
ಹಾಸನಾಂಬೆ ದೇವಾಲಯಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತಾಧಿಗಳು ಬರುತ್ತಿದ್ದಾರೆ. ಜೊತೆಗೆ ಹಲವು ಸೆಲೆಬ್ರಿಟಿಗಳು, ರಾಜಕಾರಣಿಗಳು, ದೊಡ್ಡ ಹುದ್ದೆಯ ಅಧಿಕಾರಿಗಳು ಸಹ ಬರುತ್ತಿದ್ದಾರೆ. ಈಗಾಗಲೇ ದೇವಾಲಯ ಓಪನ್ ಆಗಿ ಕೆಲ ದಿನಗಳಾಗಿದ್ದು, ನವೆಂಬರ್ 11 ಕ್ಕೆ ದೇವಾಲಯವನ್ನು ಮತ್ತೆ ಮುಚ್ಚಲಾಗುತ್ತದೆ. ಪ್ರತಿ ದಿನವೂ ಸಾವಿರಾರು ಮಂದಿ ಭಕ್ತಾಧಿಗಳು ದೇವಾಲಯಕ್ಕೆ ಆಗಮಿಸುತ್ತಿದ್ದಾರೆ. ಇಂದು (ಅಕ್ಟೋಬರ್ 03) ನಟಿ ಪ್ರೇಮಾ ಹಾಗೂ ಕಾರುಣ್ಯ ರಾವ್ ಅವರುಗಳು ಪ್ರತ್ಯೇಕವಾಗಿ ದೇವಾಲಯಕ್ಕೆ ಬಂದು ದರ್ಶನ ಪಡೆದುಕೊಂಡರು. ಇಬ್ಬರೂ ಸಹ ಸರಳವಾದ ಉಡುಗೆಗಳನ್ನು ತೊಟ್ಟು ದೇವಾಲಯಕ್ಕೆ ಆಗಮಿಸಿದ್ದರು. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Source: TV9 Kannada Entertainment
