Hashtagintro

‘ವಾರಣಾಸಿ’ ಬಳಿಕ ಹಾಲಿವುಡ್​​ ಸಿನಿಮಾ ನಿರ್ದೇಶಿಸಲಿದ್ದಾರೆ ರಾಜಮೌಳಿ

‘ವಾರಣಾಸಿ’ ಬಳಿಕ ಹಾಲಿವುಡ್​​ ಸಿನಿಮಾ ನಿರ್ದೇಶಿಸಲಿದ್ದಾರೆ ರಾಜಮೌಳಿ

ರಾಜಮೌಳಿ, ಭಾರತದ ಟಾಪ್ ನಿರ್ದೇಶಕ. ಭಾರತೀಯ ಚಿತ್ರರಂಗಕ್ಕೆ ವಿಶ್ವದೆಲ್ಲೆಡೆ ಗೌರವ ಗಳಿಸಿಕೊಟ್ಟ ನಿರ್ದೇಶಕ. ಭಾರತದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ರಾಜಮೌಳಿ ಅವರ ಸಿನಿಮಾಕ್ಕೆ ಕಾಯುವ ಅಭಿಮಾನಿಗಳಿದ್ದಾರೆ. ರಾಜಮೌಳಿ, ‘ಆರ್​​ಆರ್​​ಆರ್’ ಸಿನಿಮಾ ವಿದೇಶದಲ್ಲಿ ಭಾರಿ ಜನಪ್ರೀತಿ ಗಳಿಸಿದ ಬಳಿಕವಂತೂ ಅವರಿಗೆ ಹಾಲಿವುಡ್​​ನಿಂದ ಹಲವು ಆಫರ್​​ಗಳು ದೊರೆತವು. ಹಾಲಿವುಡ್​​ನ ಲೆಜೆಂಡರಿ ನಿರ್ದೇಶಕರುಗಳಾದ ಜೇಮ್ಸ್ ಕ್ಯಾಮರನ್ ಮತ್ತು ಸ್ಟಿವನ್ ಸ್ಪೀಲ್​​ಬರ್ಗ್​​ ಅಂಥಹವರೇ ಖುದ್ದು ರಾಜಮೌಳಿಗೆ ಹಾಲಿವುಡ್​​ ಆಫರ್​ ನೀಡಿದರು. ಆದರೆ ಇದೀಗ ಖುದ್ದು ರಾಜಮೌಳಿ ಅವರೇ ಹೇಳಿರುವಂತೆ ಅವರು ಹಾಲಿವುಡ್​​ಗೆ ಹೋಗುತ್ತಿದ್ದಾರಂತೆ.

ರಾಜಮೌಳಿ ಪ್ರಸ್ತುತ ‘ವಾರಣಾಸಿ’ ಸಿನಿಮಾ ನಿರ್ದೇಶಿಸುತ್ತಿದ್ದು, ಸಿನಿಮಾದ ಚಿತ್ರೀಕರಣ ಬಹುತೇಕ ಅಂತ್ಯವಾಗಿದೆ. ಸಿನಿಮಾ ಮುಂದಿನ ಏಪ್ರಿಲ್ ತಿಂಗಳಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ. ಇದರ ನಡುವೆ ರಾಜಮೌಳಿ ಅವರು ತಾವು ಹಾಲಿವುಡ್ ಸಿನಿಮಾ ನಿರ್ದೇಶಿಸುವ ಇಚ್ಛೆ ಹೊಂದಿರುವುದಾಗಿ, ಹಾಗೂ ಖಂಡಿತ ತಾವು ಹಾಲಿವುಡ್ ಸಿನಿಮಾ ಒಂದನ್ನು ನಿರ್ದೇಶನ ಮಾಡುವುದಾಗಿ ರಾಜಮೌಳಿ ಹೇಳಿದ್ದಾರೆ. ತಾವೇಕೆ ಹಾಲಿವುಡ್​​ನಲ್ಲಿ ಕೆಲಸ ಮಾಡಲು ಉತ್ಸುಕರಾಗಿರುವುದಾಗಿಯೂ ವಿವರಿಸಿದ್ದಾರೆ.

