Hashtagintro

ಬಿಗ್ ಬಾಸ್ ಮನೆಯಲ್ಲಿ ಭಾನುವಾರದ ಎಲಿಮಿನೇಷನ್​​ ಅಲ್ಲಿ ಹೊರ ಹೋದವರು ಯಾರು?

ಬಿಗ್ ಬಾಸ್ ಮನೆಯಲ್ಲಿ ಭಾನುವಾರದ ಎಲಿಮಿನೇಷನ್​​ ಅಲ್ಲಿ ಹೊರ ಹೋದವರು ಯಾರು?

ಬಿಗ್ ಬಾಸ್ ಕನ್ನಡ ಮನೆಯಲ್ಲಿ ಭಾನುವಾರ ಪ್ರೇಕ್ಷಕರಿಗೆ ಅಚ್ಚರಿಯೊಂದು ಕಾದಿತ್ತು. ಹಬ್ಬದ ವಿಶೇಷವಾಗಿ ಯಾವುದೇ ಎಲಿಮಿನೇಷನ್ ನಡೆದಿಲ್ಲ. ಕಳೆದ ವಾರ ಹಲವು ಸ್ಪರ್ಧಿಗಳು ನಾಮಿನೇಷನ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರೂ ಸಹ, ಅಂತಿಮವಾಗಿ ಯಾರು ಹೊರಹೋಗಲಿದ್ದಾರೆ ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ವೋಟಿಂಗ್ ಇಲ್ಲದೇ ಇದ್ದ ಕಾರಣದಿಂದಾಗಿ ನೋ ಎಲಿಮಿನೇಷನ್ ವೀಕ್ ಎಂದು ಘೋಷಿಸಲಾಗಿದೆ.

ಕೊನೆಯ ಹಂತದಲ್ಲಿ ಸೋನಿಕಾ ಹಾಗೂ ಶಾಸ್ತ್ರಿ ಅವರು ಡೇಂಜರ್ ಜೋನ್‌ನಲ್ಲಿ ಉಳಿದುಕೊಂಡಿದ್ದರು. ಸ್ಪರ್ಧಿಗಳಲ್ಲಿ ಆತಂಕ ಮೂಡಿಸಲು ಅವರನ್ನು ಕಾರಿನಲ್ಲಿ ಕೂರಿಸಿ ಮನೆಯಿಂದ ಹೊರಗೆ ಕಳುಹಿಸಲಾಯಿತು. ಆ ಬಳಿಕ ಸ್ವಲ್ಪ ಸಮಯದ ನಂತರ ಇಬ್ಬರನ್ನೂ ವಾಪಸ್ ಕರೆತರಲಾಗಿದ್ದು, ಮನೆಯೊಳಗೆ ಮತ್ತೆ ಕಳುಹಿಸಲಾಗಿದೆ. ಹಬ್ಬದ ಸಂಭ್ರಮದ ಪ್ರಯುಕ್ತ ಈ ವಾರ ಯಾರೂ ಕೂಡ ಎಲಿಮಿನೇಟ್ ಆಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಮತ್ತೊಂದೆಡೆ, ಮಾಡರ್ನ್ ಮಹಾಕವಿ ಮಂಜು ಅವರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆಗೆ ಮರುಪ್ರವೇಶ ಪಡೆದಿದ್ದಾರೆ. ಮಂಜು ಅವರ ಈ ಹಠಾತ್ ಎಂಟ್ರಿಯಿಂದ ಮನೆಯ ಒಳಗೆ ಹೊಸ ವಾತಾವರಣ ನಿರ್ಮಾಣವಾಗಿದೆ. ವಾರಾಂತ್ಯದ ಸಂಚಿಕೆಯು ಎಲಿಮಿನೇಷನ್ ಇಲ್ಲದಿದ್ದರೂ ಹಲವು ಕುತೂಹಲಕಾರಿ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಮಂಜ ರೀ ಎಂಟ್ರಿ: ವೈಲ್ಡ್ ಕಾರ್ಡ್ ಸ್ಪರ್ಧಿ ಅಲ್ಲ, ಕಪ್ ಕೂಡ ಸಿಗಲ್ಲ

ಈ ಮೊದಲು ಕೂಡ ಹಬ್ಬದ ಪ್ರಯುಕ್ತ ಎಲಿಮಿನೇಷನ್ ನಡೆಸದೇ ಇದ್ದ ಉದಾಹರಣೆ ಇದೆ. ಪ್ರತಿ ವರ್ಷವೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಅದು ಈ ವರ್ಷವೂ ಮುಂದುವರಿದಿದೆ ಅನ್ನೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language