Hashtagintro

ರೋಹಿತ್, ಇಶಾನ್ ಎಡವಟ್ಟು; ಟೀಂ ಇಂಡಿಯಾಗೆ 120 ರನ್ ದಂಡ..!

ರೋಹಿತ್, ಇಶಾನ್ ಎಡವಟ್ಟು; ಟೀಂ ಇಂಡಿಯಾಗೆ 120 ರನ್ ದಂಡ..!

ಮೌಂಟ್ ಮೌಂಗನುಯಿಯಲ್ಲಿ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಆರಂಭಿಕ ವಿಲ್ ಯಂಗ್ ಭರ್ಜರಿ ಶತಕ ಬಾರಿಸುವ ಮೂಲಕ ತಂಡವನ್ನು 250 ರನ್​ಗಳ ಗಡಿ ದಾಟಿಸಿದ್ದಾರೆ. ಆದಾಗ್ಯೂ ಯಂಗ್ ಅವರ ಈ ಶತಕದಲ್ಲಿ ಟೀಂ ಇಂಡಿಯಾ ಆಟಗಾರರ ಕೊಡುಗೆಯೂ ಅಪಾರವಿದೆ. ವಾಸ್ತವವಾಗಿ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ತಂಡದ ಇನ್ನಿಂಗ್ಸ್‌ನ ಎರಡನೇ ಓವರ್‌ನಲ್ಲೇ ವಿಲ್ ಯಂಗ್‌ಗೆ ಎರಡು ಬಾರಿ ಜೀವದಾನ ಸಿಕ್ಕಿತು. ಆಕಿಬ್ ನಬಿ ದಾರ್ ಎಸೆತದ ಎರಡನೇ ಓವರ್​ನ ಸತತ ಎರಡು ಎಸೆತಗಳಲ್ಲಿ ಎರಡು ಕ್ಯಾಚ್‌ಗಳನ್ನು ಕೈಬಿಡಲಾಯಿತು.

ವಿಲ್ ಯಂಗ್‌ಗೆ ಎರಡು ಜೀವದಾನ

ಎರಡನೇ ಓವರ್‌ನ ಐದನೇ ಎಸೆತದಲ್ಲಿ ಸ್ಲಿಪ್‌ನಲ್ಲಿದ್ದ ರೋಹಿತ್ ಶರ್ಮಾ ವಿಲ್ ಯಂಗ್ ನೀಡಿದ ಸುಲಭ ಕ್ಯಾಚ್ ಕೈಬಿಟ್ಟರು. ಇದಾದ ಬಳಿಕ ಅದೇ ಓವರ್‌ನ ಕೊನೆಯ ಎಸೆತದಲ್ಲಿ ಇಶಾನ್ ಕಿಶನ್ ಕೂಡ ಸುಲಭವಾಗಿ ಹಿಡಿಯಬಹುದಾಗಿದ್ದ ಕ್ಯಾಚ್ ಕೈಚೆಲ್ಲಿದರು. ಈ ಎರಡೂ ಕ್ಯಾಚ್‌ಗಳು ಕೈತಪ್ಪಿದಾಗ ವಿಲ್ ಯಂಗ್ ಕೇವಲ 5 ರನ್ ಗಳಿಸಿದ್ದರು. ಈ ಅವಕಾಶಗಳನ್ನು ಬಳಸಿಕೊಂಡ ಯಂಗ್, ಆ ಬಳಿಕ ಯಾವುದೇ ತಪ್ಪು ಮಾಡದೆ ಎಚ್ಚರಿಕೆಯಿಂದ ಬ್ಯಾಟಿಂಗ್ ಮುಂದುವರಿಸಿದರು.

49 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಯಂಗ್, ಆ ಬಳಿಕ ತಮ್ಮ ಬ್ಯಾಟಿಂಗ್ ವೇಗವನ್ನೇ ಬದಲಿಸಿದರು. ಆರಂಭದಲ್ಲಿ ನಿಧಾನವಾಗಿ ರನ್ ಗಳಿಸುತ್ತಿದ್ದ ಅವರು, ನಂತರ ಭಾರತೀಯ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಒಂದು ಹಂತದಲ್ಲಿ 43 ಎಸೆತಗಳಲ್ಲಿ 41 ರನ್ ಗಳಿಸಿದ್ದ ಯಂಗ್, ನಂತರ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಮುಂದಿನ 45 ಎಸೆತಗಳಲ್ಲಿ ಬರೋಬ್ಬರಿ 59 ರನ್ ಸಿಡಿಸಿ ಕೇವಲ 88 ಎಸೆತಗಳಲ್ಲಿ ಶತಕ ಪೂರೈಸಿದರು. ಶತಕದ ಬಳಿಕವೂ ಅವರ ಅಬ್ಬರ ನಿಲ್ಲಲಿಲ್ಲ. ಅಂತಿಮವಾಗಿ 108 ಎಸೆತಗಳಲ್ಲಿ 125 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅವರ ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 14 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್‌ಗಳು ಸೇರಿದ್ದವು.

ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಮಾಡಿದ ಈ ಎರಡು ದೊಡ್ಡ ತಪ್ಪುಗಳು ಭಾರತ ತಂಡಕ್ಕೆ ಸಾಕಷ್ಟು ದುಬಾರಿಯಾದವು. ಎರಡನೇ ಓವರ್‌ನಲ್ಲೇ ಯಂಗ್ ವಿಕೆಟ್ ಪಡೆಯುವಲ್ಲಿ ಭಾರತ ಯಶಸ್ವಿಯಾಗಿದ್ದರೆ, ಮೊದಲ ಎರಡು ಏಕದಿನ ಪಂದ್ಯಗಳಂತೆ ನ್ಯೂಜಿಲೆಂಡ್ ತಂಡವನ್ನು 200 ರನ್‌ಗಳ ಗಡಿ ದಾಟದಂತೆ ತಡೆಯುವ ಅವಕಾಶವಿತ್ತು.

ಎರಡು ಎಸೆತಗಳಲ್ಲಿ ಎರಡು ಕ್ಯಾಚ್ ಮಿಸ್; ರೋಹಿತ್-ಇಶಾನ್ ಎಡವಟ್ಟಿಗೆ ಆಕಿಬ್ ನಬಿಗೆ ಸಿಗದ ವಿಕೆಟ್

24 ಇನ್ನಿಂಗ್ಸ್‌ಗಳ ಬಳಿಕ ವಿಲ್ ಯಂಗ್ ಶತಕ

ಎರಡು ಜೀವದಾನ ಪಡೆದ ವಿಲ್ ಯಂಗ್ ಬಳಿಕ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ಶತಕ ಬಾರಿಸಿದರು. ಭಾರತ ವಿರುದ್ಧ ಇದು ಅವರ ಮೊದಲ ಶತಕವಾಗಿದೆ. ಇದಕ್ಕೂ ಮೊದಲು 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ವಿರುದ್ಧ ಯಂಗ್ ಕೊನೆಯ ಬಾರಿಗೆ ಶತಕ ಸಿಡಿಸಿದ್ದರು. ಆ ಬಳಿಕ 24 ಇನ್ನಿಂಗ್ಸ್‌ಗಳ ಕಾಲ ಶತಕಕ್ಕಾಗಿ ಕಾಯುತ್ತಿದ್ದ ಅವರು, ಇದೀಗ ಮತ್ತೆ ಮೂರಂಕಿ ಮೊತ್ತ ತಲುಪಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada Sports

Read full article on TV9 Kannada Sports

Leave a Comment

Your email address will not be published. Required fields are marked *

समाचार की भाषा चुनें / Choose News Language