Hashtagintro

ಬಿಗ್​​ಬಾಸ್ ಮನೆಯಿಂದ ಹೊರಬಂದ ಮತ್ತೊಬ್ಬ ವೈಲ್ಡ್ ಕಾರ್ಡ್ ಸ್ಪರ್ಧಿ

ಬಿಗ್​​ಬಾಸ್ ಮನೆಯಿಂದ ಹೊರಬಂದ ಮತ್ತೊಬ್ಬ ವೈಲ್ಡ್ ಕಾರ್ಡ್ ಸ್ಪರ್ಧಿ

ಬಿಗ್​​ಬಾಸ್ ಕನ್ನಡ ಸೀಸನ್ 13ರ ಮನೆ ವಾರದಿಂದ ವಾರಕ್ಕೆ ಕಿರಿದಾಗುತ್ತಾ ಬರುತ್ತಿದೆ. ವೈಲ್ಡ್ ಕಾರ್ಡ್ ಮೂಲಕ ಈಗಾಗಲೇ ಒಟ್ಟು ಐದು ಜನರನ್ನು ಮನೆ ಒಳಗೆ ಕರೆದುಕೊಂಡು ಬರಲಾಗಿದೆ. ಆದರೆ ಹೀಗೆ ಬಂದವರು ಮನೆಯ ಇತರೆ ಸ್ಪರ್ಧಿಗಳ ಜೊತೆಗೆ ಹೊಂದಿಕೊಂಡು, ಅವರಷ್ಟೆ ವೇಗವಾಗಿ ಆಟ ಆಡುವಲ್ಲಿ ಎಡವುತ್ತಿದ್ದಾರೆ. ಬಂದ ಐವರು ವೈಲ್ಡ್ ಕಾರ್ಡ್ ಎಂಟ್ರಿಗಳಲ್ಲಿ ಇದೀಗ ಇಬ್ಬರು ಹೊರಗೆ ಹೋಗಿದ್ದಾರೆ. ಅದರಲ್ಲೂ ಎರಡನೇ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟವರು ಬಂದಷ್ಟೇ ವೇಗವಾಗಿ ಮನೆಯಿಂದ ಹೊರನಡೆದಿದ್ದಾರೆ. ಕಳೆದ ವಾರ ಲಕ್ಷ್ಮಿ ಅವರು ಹೊರಗೆ ಹೋಗಿದ್ದರೆ ಈ ವಾರ ಕುಮಾರಿ ಹೊರಗೆ ಹೋಗಿದ್ದಾರೆ.

ಲಕ್ಷ್ಮಿ ಮತ್ತು ಕುಮಾರಿ ಇಬ್ಬರೂ ಸಹ ಅಗ್ನಿಪರೀಕ್ಷೆ ಸ್ಪರ್ಧಿಗಳಾಗಿದ್ದು, ಅಗ್ನಿಪರೀಕ್ಷೆಯ ಅಂತಿಮ ಸುತ್ತಿಗೆ ಅವರು ಆಯ್ಕೆ ಆಗಿರಲಿಲ್ಲ. ಆದರೆ ಮಂಜನ್ನು ಬಿಗ್​​ಬಾಸ್​​ ಹೊರಗೆ ಹಾಕಿದ ಬಳಿಕ ಹಾಗೂ ಸಂಗೀತಾ ಅವರು ಅನಾರೋಗ್ಯದ ಕಾರಣದಿಂದಾಗಿ ಹೊರಹೋದ ಬಳಿಕ ಅವರ ಸ್ಥಾನ ತುಂಬಲು ಅಗ್ನಿಪರೀಕ್ಷೆಯಲ್ಲಿ ಅಂತಿಮ ಹಂತದ ವರೆಗೂ ಬಂದಿದ್ದ ಲಕ್ಷ್ಮಿ ಮತ್ತು ಕುಮಾರಿ ಅವರನ್ನು ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಮನೆಯ ಒಳಗೆ ಕಳಿಸಲಾಗಿತ್ತು. ಆದರೆ ಈ ಇಬ್ಬರಿಗೂ ಮನೆಯ ಲಯಕ್ಕೆ ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲ. ಕಳೆದ ವಾರ ಲಕ್ಷ್ಮಿ ಮನೆಯಿಂದ ಹೊರ ಹೋದರು. ಕೇವಲ ಎರಡೇ ವಾರಕ್ಕೆ ಲಕ್ಷ್ಮಿ ಹೊರಗೆ ಹೋಗಿದ್ದರು. ಈ ವಾರ ಮತ್ತೊಬ್ಬ ವೈಲ್ಡ್ ಕಾರ್ಡ್ ಎಂಟ್ರಿ ಕುಮಾರಿ ಹೊರಗೆ ಹೋಗಿದ್ದಾರೆ.

