Hashtagintro

ಹಾಂಗ್ ಕಾಂಗ್ ಸಿಕ್ಸಸ್: 6 ತಂಡಗಳು ಫೈನಲ್​ಗೆ ಎಂಟ್ರಿ

ಹಾಂಗ್ ಕಾಂಗ್ ಸಿಕ್ಸಸ್: 6 ತಂಡಗಳು ಫೈನಲ್​ಗೆ ಎಂಟ್ರಿ

ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯು ಅಂತಿಮ ಹಂತಕ್ಕೆ ಬಂದು ನಿಂತಿದೆ. 6 ಓವರ್​ಗಳ ಈ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯಗಳು ಮುಗಿದಿದ್ದು, ಇದೀಗ ಫೈನಲ್ ಮ್ಯಾಚ್​ಗೆ ವೇದಿಕೆ ಸಿದ್ಧವಾಗಿದೆ. ಈ ಫೈನಲ್ ಮ್ಯಾಚ್​ಗಳಲ್ಲಿ 6 ತಂಡಗಳು ಕಣಕ್ಕಿಳಿಯುತ್ತಿರುವುದು ವಿಶೇಷ. ಈ ಆರು ತಂಡಗಳು ಬೇರೆ ಬೇರೆ ಫೈನಲ್ ಆಡಲಿದೆ. ಅಂದರೆ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ  ಕಪ್ ಫೈನಲ್, ಪ್ಲೇಟ್ ಫೈನಲ್ ಮತ್ತು ಬೌಲ್ ಫೈನಲ್ ಪಂದ್ಯಗಳನ್ನು ಆಯೋಜಿಸಲಾಗುತ್ತದೆ. ಈ ಫೈನಲ್ ಪಂದ್ಯಗಳ ವಿಶೇಷತೆಗಳೇನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ಬಾರಿ ಹಾಂಗ್ ಕಾಂಗ್ ಟೂರ್ನಿಯಲ್ಲಿ ಒಟ್ಟು 12 ತಂಡಗಳು ಕಣಕ್ಕಿಳಿದಿದ್ದವು. ಈ ತಂಡಗಳನ್ನು ನಾಲ್ಕು ಗ್ರೂಪ್​ಗಳಾಗಿ ವಿಂಗಡಿಸಲಾಗಿತ್ತು.

  • ಗ್ರೂಪ್ A: ಆಸ್ಟ್ರೇಲಿಯಾ, ಇಂಗ್ಲೆಂಡ್, ಹಾಂಗ್ ಕಾಂಗ್
  •  ಗ್ರೂಪ್ B: ಶ್ರೀಲಂಕಾ, ಬಾಂಗ್ಲಾದೇಶ್, ಸ್ಕಾಟ್‌ಲ್ಯಾಂಡ್
  • ಗ್ರೂಪ್ C: ಭಾರತ, ಪಾಕಿಸ್ತಾನ್, ಯುಎಇ
  •  ಗ್ರೂಪ್ D: ಸೌತ್ ಆಫ್ರಿಕಾ, ಅಫ್ಘಾನಿಸ್ತಾನ್, ಒಮಾನ್

 

