Hashtagintro

ಮೋದಿಯ ಚಿನ್ನದಂಥ ಆಶಯದಿಂದ 7 ತಿಂಗಳಲ್ಲಿ ಭಾರತಕ್ಕಾಯ್ತು ದೊಡ್ಡ ಅನುಕೂಲ; ಬಂಗಾರದ ಬೆಲೆ ಇಳಿಯಲು ಪ್ರಮುಖ ಕಾರಣಗಳಿವು

ಮೋದಿಯ ಚಿನ್ನದಂಥ ಆಶಯದಿಂದ 7 ತಿಂಗಳಲ್ಲಿ ಭಾರತಕ್ಕಾಯ್ತು ದೊಡ್ಡ ಅನುಕೂಲ; ಬಂಗಾರದ ಬೆಲೆ ಇಳಿಯಲು ಪ್ರಮುಖ ಕಾರಣಗಳಿವು

ನವದೆಹಲಿ, ನವೆಂಬರ್ 23: ಪ್ರಚಂಡ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆ ಕೆಲ ತಿಂಗಳಿನಿಂದ ಝರ್ರನೆ ಕುಸಿಯುತ್ತಾ ಬರುತ್ತಿದೆ. ಚಿನ್ನದ ಬೆಲೆ ಉಚ್ಚ್ರಾಯ ಹಂತಕ್ಕೆ ಹೋದಾಗ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣದಲ್ಲೊಮ್ಮೆ, ಬಂಗಾರದ ಖರೀದಿಯನ್ನು ಕಡಿಮೆ ಮಾಡಿ ಎಂದು ಕರೆ ನೀಡಿದ್ದರು. ಅಚ್ಚರಿ ಎಂಬಂತೆ ಅದಾದ ಬಳಿಕ ಚಿನ್ನದ ಬೆಲೆ ಬಹುತೇಕ ನಿರಂತರವಾಗಿ ಇಳಿಯುತ್ತಿದೆ. ಭಾರತದಲ್ಲಿ ಚಿನ್ನದ ಖರೀದಿಯೂ ಕಡಿಮೆ ಆಗಿದೆ. ಮೋದಿ ಮಾತನ್ನು ಜನರು ಕೇಳಿದರೋ ಇಲ್ಲವೋ ಆದರೆ, ಬೆಲೆ ಇಳಿದಿರುವುದು ಹೌದು. ಆಭರಣ ಪ್ರೇಮಿಗಳು ಈಗ ಪ್ರಧಾನಿಗಳಿಗೆ ಪರಾಕ್ ಹೇಳುತ್ತಿದ್ದಾರೆ.

ಚಿನ್ನ ಖರೀದಿಸಬೇಡಿ ಎಂದು ಮೋದಿ ಹೇಳಿದ್ಯಾಕೆ?

ಭಾರತದ ಅತ್ಯಂತ ದೊಡ್ಡ ಆಮದು ವಸ್ತುಗಳಲ್ಲಿ ಪೆಟ್ರೋಲ್ ಮತ್ತು ಚಿನ್ನ ಇವೆ. ವಿಶ್ವದಲ್ಲಿ ಅತಿಹೆಚ್ಚು ಚಿನ್ನ, ಪೆಟ್ರೋಲ್ ಬಳಸುವ ದೇಶಗಳಲ್ಲಿ ಭಾರತ ಇದೆ. ಭಾರತದ ವ್ಯಾಪಾರ ಕೊರತೆ ಬಹಳ ಹೆಚ್ಚಿರಲು ಇವೆರಡೂ ವಸ್ತುಗಳು ಕಾರಣ. ಇವುಗಳ ಆಮದು ಕಡಿಮೆ ಆದಷ್ಟೂ ಭಾರತದ ಫಾರೆಕ್ಸ್ ನಿಧಿ, ವ್ಯಾಪಾರ ಕೊರತೆಗೆ ಉತ್ತಮ. ಈ ದೃಷ್ಟಿಯಿಂದ ಮೋದಿ ಅವರು ಚಿನ್ನದ ಬಳಕೆ ಮಾಡಿ ಎಂದು ಜನರಿಗೆ ಕೊಟ್ಟಿರಬಹುದು ಎನ್ನುತ್ತಾರೆ ತಜ್ಞರು.

