆ ತುತ್ತಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ದೀಪಾವಳಿ 2026: ಬೆಂಗಳೂರಿನಲ್ಲಿ ಪಟಾಕಿ ಅವಾಂತರ; 100ಕ್ಕೂ ಹೆಚ್ಚು ಮಂದಿಗೆ ಕಣ್ಣಿನ ಗಾಯ!

ಇನ್ನೂ ಆಘಾತಕಾರಿ ಸಂಗತಿಯೆಂದರೆ ಈ ಗಾಯಾಳುಗಳಲ್ಲಿ ಪುಟ್ಟ ಮಕ್ಕಳ ಸಂಖ್ಯೆಯೂ ಹೆಚ್ಚಿದೆ. ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದೊಡ್ಡಬಳ್ಳಾಪುರದ 12 ವರ್ಷದ ಬಾಲಕನ ಕಣ್ಣಿಗೆ ಬೇರೆಯವರು ಹಚ್ಚಿದ ಪಟಾಕಿಯಿಂದ ಗಂಭೀರ ಗಾಯವಾಗಿದೆ. ಬಾಲಕನ ದೃಷ್ಟಿಗೆ ತೀವ್ರ ಅಪಾಯ ಎದುರಾಗಿದೆ. ಇನ್ನು ರಾಯಚೂರಿನ ಸಣ್ಣಹಳ್ಳಿಯ 11 ವರ್ಷದ ಶಿವಲೀಲಾ ಎಂಬ ಬಾಲಕಿ ಸಂಬಂಧಿಕರ ಮನೆಯಿಂದ ಮನೆಗೆ ನಡೆದುಕೊಂಡು ಹೋಗುವಾಗ ಪಟಾಕಿಯ ಕಿಡಿ ಆಕೆಯ ಕಣ್ಣಿಗೆ ಬಿದ್ದಿದೆ. ಗಂಭೀರ ಗಾಯಗೊಂಡ ಬಾಲಕಿಯನ್ನು ಪೋಷಕರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಿಂಟೋ ಆಸ್ಪತ್ರೆಗೆ ಕರೆತಂದಿದ್ದಾರೆ. ಕಣ್ಣಿಗೆ ಗಾಯಗೊಂಡ ಮಗಳ ಸ್ಥಿತಿ ಕಂಡು ಪೋಷಕರು ಕಣ್ಣೀರು ಹಾಕುವಂತಾಗಿದೆ.

ಬೆಂಕಿಯಿದ್ದ ಪಟಾಕಿ ಮೇಲೆ ಕಾಲಿಟ್ಟಿದ್ದ ಯುವಕನ ಪಾದವೇ ಛಿದ್ರ

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಮಲೆಬೆಟ್ಟಿನಲ್ಲಿ ಬೆಂಕಿಯಿದ್ದ ಪಟಾಕಿ ಮೇಲೆ ಕಾಲಿಟ್ಟಿದ್ದ ಯುವಕನ ಬಲಗಾಲಿನ ಪಾದವೇ ಛಿದ್ರವಾಗಿದೆ. ಪೊರ್ಕಂಡದ ಕೃಷ್ಣಪ್ಪಗೌಡ ಪುತ್ರ ಲಿಕೇಶ್ ಗೌಡ(20) ಸ್ಥಿತಿ ಗಂಭೀರವಾಗಿದೆ. ಬೆಂಕಿ ಹಚ್ಚಿದ ಪಟಾಕಿ ಮೇಲೆ ಕಾಲಿಟ್ಟಾಗ ಸಿಡಿದಿದ್ದರಿಂದ ಪಾದ ಛಿದ್ರವಾಗಿದೆ. ಸದ್ಯ ಗಾಯಾಳು ಲಿಕೇಶ್​ನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಸ್ಪತ್ರೆವಾರು ಪ್ರಕರಣಗಳ ವಿವರ

ಇನ್ನು ದಿನದಿಂದ ದಿನಕ್ಕೆ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವ ಗಾಯಾಳುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಬೆಂಗಳೂರಿನ ಪ್ರಮುಖ ಕಣ್ಣಿನ ಆಸ್ಪತ್ರೆಗಳಲ್ಲಿ ಪಟಾಕಿ ಅವಘಡದಿಂದ ಗಾಯಗೊಂಡವರ ಸಂಖ್ಯೆ 150ರ ಗಡಿ ದಾಟಿದೆ. ನಾರಾಯಣ ನೇತ್ರಾಲಯವೊಂದರಲ್ಲೇ 51 ಪ್ರಕರಣಗಳು ದಾಖಲಾಗಿದ್ದರೆ, ಮಿಂಟೋ ಆಸ್ಪತ್ರೆಯಲ್ಲಿ 36, ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ 26 ಪ್ರಕರಣಗಳು ವರದಿಯಾಗಿವೆ. ಪ್ರಭಾ ಕಣ್ಣಿನ ಆಸ್ಪತ್ರೆಯಲ್ಲಿ 15, ಮೋದಿ ಕಣ್ಣಿನ ಆಸ್ಪತ್ರೆಯಲ್ಲಿ 5, ಅಗ್ರವಾಲ್ ಕಣ್ಣಿನ ಆಸ್ಪತ್ರೆಯಲ್ಲಿ 4 ಹಾಗೂ ಬೆಂಗಳೂರು ನೇತ್ರಾಲಯದಲ್ಲಿ 6 ಪ್ರಕರಣಗಳು ದಾಖಲಾಗಿವೆ.

