Hashtagintro

ಬರ ಪರಿಹಾರದಲ್ಲಿ ವ್ಯತ್ಯಾಸ: ರೈತರು ಆಕ್ರೋಶ; ಸರ್ಕಾರಕ್ಕೆ ಚೆಕ್ ಬರೆದ ಅನ್ನದಾತರು

ಬರ ಪರಿಹಾರದಲ್ಲಿ ವ್ಯತ್ಯಾಸ: ರೈತರು ಆಕ್ರೋಶ; ಸರ್ಕಾರಕ್ಕೆ ಚೆಕ್ ಬರೆದ ಅನ್ನದಾತರು

ಯಾದಗಿರಿ, ನವೆಂಬರ್​​ 10: ರಾಜ್ಯ ಸರ್ಕಾರ ಬರಪೀಡಿತ ಪ್ರದೇಶಗಳ ರೈತರಿಗೆ ಇನ್‌ಪುಟ್ ಸಬ್ಸಿಡಿಯಾಗಿ ಪ್ರತಿ ರೈತರಿಗೆ 2,500 ರೂ ಮೊದಲ ಕಂತಿನಲ್ಲಿ ನೀಡುವುದಾಗಿ ಘೋಷಿಸಿತ್ತು. ಆದರೆ ಯಾದಗಿರಿ ಜಿಲ್ಲೆಯ ಹೊನಗೇರ ಗ್ರಾಮದ ಕೆಲ ರೈತರಿಗೆ 1,000, 1,500 ಮತ್ತೊಬ್ಬರಿಗೆ 2,000 ಮಾತ್ರ ಖಾತೆಗೆ ಜಮೆಯಾಗಿದೆ. ಆ ಮೂಲಕ ಬರ ಪರಿಹಾರ ವಿತರಣೆಯಲ್ಲಿ ವ್ಯತ್ಯಾಸ ಕಂಡುಬಂದಿದ್ದು, ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಖಾತೆಗೆ ಜಮೆಯಾದ 1,500 ರೂ ಪರಿಹಾರದ ಜೊತೆಗೆ ತಮ್ಮ ಕೈಯಿಂದ 1,000 ರೂ ಸೇರಿಸಿ ಒಟ್ಟು 2,500 ಮೊತ್ತದ ಚೆಕ್​ ಅನ್ನು ಬರೆದು ವಾಪಸ್ ಕಳುಹಿಸುತ್ತಿದ್ದಾರೆ. ಆ ಮೂಲಕ ವಿನೂತನ ಪ್ರತಿಭಟನೆಗೆ ಮುಂದಾಗಿದ್ದಾರೆ. ‘ನಿಮ್ಮ ಹಣ ನಮಗೆ ಬೇಡ, ನಮ್ಮ ಹಣವನ್ನೇ ತಗೊಳ್ಳಿ’ ಎಂದು ಆಕ್ರೋಶ ಹೊರಹಾಕಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language