ಇಂಗ್ಲೀಷ್ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ರಾಜಮೌಳಿ, ‘ಆರ್​​ಆರ್​​ಆರ್’ ಸಿನಿಮಾದ ಬಳಿಕ ನನಗೆ ಹಲವು ಆಫರ್​​ಗಳು ಬಂದವು, ಈಗಲೂ ಸಹ ಆ ಆಫರ್​​ಗಳು ಓಪನ್ ಆಗಿವೆ. ಹಾಲಿವುಡ್​​ನಲ್ಲಿ ಸಿನಿಮಾ ಮಾಡುವ ಆಸೆ ನನಗೂ ಇದೆ. ಹಾಲಿವುಡ್​​ನವರ ಕೆಲಸದ ಬದ್ಧತೆ, ಕೆಲಸ ಮಾಡುವ ರೀತಿ ನನಗೆ ಬಹಳ ಇಷ್ಟವಾಯ್ತು. ಅವರಿಂದ ನಾನೂ ಕಲಿಯಬಹುದೆಂಬ ಆಸೆ ನನಗೆ ಇದೆ’ ಎಂದಿದ್ದಾರೆ.

ಇದನ್ನೂ ಓದಿ:‘ವಾರಣಾಸಿ’ ಸಿನಿಮಾದ ಒಳಗಿದೆ ಹಲವು ಸಿನಿಮಾ, ರಾಜಮೌಳಿ ಹೇಳಿದ್ದೇನು?

ಮುಂದುವರೆದು ಮಾತನಾಡಿ, ‘ಆರ್​​ಆರ್​​ಆರ್’ ಸಿನಿಮಾ ರಿಲೀಸ್ ಆದಾಗ ನನಗೆ ಹಾಲಿವುಡ್​​ನಿಂದ ಹಲವು ಆಫರ್​​ಗಳು ಬಂದವು. ಕೆಲ ದೊಡ್ಡ ನಿರ್ಮಾಣ ಸಂಸ್ಥೆಗಳೊಟ್ಟಿಗೆ ನಾನು ಮಾತನಾಡಿದೆ. ಆದರೆ ಆ ಸಮಯದ ವೇಳೆಗೆಲ್ಲ ನಾನು ‘ವಾರಣಾಸಿ’ ಸಿನಿಮಾದ ಚಿತ್ರೀಕರಣ ಶುರು ಮಾಡಿದ್ದೆ. ನನಗೆ ಎರಡು ಮೂರು ಸಿನಿಮಾಗಳ ಮೇಲೆ ಒಟ್ಟಿಗೆ ಕೆಲಸ ಮಾಡಲು ಆಗುವುದಿಲ್ಲ. ಒಂದು ಸಿನಿಮಾ ಮುಗಿಸಿದ ಮೇಲಷ್ಟೆ ನಾನು ಹೊಸ ಸಿನಿಮಾದ ಮೇಲೆ ಗಮನ ಹರಿಸಬಹುದು. ಹಾಗಾಗಿ ಆಗ ಆಫರ್​​ಗಳನ್ನು ಒಪ್ಪಿಕೊಳ್ಳಲಿಲ್ಲ. ಒಮ್ಮೆ ‘ವಾರಣಾಸಿ’ ಸಿನಿಮಾ ಮುಗಿದ ಮೇಲೆ ನಾನು ಹಾಲಿವುಡ್ ಪ್ರಾಜೆಕ್ಟ್ ಬಗ್ಗೆ ಗಮನ ಹರಿಸುವೆ’ ಎಂದಿದ್ದಾರೆ ರಾಜಮೌಳಿ.

ರಾಜಮೌಳಿ ಪ್ರಸ್ತುತ ‘ವಾರಣಾಸಿ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾನಲ್ಲಿ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ನಟನೆ ಮಾಡಿದ್ದಾರೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಚಾಲ್ತಿಯಲ್ಲಿದೆ. ಸಿನಿಮಾ ಏಪ್ರಿಲ್ ತಿಂಗಳಲ್ಲಿ ರಿಲೀಸ್ ಆಗಲಿದೆ. ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language