Hashtagintro

ಬಾಕ್ಸ್‌ ಆಫೀಸ್‌ನಲ್ಲಿ ‘ರಾಮಾಯಣ’ ಹವಾ; ವಿಶ್ವದಾದ್ಯಂತ ಯಶ್ ಸಿನಿಮಾ ಗಳಿಸಿದ್ದೆಷ್ಟು?

ಬಾಕ್ಸ್‌ ಆಫೀಸ್‌ನಲ್ಲಿ ‘ರಾಮಾಯಣ’ ಹವಾ; ವಿಶ್ವದಾದ್ಯಂತ ಯಶ್ ಸಿನಿಮಾ ಗಳಿಸಿದ್ದೆಷ್ಟು?

ಬಾಕ್ಸ್‌ ಆಫೀಸ್‌ನಲ್ಲಿ ‘ರಾಮಾಯಣ’ ಸಿನಿಮಾ ಭರ್ಜರಿ ಪ್ರದರ್ಶನ ಮುಂದುವರಿಸಿದ್ದು, ವಿಶ್ವಾದ್ಯಂತ ಒಟ್ಟು ಗಳಿಕೆಯು 1,384.50 ಕೋಟಿ ರೂಪಾಯಿ ಗಡಿ ದಾಟಿದೆ. ಸಿನಿಮಾದ ಒಟ್ಟು ಭಾರತೀಯ ನೆಟ್ ಕಲೆಕ್ಷನ್ 760.60 ಕೋಟಿ ಹಾಗೂ ಗ್ರಾಸ್ 909.00 ಕೋಟಿಗೆ ತಲುಪಿದೆ. ಈ ಸಿನಿಮಾ ಭಾರತದಲ್ಲಿ ಶೀಘ್ರವೇ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ.

‘ರಾಮಾಯಣ’ ಸಿನಿಮಾಗೆ ವಿದೇಶದಲ್ಲೂ ಭರ್ಜರಿ ಕಲೆಕ್ಷನ್ ಆಗುತ್ತಿದೆ. ಸಾಗರೋತ್ತರ ಮಾರುಕಟ್ಟೆಯಲ್ಲಿ 475.50 ಕೋಟಿ ರೂಪಾಯಿ ಗಳಿಕೆ ದಾಖಲಾಗಿದೆ. ಕೇವಲ 11ನೇ ದಿನವಾದ ಭಾನುವಾರ ಒಂದೇ ದಿನ ದೇಶಾದ್ಯಂತ ವಿವಿಧ ಭಾಷೆಗಳಿಂದ ಸಿನಿಮಾವು 75.00 ಕೋಟಿ ನಿವ್ವಳ ಹಾಗೂ 89.50 ಕೋಟಿ ಗ್ರಾಸ್ ಗಳಿಕೆ ದಾಖಲಿಸುವ ಮೂಲಕ ತನ್ನ ಅಬ್ಬರವನ್ನು ಮುಂದುವರಿಸಿದೆ.

ಸಿನಿಮಾದ ಮೊದಲ ವಾರದ ಒಟ್ಟು ಗಳಿಕೆಯ ಬಗ್ಗೆ ನೋಡುವುದಾದರೆ, ಮೊದಲ ವಾರದಲ್ಲಿ ಈ ಚಿತ್ರವು ಭಾರತದಲ್ಲಿ ಒಟ್ಟು 564.60 ಕೋಟಿ ನೆಟ್ ಹಾಗೂ 675.05 ಕೋಟಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಅತ್ಯುತ್ತಮ ಆರಂಭಿಕ ಮುನ್ನಡೆ ಸಾಧಿಸಿತ್ತು. ಪ್ರೇಕ್ಷಕರಿಂದ ಸಿಕ್ಕ ಈ ಭರ್ಜರಿ ಬೆಂಬಲವು ಚಿತ್ರದ ಬಾಕ್ಸ್‌ ಆಫೀಸ್ ಪಯಣಕ್ಕೆ ಬಲವಾದ ಬುನಾದಿ ಹಾಕಿಕೊಟ್ಟಿತು.

ಇನ್ನು ಎರಡನೇ ವಾರದ ವಾರಾಂತ್ಯದಲ್ಲಿ ಅಂದರೆ ಶುಕ್ರವಾರ, ಶನಿವಾರ ಹಾಗೂ ಭಾನುವಾರದ ಮೂರು ದಿನಗಳಲ್ಲಿ ಚಿತ್ರದ ಗಳಿಕೆ ಮತ್ತೊಮ್ಮೆ ಗರಿಗೆದರಿದೆ. ಈ ಮೂರು ದಿನಗಳಲ್ಲಿ (ದಿನ 9 ರಿಂದ 11 ರವರೆಗೆ) ಒಟ್ಟು 196.00 ಕೋಟಿ ನೆಟ್ ಹಾಗೂ 233.95 ಕೋಟಿ ಗ್ರಾಸ್ ಗಳಿಕೆ ದಾಖಲಾಗಿದೆ. ಶುಕ್ರವಾರದಂದು ಸ್ವಲ್ಪ ಮಂದಗತಿಯಲ್ಲಿದ್ದ ಕಲೆಕ್ಷನ್, ಶನಿವಾರ ಮತ್ತು ಭಾನುವಾರ ವೀಕೆಂಡ್ ಹಿನ್ನೆಲೆಯಲ್ಲಿ ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುವ ಮೂಲಕ ಭರ್ಜರಿ ಜಿಗಿತ ಕಂಡಿದೆ.

ಇದನ್ನೂ ಓದಿ: ‘ರಾಮಾಯಣ’ ಚಿತ್ರದ ಸೀತೆ ಪಾತ್ರಕ್ಕೆ ಟೀಕೆ; ಪ್ರತಿಕ್ರಿಯೆ ನೀಡಿದ ನಿರ್ದೇಶಕ ನಿತೇಶ್ ತಿವಾರಿ

ಭಾಷಾವಾರು ಸಂಗ್ರಹದ ಕುರಿತು ಹೇಳುವುದಾದರೆ, 11ನೇ ದಿನದಂದು ಹಿಂದಿ ಭಾಷೆಯಲ್ಲಿ 55.00 ಕೋಟಿ ರೂಪಾಯಿ, ಕನ್ನಡದಲ್ಲಿ 5.75 ಕೋಟಿ ರೂಪಾಯಿ, ಮಲಯಾಳಂನಲ್ಲಿ 5 ಕೋಟಿ ರೂಪಾಯಿ, ತಮಿಳಿನಲ್ಲಿ 4.75 ಕೋಟಿ ರೂಪಾಯಿ ಹಾಗೂ ತೆಲುಗಿನಲ್ಲಿ 4.50 ಕೋಟಿ ರೂಪಾಯಿ ಗಳಿಸುವ ಮೂಲಕ ಎಲ್ಲಾ ಪ್ರಾದೇಶಿಕ ಮಾರುಕಟ್ಟೆಗಳಲ್ಲೂ ಉತ್ತಮ ಪ್ರದರ್ಶನ ಕಾಯ್ದುಕೊಂಡಿದೆ. ಒಟ್ಟಾರೆಯಾಗಿ ರಾಮಾಯಣ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಸಾರ್ವಕಾಲಿಕ ದಾಖಲೆಯತ್ತ ದಾಪುಗಾಲಿಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language