  • ಪ್ರತಿ ಗ್ರೂಪ್‌ನ ಅಗ್ರ 2 ತಂಡಗಳು (ಒಟ್ಟು 8 ತಂಡಗಳು) ಪ್ರಧಾನ ಚಾಂಪಿಯನ್‌ಶಿಪ್ ರೇಸ್ ಆದ ‘ಕಪ್ ಕ್ವಾರ್ಟರ್ ಫೈನಲ್ಸ್’ಗೆ ಪ್ರವೇಶಿಸಿದ್ದವು.
  • ಪ್ರತಿ ಗ್ರೂಪ್‌ನಲ್ಲಿ ಕೊನೆಯ ಸ್ಥಾನ (3ನೇ ಸ್ಥಾನ) ಪಡೆದ ತಂಡಗಳು ಟೂರ್ನಿಯಿಂದ ಹೊರಬೀಳದೆ, ನೇರವಾಗಿ ‘ಬೌಲ್ ಲೀಗ್’  ಎಂಬ ಪ್ರತ್ಯೇಕ ದ್ವಿತೀಯ ಸುತ್ತನ್ನು ಆಡಿದ್ದವು.
  • ಕಪ್ ಕ್ವಾರ್ಟರ್ ಫೈನಲ್ಸ್‌ನಲ್ಲಿ ಗೆದ್ದ 4 ಅತ್ಯುತ್ತಮ ತಂಡಗಳು ಮುಖ್ಯ ‘ಕಪ್ ಸೆಮಿಫೈನಲ್ಸ್’ ಹಂತ ತಲುಪಿದ್ದವು. ಅಲ್ಲಿ ಜಯಗಳಿಸಿದ 2 ಅಗ್ರ ತಂಡಗಳು ಅಂತಿಮವಾಗಿ ಮಹತ್ವದ ‘ಕಪ್ ಫೈನಲ್ಸ್’ ಆಡಲು ಅರ್ಹತೆ ಪಡೆದಿದೆ.
  •  ಕ್ವಾರ್ಟರ್ ಫೈನಲ್ಸ್‌ನಲ್ಲಿ ಸೋತ 4 ತಂಡಗಳು ಟೂರ್ನಿಯಿಂದ ಹೊರಬಿದ್ದಿಲ್ಲ. ಅವುಗಳ ನಡುವೆ ‘ಪ್ಲೇಟ್ ಸೆಮಿಫೈನಲ್ಸ್’ ಪಂದ್ಯಗಳನ್ನು ನಡೆಸಲಾಗಿದೆ. ಈ ಸೆಮಿಫೈನಲ್ಸ್‌ನಲ್ಲಿ ಗೆದ್ದ 2 ತಂಡಗಳು ‘ಪ್ಲೇಟ್ ಫೈನಲ್ಸ್’ ಪ್ರವೇಶಿಸಿದೆ.
  • ಗುಂಪಿನಲ್ಲಿ ಕೊನೆಯ ಸ್ಥಾನ ಪಡೆದ ನಾಲ್ಕು ತಂಡಗಳ ನಡುವೆ ಬೌಲ್ ಸೆಮಿಫೈನಲ್ ಪಂದ್ಯಗಳನ್ನು ನಡೆಸಲಾಗಿದ್ದು, ಇದರಲ್ಲಿ ಗೆದ್ದ ತಂಡಗಳು ಪ್ಲೇಟ್ ಫೈನಲ್​ಗೆ ತಲುಪಿದೆ.

ಕಪ್ ಫೈನಲ್:

  • ಅರ್ಹತೆ: ತಮ್ಮ ತಮ್ಮ ಗುಂಪುಗಳಲ್ಲಿ ಮೊದಲ ಸ್ಥಾನ  ಪಡೆದ ನಾಲ್ಕು ತಂಡಗಳು ನೇರವಾಗಿ ‘ಕಪ್ ಸೆಮಿಫೈನಲ್ಸ್’ ಪ್ರವೇಶಿಸುತ್ತವೆ.

ಇದು ಇಡೀ ಟೂರ್ನಿಯ ಅತ್ಯುನ್ನತ ಹಂತವಾಗಿದೆ. ಸೆಮಿಫೈನಲ್‌ನಲ್ಲಿ ಗೆದ್ದ ಎರಡು ಅತ್ಯುತ್ತಮ ತಂಡಗಳು ‘ಕಪ್ ಫೈನಲ್’ನಲ್ಲಿ ಮುಖಾಮುಖಿಯಾಗುತ್ತವೆ.

ಕಪ್ ಫೈನಲ್ ಗೆಲ್ಲುವ ತಂಡವನ್ನು ಇಡೀ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯ ಮುಖ್ಯ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ.

ಪ್ಲೇಟ್ ಫೈನಲ್:

  • ಅರ್ಹತೆ: ಗುಂಪು ಹಂತದ ಪಂದ್ಯಗಳಲ್ಲಿ ಎರಡನೇ ಸ್ಥಾನ ಪಡೆದ ನಾಲ್ಕು ತಂಡಗಳು ‘ಪ್ಲೇಟ್ ಸೆಮಿಫೈನಲ್ಸ್’ ಆಡುತ್ತವೆ.

ಕಪ್ ರೇಸ್‌ನಿಂದ ಹೊರಬಿದ್ದರೂ, ಈ ತಂಡಗಳಿಗೆ ತಮ್ಮ ಪ್ರತಿಭೆ ಸಾಬೀತುಪಡಿಸಲು ಮತ್ತೊಂದು ಅವಕಾಶ ಸಿಗುತ್ತದೆ. ಪ್ಲೇಟ್ ಸೆಮಿಫೈನಲ್ಸ್‌ನಲ್ಲಿ ಗೆದ್ದ ತಂಡಗಳು ‘ಪ್ಲೇಟ್ ಫೈನಲ್’ ತಲುಪುತ್ತವೆ.

ಇದು ಒಟ್ಟಾರೆ ಪಂದ್ಯಾವಳಿಯ 5 ಮತ್ತು 6 ನೇ ಸ್ಥಾನಗಳಿಗಾಗಿ ನಡೆಯುವ ಹೋರಾಟವಾಗಿದೆ. ಪ್ಲೇಟ್ ಫೈನಲ್ ಗೆಲ್ಲುವ ತಂಡಕ್ಕೆ ‘ಪ್ಲೇಟ್ ಟ್ರೋಫಿ’ ನೀಡಲಾಗುತ್ತದೆ.

