
ಬೆಂಗಳೂರು, ಅಕ್ಟೋಬರ್ 26: ಬೆಂಗಳೂರಿನಲ್ಲಿ ಯಾವ ಘಳಿಗೆಯಲ್ಲಿ ಮಳೆ ಬರುತ್ತೋ, ಬಿಸಿಲು ಬರುತ್ತೋ ಗೊತ್ತಿಲ್ಲ. ಆದರೆ ಬದಲಾಗುತ್ತಿರುವ ಈ ಹವಮಾನದಿಂದ ಪೋಷಕರು ಮಾತ್ರ ತಮ್ಮ ಮಕ್ಕಳ ಬಗ್ಗೆ ಎಚ್ಚರ ವಹಿಸಲೇಬೇಕಾಗಿದೆ. ಏಕೆಂದರೆ ನಗರದಲ್ಲಿ ಮಳೆ ಶುರುವಾದ ಬೆನ್ನಲ್ಲೇ ಇದೀಗ ಸಾಂಕ್ರಾಮಿಕ ಖಾಯಿಲೆಗಳ ಸಮಸ್ಯೆ ಶುರುವಾಗಿದೆ. ಮಕ್ಕಳಲ್ಲಿ ಡೆಂಗ್ಯೂ, ವೈರಲ್ ಫೀವರ್ ಹೆಚ್ಚಿದೆ.
ಪೋಷಕರಿಗೆ ಆತಂಕ ಶುರು
ರಾಜಧಾನಿ ಬೆಂಗಳೂರಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಬಿಟ್ಟುಬಿಡದೆ ಸುರಿಯುತ್ತಿದ್ದ ಮಳೆ, ಕೊಂಚ ಬ್ರೇಕ್ ಕೊಟ್ಟಿದೆ. ಮಳೆ ಕಡಿಮೆಯಾಯ್ತು ಅಂತ ನಿಟ್ಟುಸಿರು ಬಿಡುವುದರಲ್ಲೇ ಪೋಷಕರಿಗೆ ಆತಂಕ ಶುರುವಾಗಿದೆ. ಬೆಂಗಳೂರಿನಲ್ಲಿ ಮಳೆಯಿಂದಾಗಿ ಚಳಿ ವಾತಾವರಣ ಹಿನ್ನೆಲೆ, ಮಕ್ಕಳಲ್ಲಿ ಡೆಂಗ್ಯೂ ಪ್ರಕರಣಗಳು ಪತ್ತೆಯಾಗುತ್ತಿವೆ.
ಮಕ್ಕಳಲ್ಲಿ ಶೀತ, ಕೆಮ್ಮು, ನೆಗಡಿ, ಜ್ವರ ಹೆಚ್ಚಳ
ಪ್ರತಿ ವರ್ಷ ಅಕ್ಟೋಬರ್ ವೇಳೆಗೆ ಕಡಿಮೆಯಾಗಬೇಕಿದ್ದ ಡೆಂಗ್ಯೂ ಪ್ರಕರಣಗಳು, ಈ ಬಾರಿ ಅಕ್ಟೋಬರ್ನಲ್ಲಿ ಹೆಚ್ಚಳವಾಗಿದೆ. ಕೇವಲ ಡೆಂಗ್ಯೂ ಮಾತ್ರವಲ್ಲ, ಮಕ್ಕಳಲ್ಲಿ ಶೀತ, ಕೆಮ್ಮು, ನಿಮೋನಿಯ, ನೆಗಡಿ, ಜ್ವರ ಕೂಡ ಕಂಡುಬರುತ್ತಿವೆ. ಕಳೆದ ನಾಲ್ಕೈದು ದಿನಗಳಿಂದ ಬರುತ್ತಿರುವ ಮಳೆಯಿಂದಾಗಿ ನಗರದ ಕೆಲವು ಕಡೆಗಳಲ್ಲಿ ಕಲುಷಿತ ನೀರು ನಿಂತು ಸಮಸ್ಯೆ ಉಲ್ಬಣವಾಗುತ್ತಿದೆ. ಅತಿಯಾದ ಮಳೆಯಿಂದ ಅಲ್ಲಲ್ಲಿ ನೀರು ನಿಲ್ಲುತ್ತಿದ್ದು, ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಇದರಿಂದ ಡೆಂಗ್ಯೂ, ಚಿಕೂನ್ ಗುನ್ಯಾದಂತಹ ಖಾಯಿಲೆ ಹರಡುತ್ತಿವೆ. ಶೇ. 15 ರಿಂದ 20% ಜ್ವರ ಪ್ರಕರಣಗಳು ಹೆಚ್ಚಳವಾಗಿವೆ. ಈ ಬೆನ್ನಲ್ಲೇ ಮಕ್ಕಳ ಆರೋಗ್ಯದ ಬಗ್ಗೆ ಜಾಗೃತಿ ವಹಿಸುವಂತೆ ಮಕ್ಕಳ ತಜ್ಞರು ಸಲಹೆ ನೀಡಿದ್ದಾರೆ.