ಕುಮಾರಿ ಅವರ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಹಳ್ಳಿ ಹುಡುಗಿಯಾದ, ಯುವತಿ ಕುಮಾರಿ ತಮ್ಮ ಮುಗ್ಧತೆಯಿಂದ ಪ್ರೇಕ್ಷಕರ ಮನ ಗೆಲ್ಲುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಮನೆಗೆ ಬಂದ ಮೊದಲ ವಾರದಲ್ಲಿ ಚೆನ್ನಾಗಿಯೇ ಆಡಿದ್ದರು. ಆದರೆ ಆ ಬಳಿಕ ಅವರಿಗೆ ಹೊಂದಾಣಿಕೆ ಸಾಧ್ಯವಾಗಲಿಲ್ಲ. ಕಳೆದ ವಾರವಂತೂ ಅನಾರೋಗ್ಯದ ಕಾರಣದಿಂದಾಗಿ ಯಾವ ಆಟದಲ್ಲೂ ಸರಿಯಾಗಿ ಪಾಲ್ಗೊಳ್ಳಲು ಅವರಿಗೆ ಸಾಧ್ಯ ಆಗಲಿಲ್ಲ. ಅಂತಿಮವಾಗಿ ಈ ವಾರ ಮನೆಯಿಂದಲೇ ಹೊರಗೆ ಹೋದರು. ಸಿಕ್ಕ ಅವಕಾಶವನ್ನು ಅವರೇ ಕೈಯ್ಯಾರೆ ಹಾಳು ಮಾಡಿಕೊಂಡಂತಾಯ್ತು.

ಇದನ್ನೂ ಓದಿ:ಬಿಗ್​​ಬಾಸ್ ಮನೆಯಲ್ಲಿ ಮತ್ತೊಂದು ಲವ್​​ಸ್ಟೋರಿ? ಕೊನೆಗೂ ಸಿಕ್ತಾ ತಾಂಡವ್​​ಗೆ ಜೋಡಿ?

ಈ ವಾರ ಆಸಿಯಾ, ಕಿರಣ್, ಕುಮಾರಿ, ಪ್ರಶಾಂತ್, ಧನುಶ್, ಗಗನ್, ಜಗದೀಶ್, ಪ್ರಶಾಂತ್ ಅವರುಗಳು ನಾಮಿನೇಟ್ ಆಗಿದ್ದರು. ಅವರಲ್ಲಿ ಮೊದಲಿಗೆ ಆಸಿಯಾ ಅವರನ್ನು ಸೇಫ್ ಮಾಡಲಾಯ್ತು. ಬಳಿಕ ಗಗನ್, ಬಳಿಕ ಧನುಶ್, ಬಳಿಕ ಕಿರಣ್ ಅವರುಗಳು ಸೇಫ್ ಆದರು. ಅಂತಿಮವಾಗಿ ಜಗದೀಶ್, ಪ್ರಶಾಂತ್ ಮತ್ತು ಕುಮಾರಿ ಉಳಿದಿದ್ದರು. ಮೂವರ ಮುಂದೆಯೂ ಫಿರಂಗಿಗಳನ್ನು ಇರಿಸಲಾಯ್ತು. ಆ ಫಿರಂಗಿಯಿಂದ ಕೆಂಪು ಬಣ್ಣದ ವಸ್ತು ಹೊರಬಂದವರೆ ಅವರು ಔಟ್ ಎಂದು ಬಿಗ್​​ಬಾಸ್ ಹೇಳಿದರು. ಮೊದಲು ಪ್ರಶಾಂತ್​​ಗೆ ಬಂಗಾರದ ಬಣ್ಣದ ವಸ್ತು ಬಂದು ಅವರು ಸೇಫ್ ಆಗಿ ಮನೆಯ ಒಳಗೆ ಹೋದರು. ಬಳಿಕ ಕುಮಾರಿ ಮತ್ತು ಜಗದೀಶ್ ಅವರ ಫಿರಂಗಿ ಒಟ್ಟಿಗೆ ಢಂ ಅಂದಿತು. ಕುಮಾರಿ ಅವರ ಎದುರಿಗಿದ್ದ ಫಿರಂಗಿಯಲ್ಲಿ ಕೆಂಪು ಬಣ್ಣದ ಪೇಪರ್ ಹೊರಬೀಳುವ ಮೂಲಕ ಅವರು ಎವಿಕ್ಟ್ ಎಂಬ ತೀರ್ಪು ಬಂತು. ಜಗದೀಶ್ ಮತ್ತು ಮನೆಯ ಇತರೆ ಕೆಲವು ಸದಸ್ಯರು ಬಲು ಭಾವುಕರಾಗಿ ಕುಮಾರಿಯನ್ನು ಬೀಳ್ಕೊಟ್ಟರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language