
ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ನಟಿ ರನ್ಯಾ ರಾವ್ ಒಂದು ವರ್ಷಕ್ಕೂ ಹೆಚ್ಚಿನ ಸಮಯ ಜೈಲಿನಲ್ಲಿದ್ದರು. ಇದೇ ವರ್ಷ ಏಪ್ರಿಲ್ ತಿಂಗಳಲ್ಲಿ ಅವರು ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆ ಆದರು. ಇದೀಗ ರನ್ಯಾ ರಾವ್, ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿದ್ದರು. ನಿವೃತ್ತ ಡಿಜಿಪಿ ರಾಮಚಂದ್ರರಾವ್ ಮತ್ತು ಕುಟುಂಬದವರ ಜೊತೆಗೆ ರನ್ಯಾ ರಾವ್ ದೇವಾಲಯಕ್ಕೆ ಬಂದಿದ್ದರು. ವಿಶೇಷ ವಾಹನದಲ್ಲಿ ಬಂದ ರನ್ಯಾ ರಾವ್ ಹಾಗೂ ಇತರರಿಗೆ ಅವರ ತಂದೆಯವರ ಕೋಟಾದ ಮೂಲಕ ವಿಶೇಷ ದರ್ಶನ ದೊರಕಿತು. ಚಿನ್ನ ಕಳ್ಳಸಾಗಣೆ ಆರೋಪಿಗೆ ಹೀಗೆ ಶಿಷ್ಟಾಚಾರದ ಅಡಿಯಲ್ಲಿ ವಿಶೇಷ ದರ್ಶನಕ್ಕೆ ಅವಕಾಶ ದೊರಕಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ, ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗುತ್ತಿದೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Source: TV9 Kannada Entertainment