.liveTvWebbx {
background: #fff;
margin-bottom: 10px;
}
.liveTvWebbx span {
display: flex;
align-items: center;
justify-content: center;
background: #dc0000;
padding: 5px 0;
}
.liveTvWebbx span a {
color: #fff;
font-size: 22px;
display: flex;
align-items: center;
justify-content: center;
font-weight: 600;
line-height: 28px;
text-decoration: none;
}
.liveTvWebbx span a:hover{color:#fff;}
.liveTvWebbx span a svg {
width: 2rem;
height: 2rem;
margin-right: 5px;
display: inline-block;
flex-shrink: 0;
vertical-align: middle;
fill: none;
stroke: #fff;
stroke-width: 2;
stroke-linecap: round;
stroke-linejoin: round;
transform-origin: center;
animation: livePulse 1.3s ease-in-out infinite;
}
@keyframes livePulse {
0% {
transform: scale(1);
opacity: 1;
}
50% {
transform: scale(1.08);
opacity: 1;
}
100% {
transform: scale(1);
opacity: 1;
}
}
.liveTvWebbx iframe,
.liveTvWebbx amp-iframe {
width: 100%; height: auto; aspect-ratio: 16 / 9; display: block; border: none;
}
LIVE TV
document.addEventListener(‘DOMContentLoaded’, function () {
let liveTV = document.querySelector(‘.live-tv-tracking’);
if (liveTV) {
liveTV.addEventListener(‘click’, function () {
if (typeof dataLayer !== ‘undefined’) {
dataLayer.push({
‘event’: ‘article_live_tv_click’,
‘widget_name’: ‘article_live_tv’,
‘click_location’: ‘article’
});
}
});
}
});
ಪೋಷಕರು ಕೈಗೊಳ್ಳಬೇಕಾದ ಮುಂಜಾಗೃತೆ ಏನು?
- ಮಕ್ಕಳಿಗೆ ಬಿಸಿ ನೀರು ಕುಡಿಸಬೇಕು
- ಸೊಳ್ಳೆಗಳು ಬಾರದಂತೆ ಮನೆ ಬಳಿ ಸ್ವಚ್ಛತೆ ಕಾಪಾಡಬೇಕು
- ಮಕ್ಕಳಿಗೆ ಮೈ ಮುಚ್ಚುವಂತೆ ಬಟ್ಟೆ ಹಾಕುವುದು
- ಚಳಿಯಲ್ಲಿ ಮಕ್ಕಳನ್ನ ಹೊರಗೆ ಕಳುಹಿಸದಿರುವುದು
- ಖಾಯಿಲೆ ಗುಣಲಕ್ಷಣಗಳು ಇದ್ದಲ್ಲಿ ವೈದ್ಯರನ್ನ ಸಂಪರ್ಕಿಸುವುದು
ಇದನ್ನೂ ಓದಿ: ಕ್ಯಾನ್ಸರ್ ಬಳಿಕ ಹಾರ್ಟ್, ಕಿಡ್ನಿ ಔಷಧಗಳ ದರ ನಿಯಂತ್ರಣಕ್ಕೆ ಚಿಂತನೆ: ರಾಜ್ಯದಿಂದ ಕೇಂದ್ರಕ್ಕೆ ಮನವಿ
ಒಟ್ಟಿನಲ್ಲಿ ಬೆಂಗಳೂರಿಲ್ಲಿ ಚಳಿ ವಾತಾವರಣದಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಪೋಷಕರು ಆತಂಕಕ್ಕೆ ಒಳಗಾಗದೆ, ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Source: TV9 Kannada Health