ಅದೇನೇ ಇರಲಿ, ಮೋದಿ ಹೇಳಿದ್ದು ಕಾಕತಾಳೀಯವೋ, ಉದ್ದೇಶಪೂರ್ವಕವೋ, ಒಟ್ಟಿನಲ್ಲಿ ಭಾರತದಲ್ಲಿ ಚಿನ್ನದ ವ್ಯಾಪಾರ ಕಡಿಮೆ ಆಗಿರುವುದು ಹೌದು. ಅಖಿಲ ಭಾರತ ವ್ಯಾಪಾರಸ್ಥರ ಮಹಾಒಕ್ಕೂಟವಾದ ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲವಾಲ್ ನೀಡಿರುವ ಮಾಹಿತಿ ಪ್ರಕಾರ, 2026ರ ಏಪ್ರಿಲ್​ನಿಂದ ಅಕ್ಟೋಬರ್​ವರೆಗೆ ಚಿನ್ನದ ಆಮದು ಶೇ. 40ರಷ್ಟು ಕಡಿಮೆ ಆಗಿದೆ.

ಇದನ್ನೂ ಓದಿ: ಚೀನಾದ 7 ಟ್ರಿಲಿಯನ್ ಡಾಲರ್ ಡೆಟ್ ಮಾರುಕಟ್ಟೆಯ ಅಪಾಯ; ಭಾರತದ ಬಾಂಡ್ ಮಾರುಕಟ್ಟೆಗಿಲ್ಲ ಈ ಅಪಾಯ

ವರ್ಷದ ಹಿಂದೆ ಇದೇ ಅವಧಿಯಲ್ಲಿ 41.24 ಬಿಲಿಯನ್ ಡಾಲರ್​ನಷ್ಟು ಮೌಲ್ಯದ ಚಿನ್ನದ ಆಮದು ಮಾಡಲಾಗಿತ್ತು. ಈ ವರ್ಷ ಅದು 24.78 ಬಿಲಿಯನ್ ಡಾಲರ್ ಆಗಿದೆ. ಅಂದರೆ, ಆಮದು ಹೊರೆ 16.46 ಬಿಲಿಯನ್ ಡಾಲರ್​ನಷ್ಟು ಕಡಿಮೆ ಆಗಿದೆ. ಅಂದರೆ ಒಂದೂವರೆ ಲಕ್ಷ ಕೋಟಿ ರೂ ಹೊರೆ ಕಡಿಮೆ ಆಗಿದೆ.

ಚಿನ್ನದ ಬೆಲೆ ಇಳಿಯಲು ಇದು ಕಾರಣವಾ?

ಚಿನ್ನದ ಆಮದು ಕಡಿಮೆಗೊಂಡಿದ್ದರಿಂದಲೇ ಚಿನ್ನದ ಬೆಲೆ ಇಳಿಯಿತು ಎಂದಲ್ಲ. ಬೆಲೆ ಇಳಿಕೆಯಲ್ಲಿ ಅದರ ಪ್ರಭಾವ ಇದೆಯಾದರೂ ಅದೊಂದೇ ಕಾರಣವಲ್ಲ. ಹಲವು ಅಂತರರಾಷ್ಟ್ರೀಯ ಬೆಳವಣಿಗೆ ಮತ್ತು ಮಾರುಕಟ್ಟೆ ಸ್ಥಿತಿ ಕಾರಣವಾಗಿದೆ. ಆ ಇತರ ಪ್ರಮುಖ ಕಾರಣಗಳು ಹೀಗಿವೆ.