ಬೌಲ್ ಫೈನಲ್:

  • ಅರ್ಹತೆ: ಗುಂಪು ಹಂತದಲ್ಲಿ ಕಳಪೆ ಪ್ರದರ್ಶನ ನೀಡಿ ಕೊನೆಯ ಸ್ಥಾನ ಪಡೆದ ನಾಲ್ಕು ತಂಡಗಳು ‘ಬೌಲ್ ಸೆಮಿಫೈನಲ್​ಗೆ’ ಅರ್ಹತೆ ಪಡೆಯುತ್ತವೆ.

ಟೂರ್ನಿಯಿಂದ ಬೇಗನೆ ಹೊರಬೀಳುವ ತಂಡಗಳಿಗೂ ನಿರಂತರವಾಗಿ ಪಂದ್ಯಗಳನ್ನು ಆಡಲು ಮತ್ತು ಅನುಭವ ಪಡೆಯಲು ಈ ವೇದಿಕೆ ನೆರವಾಗುತ್ತದೆ. ಈ ನಾಲ್ಕು ತಂಡಗಳ ನಡುವಿನ ನಾಕೌಟ್ ಪಂದ್ಯಗಳ ನಂತರ ಅಗ್ರ ಎರಡು ತಂಡಗಳು ‘ಬೌಲ್ ಫೈನಲ್’ ಆಡುತ್ತವೆ.

ಇದು ಒಟ್ಟಾರೆ ಟೂರ್ನಿಯ 9 ಮತ್ತು 10 ನೇ ಸ್ಥಾನಗಳಿಗಾಗಿ ನಡೆಯುವ ಪಂದ್ಯವಾಗಿದೆ. ಇಲ್ಲಿ ಗೆಲ್ಲುವ ತಂಡಕ್ಕೆ ‘ಬೌಲ್ ಟ್ರೋಫಿ’ ಸಿಗುತ್ತದೆ.

ಇದನ್ನೂ ಓದಿ: 6,6,6,6,6,6,6: ರಾಹುಲ್ ಸಿಡಿಲಬ್ಬರ, ಸ್ಫೋಟಕ ಅರ್ಧಶತಕ

ಈ ಮಾದರಿಯ ಪ್ರಯೋಜನವೇನು?

ಕ್ರಿಕೆಟ್‌ನಲ್ಲಿ ಸಾಮಾನ್ಯವಾಗಿ ಸೋತ ತಂಡಗಳು ಟೂರ್ನಿಯಿಂದ ಬೇಗನೆ ಹೊರಬೀಳುತ್ತವೆ. ಆದರೆ ಹಾಂಗ್ ಕಾಂಗ್ ಸಿಕ್ಸಸ್‌ನ ಈ ವಿಶಿಷ್ಟ ಮಾದರಿಯಿಂದಾಗಿ, ಆರಂಭದಲ್ಲಿ ಸೋತ ತಂಡಗಳಿಗೂ ಕೊನೆಯ ದಿನದವರೆಗೂ ಪಂದ್ಯಗಳನ್ನು ಆಡುವ ಖಾತರಿ ಸಿಗುತ್ತದೆ. ಇದರಿಂದಾಗಿ ಪ್ರೇಕ್ಷಕರಿಗೂ ಕೂಡ ಹೆಚ್ಚು ಹೆಚ್ಚು ರೋಮಾಂಚಕ ಪಂದ್ಯಗಳನ್ನು ವೀಕ್ಷಿಸುವ ಅವಕಾಶ ಸಿಗುತ್ತದೆ.

ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿ ಫೈನಲ್ ವೇಳಾಪಟ್ಟಿ:

ಫೈನಲ್ ತಂಡಗಳು ಪಂದ್ಯದ ಸಮಯ (IST)
ಬೌಲ್ ಫೈನಲ್  ಸೌತ್ ಆಫ್ರಿಕಾ vs ಇಂಗ್ಲೆಂಡ್  10:50 ಕ್ಕೆ
ಪ್ಲೇಟ್ ಫೈನಲ್ ಪಾಕಿಸ್ತಾನ್ vs ಒಮಾನ್  11:45 ಕ್ಕೆ
ಕಪ್ ಫೈನಲ್ ಆಸ್ಟ್ರೇಲಿಯಾ vs ಅಫ್ಘಾನಿಸ್ತಾನ್  12:40 ಕ್ಕೆ

 

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language