Hashtagintro

‘ರಾಮಾಯಣ’ ಹೊಸ ದಾಖಲೆ; 2 ಸಾವಿರ ಕೋಟಿ ಮೇಲೆ ಕಣ್ಣಿಟ್ಟ ಯಶ್ ಚಿತ್ರ

‘ರಾಮಾಯಣ’ ಹೊಸ ದಾಖಲೆ; 2 ಸಾವಿರ ಕೋಟಿ ಮೇಲೆ ಕಣ್ಣಿಟ್ಟ ಯಶ್ ಚಿತ್ರ

ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಮುನ್ನುಗ್ಗುತ್ತಿರುವ ‘ರಾಮಾಯಣ’ ಸಿನಿಮಾ ಬಿಡುಗಡೆಯಾದ ಕೇವಲ ಎಂಟೇ ದಿನಗಳಲ್ಲಿ ವಿಶ್ವದಾದ್ಯಂತ 1,000 ಕೋಟಿ ರೂ. ಕ್ಲಬ್ ಸೇರುವ ಮೂಲಕ ಹೊಸ ದಾಖಲೆ ಬರೆದಿದೆ. ಎಂಟು ದಿನಗಳಲ್ಲಿ ಈ ಚಿತ್ರವು ವಿಶ್ವದಾದ್ಯಂತ ಒಟ್ಟು 1,033.55 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದೆ. ನವೆಂಬರ್ 5ರಂದು ತೆರೆಕಂಡ ಈ ಚಿತ್ರವು ಮೊದಲ ದಿನದಿಂದಲೂ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ತನ್ನ ಅಬ್ಬರವನ್ನು ಮುಂದುವರಿಸಿದೆ.

ಎಂಟನೇ ದಿನವಾದ ಗುರುವಾರ (ನವೆಂಬರ್ 12) ಭಾರತದಲ್ಲಿ ‘ರಾಮಾಯಣ’ ಚಿತ್ರವು ಒಟ್ಟು 24,042 ಪ್ರದರ್ಶನಗಳಿಂದ 53.50 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಹಾಗೂ 64.00 ಕೋಟಿ ರೂಪಾಯಿ ಗ್ರಾಸ್ ದಾಖಲಿಸಿದೆ. ಈ ಮೂಲಕ ಎಂಟು ದಿನಗಳ ಅಂತ್ಯಕ್ಕೆ ಭಾರತದಲ್ಲಿ ಚಿತ್ರದ ಒಟ್ಟು ನೆಟ್ ಕಲೆಕ್ಷನ್ 564.60 ಕೋಟಿ ರೂಪಾಯಿಗೆ ತಲುಪಿದ್ದು, ಒಟ್ಟು ಗ್ರಾಸ್ ಕಲೆಕ್ಷನ್ 675.05 ಕೋಟಿ ರೂಪಾಯಿ ಗಡಿ ದಾಟಿದೆ.

ಭಾಷಾವಾರು ಗಳಿಕೆಯನ್ನು ಗಮನಿಸಿದರೆ, ಎಂಟನೇ ದಿನವೂ ಹಿಂದಿ ಅವತರಣಿಕೆಯೇ ಅತಿ ಹೆಚ್ಚಿನ ಪಾಲು ಹೊಂದಿದೆ. ಹಿಂದಿಯಲ್ಲಿ 19,464 ಪ್ರದರ್ಶನಗಳಿಂದ 43 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಆಗಿದೆ. ಇನ್ನು ದಕ್ಷಿಣ ಭಾರತದ ಭಾಷೆಗಳಲ್ಲೂ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಕನ್ನಡದಲ್ಲಿ 922 ಶೋಗಳಿಂದ 3.25 ಕೋಟಿ ರೂಪಾಯಿ, ಮಲಯಾಳಂನಲ್ಲಿ 977 ಶೋಗಳಿಂದ 2.80 ಕೋಟಿ ರೂಪಾಯಿ, ತೆಲುಗಿನಲ್ಲಿ 1,783 ಶೋಗಳಿಂದ 2.30 ಕೋಟಿ ರೂಪಾಯಿ ಹಾಗೂ ತಮಿಳಿನಲ್ಲಿ 896 ಶೋಗಳಿಂದ 2.15 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ.

ಇದನ್ನೂ ಓದಿ: ಕೇವಲ 8 ದಿನಕ್ಕೆ 1000 ಕೋಟಿ ರೂ. ಕ್ಲಬ್ ಸೇರಿದ ‘ರಾಮಾಯಣ’: ಯಶ್ ಹೊಸ ದಾಖಲೆ

ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿದೇಶಿ ಮಾರುಕಟ್ಟೆಯಲ್ಲೂ ‘ರಾಮಾಯಣ’ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಎಂಟನೇ ದಿನದಂದು ಸಾಗರೋತ್ತರ ಮಾರುಕಟ್ಟೆಯಿಂದ ಚಿತ್ರವು 25 ಕೋಟಿ ರೂಪಾಯಿ ಗಳಿಸಿದ್ದು, ಈವರೆಗಿನ ಒಟ್ಟು ವಿದೇಶಿ ಗ್ರಾಸ್ ಕಲೆಕ್ಷನ್ 358.50 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ದೇಶೀಯ ಮತ್ತು ವಿದೇಶಿ ಗಳಿಕೆಗಳೆರಡೂ ಸೇರಿ ಚಿತ್ರವು 1,033.55 ಕೋಟಿ ರೂ. ಗಳಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ದೊಡ್ಡ ಮೈಲಿಗಲ್ಲನ್ನು ತಲುಪಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language