  • ಡಾಲರ್ ಬಲ: ಅಮೆರಿಕದ ಡಾಲರ್ ಬಲಗೊಳ್ಳುತ್ತಿದೆ. ಡಾಲರ್ ಏರಿದರೆ ಚಿನ್ನಕ್ಕೆ ಬೇಡಿಕೆ ತಗ್ಗುತ್ತದೆ.
  • ಫೆಡರಲ್ ದರಗಳ ಏರಿಕೆ: ಅಮೆರಿಕದ ರಿಸರ್ವ್ ಬ್ಯಾಂಕ್ ಆಗಿರುವ ಫೆಡರಲ್ ರಿಸರ್ವ್ ಕಳೆದ ಬಾರಿಯ ಸಭೆಯಲ್ಲಿ ಬಡ್ಡಿ ದರ ಹೆಚ್ಚಿಸಿತು. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಇನ್ನಷ್ಟು ದರ ಏರಿಸುವ ಸುಳಿವನ್ನೂ ನೀಡಿತು. ಬಡ್ಡಿದರ ಹೆಚ್ಚಿರೆ ಅಮೆರಿಕದ ಬಾಂಡ್​ಗಳು ಆಕರ್ಷಕವಾಗುತ್ತವೆ. ಚಿನ್ನದಿಂದ ಹೂಡಿಕೆಗಳು ಬಾಂಡ್​ಗಳತ್ತ ಹೊರಳುತ್ತವೆ. ಇದು ಚಿನ್ನದ ಬೆಲೆ ಕುಸಿತಕ್ಕೆ ಕಾರಣ.
  • ಪಶ್ಚಿಮ ಏಷ್ಯಾ ಉದ್ವಿಗ್ನ ಸ್ಥಿತಿ ಕಡಿಮೆ: ಅಮೆರಿಕ ಚುನಾವಣೆಯಲ್ಲಿ ಟ್ರಂಪ್ ಪಕ್ಷಕ್ಕೆ ಮುಖಭಂಗವಾಗಿರುವುದು, ಮತ್ತು ಪಶ್ಚಿಮ ಏಷ್ಯಾದಲ್ಲಿ ಶಾಂತಿ ಮರಳಿ ನೆಲೆಗೊಳ್ಳುವ ಆಶಯ ಹೆಚ್ಚಿರುವುದು ಚಿನ್ನದ ಮೇಲೆ ಹೂಡಿಕೆ ಮಾಡುವ ಅವಶ್ಯಕತೆಯನ್ನು ಕಡಿಮೆ ಮಾಡಿದೆ.

ಇದನ್ನೂ ಓದಿ: 2047ಕ್ಕೆ 26 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ: ಸಿಐಐನಿಂದ 15 ಪ್ರಮುಖ ಸುಧಾರಣೆಗಳಿಗೆ ಶಿಫಾರಸು

ಚಿನ್ನದ ಬೆಲೆ ಇನ್ನೆಷ್ಟು ಕಡಿಮೆ ಆಗಬಹುದು?

ಚಿನ್ನದ ಮೇಲೆ ಹೂಡಿಕೆ ಮಾಡಿದವರಲ್ಲಿ ಹೆಚ್ಚಿನವರು ಪ್ರಾಫಿಟ್ ಬುಕಿಂಗ್ ಮಾಡಿಯಾಗಿದೆ. ಬಂಗಾರದ ಹೂಡಿಕೆಯು ಈಗ ಓವರ್​ಸೋಲ್ಡ್ ಸ್ಥಿತಿಯಲ್ಲಿದೆ ಎನ್ನುತ್ತಾರೆ ತಜ್ಞರು. ಈ ಹಂತದಿಂದ ಹೆಚ್ಚೇನೂ ತಗ್ಗುವ ಸಾಧ್ಯತೆ ಇಲ್ಲದಿರಬಹುದು. ಅಮೆರಿಕದ ಫೆಡರಲ್ ರಿಸರ್ವ್ ಆ ದೇಶದ ಹಣದುಬ್ಬರಕ್ಕೆ ಕಡಿವಾಣ ಹಾಕಲು ಬಡ್ಡಿದರ ಹೆಚ್ಚಿಸಿದರೆ ಚಿನ್ನದ ಬೆಲೆ ಮತ್ತೊಂದು ಸುತ್ತಿನ ಕುಸಿತ ಕಂಡರೂ ಕಾಣಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source: TV9 Kannada Business

Read full article on TV9 Kannada Business

Leave a Comment

Your email address will not be published. Required fields are marked *

समाचार की भाषा चुनें / Choose News Language