.liveTvWebbx {
background: #fff;
margin-bottom: 10px;
}

.liveTvWebbx span {
display: flex;
align-items: center;
justify-content: center;
background: #dc0000;
padding: 5px 0;
}

.liveTvWebbx span a {
color: #fff;
font-size: 22px;
display: flex;
align-items: center;
justify-content: center;
font-weight: 600;
line-height: 28px;
text-decoration: none;
}
.liveTvWebbx span a:hover{color:#fff;}
.liveTvWebbx span a svg {
width: 2rem;
height: 2rem;
margin-right: 5px;
display: inline-block;
flex-shrink: 0;
vertical-align: middle;
fill: none;
stroke: #fff;
stroke-width: 2;
stroke-linecap: round;
stroke-linejoin: round;
transform-origin: center;
animation: livePulse 1.3s ease-in-out infinite;
}

@keyframes livePulse {
0% {
transform: scale(1);
opacity: 1;
}

50% {
transform: scale(1.08);
opacity: 1;
}

100% {
transform: scale(1);
opacity: 1;
}
}

.liveTvWebbx iframe,
.liveTvWebbx amp-iframe {
width: 100%; height: auto; aspect-ratio: 16 / 9; display: block; border: none;
}


LIVE TV

document.addEventListener(‘DOMContentLoaded’, function () {

let liveTV = document.querySelector(‘.live-tv-tracking’);

if (liveTV) {
liveTV.addEventListener(‘click’, function () {

if (typeof dataLayer !== ‘undefined’) {
dataLayer.push({
‘event’: ‘article_live_tv_click’,
‘widget_name’: ‘article_live_tv’,
‘click_location’: ‘article’
});
}

});
}

});

ಇನ್ನು ಇತರೆ ಆಸ್ಪತ್ರೆಗಳಲ್ಲೂ 20ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಬಹುತೇಕರು ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದರೂ ಗಂಭೀರವಾಗಿ ಗಾಯಗೊಂಡವರು ಇನ್ನೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಗತ್ಯವಿರುವ ಗಾಯಾಳುಗಳಿಗೆ ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ದೀಪಾವಳಿ ಪಟಾಕಿ ದುರಂತ: ಮೊದಲ ದಿನವೇ ಮಕ್ಕಳೂ ಸೇರಿ 32 ಮಂದಿಗೆ ಗಾಯ

ಒಟ್ಟಿನಲ್ಲಿ ಪ್ರತಿವರ್ಷ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸುರಕ್ಷತೆ ಬಗ್ಗೆ ಜಾಗೃತಿ ಅಭಿಯಾನಗಳು ನಡೆಯುತ್ತವೆ. ಹಸಿರು ಪಟಾಕಿ ಬಳಕೆಗೆ ನಿಯಮಗಳೂ ಇವೆ. ಆದರೂ ನಿಯಮಗಳ ಪಾಲನೆ ಎಷ್ಟರಮಟ್ಟಿಗೆ ಆಗುತ್ತಿದೆ ಎಂಬ ಪ್ರಶ್ನೆ ಎದುರಾಗಿದೆ. ಪಟಾಕಿಗಳ ಮಾರಾಟ ಮತ್ತು ಬಳಕೆಯ ಮೇಲೆ ಸರಿಯಾದ ನಿಗಾ ಇದೆಯೇ? ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಸಿಡಿಸುವುದಕ್ಕೆ ಕಡಿವಾಣ ಹಾಕಲಾಗಿದೆಯೇ? ಜನರಲ್ಲಿ ಸುರಕ್ಷತೆಯ ಬಗ್ಗೆ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಲಾಗಿದೆಯೇ? ಎಂಬ ಪ್ರಶ್ನೆಗಳು ಎದ್ದಿವೆ. ಇಷ್ಟು ದಿನ ಪಟಾಕಿ ಸಿಡಿಸುವಾಗ ಎಚ್ಚರಿಕೆಯಿಂದಿರಿ ಎಂದು ಹೇಳುತ್ತಿದ್ದೆವು. ಆದರೆ ಈಗ ಪಟಾಕಿ ಸಿಡಿಸುವವರಷ್ಟೇ ಅಲ್ಲ, ರಸ್ತೆಯಲ್ಲಿ ನಡೆದುಕೊಂಡು ಹೋಗುವವರೂ ಎಚ್ಚರಿಕೆಯಿಂದ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language