Hashtagintro

ಹಾಸನ ಡಿಸಿ, ಉಸ್ತುವಾರಿ ಸಚಿವರ ವಿರುದ್ಧ ಲಂಚ ಆರೋಪ: ನಕಲಿ ಸಂದೇಶ ಹರಡಲಾಗ್ತಿದೆ ಎಂದು ಜಿಲ್ಲಾಧಿಕಾರಿ ಪಿಎಯಿಂದ ದೂರು

ಹಾಸನ ಡಿಸಿ, ಉಸ್ತುವಾರಿ ಸಚಿವರ ವಿರುದ್ಧ ಲಂಚ ಆರೋಪ: ನಕಲಿ ಸಂದೇಶ ಹರಡಲಾಗ್ತಿದೆ ಎಂದು ಜಿಲ್ಲಾಧಿಕಾರಿ ಪಿಎಯಿಂದ ದೂರು

ಹಾಸನ, ನವೆಂಬರ್​​ 09: ಹಾಸನ ಡಿಸಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಲಂಚ ಆರೋಪ ಪ್ರಕರಣ ಸಂಬಂಧ ಹಾಸನ ನಗರ ಪೊಲೀಸ್ ಠಾಣೆಗೆ ಜಿಲ್ಲಾಧಿಕಾರಿ ಪಿಎ ಶಶಿಕಿರಣ್ ದೂರು ನೀಡಿದ್ದಾರೆ. ತಮ್ಮ ಮೊಬೈಲ್ ನಂಬರ್ ಬಳಸಿ ನಕಲಿ ವಾಟ್ಸಾಪ್ ಸಂದೇಶ ಸೃಷ್ಟಿಸಿ ಹರಡಲಾಗುತ್ತಿದೆ. ಇದರಿಂದ ವೈಯಕ್ತಿಕ ವರ್ಚಸ್ಸು, ಆಡಳಿತಾತ್ಮಕವಾಗಿ ಧಕ್ಕೆ ಆಗುತ್ತಿದೆ. ಆ ಸಂದೇಶದಲ್ಲಿ ಡಿಸಿ, ಸಚಿವರು, ಅರಸೀಕೆರೆ ತಹಶೀಲ್ದಾರ್ ಸೇರಿದಂತೆ ಡಿಸಿ, ಎಸಿ , ಎಡಿಸಿ ಕಚೇರಿ ಸಿಬ್ಬಂದಿ ಹೆಸರು ಉಲ್ಲೇಖಿಸಲಾಗಿದೆ ಎಂದು ದೂರಿದ್ದಾರೆ. ಶಶಿಕಿರಣ್ ದೂರು ಆಧರಿಸಿ BNS ಕಾಯ್ದೆ 336,(4), 335 ಅಡಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.

ಕುಮಾರಸ್ವಾಮಿಗೆ ಹಾಸನ ಡಿಸಿ ಕೌಂಟರ್​?

ಮತ್ತೊಂದೆಡೆ ಭ್ರಷ್ಟಾಚಾರ ಆರೋಪ ಸಂಬಂಧ ಕುಮಾರಸ್ವಾಮಿ ಅವರಿಂದ ಕೆಲ ದಾಖಲೆ ಬಿಡುಗಡೆ ಬೆನ್ನಲ್ಲೇ ಕೇಂದ್ರ ಸಚಿವರಿಗೇ ಹಾಸನ ಡಿಸಿ ಕೆ.ಎಸ್.ಲತಾಕುಮಾರಿ ಕೌಂಟರ್​​ ಕೊಟ್ಟರಾ ಎಂಬ ಪ್ರಶ್ನೆ ಉದ್ಭವಿಸಿದೆ. ಸಿಂಹ ಮಲಗಿರುವಾಗ ನಾಯಿಗಳು ಬೊಗಳುವ ಇಮೇಜ್ ಹಾಕಿ ಪ್ರತಿಯೊಂದು ಧ್ವನಿಯೂ ಪ್ರತಿಕ್ರಿಯೆಗೆ ಅರ್ಹವಲ್ಲ ಎಂದು ತಮ್ಮ ವಾಟ್ಸಾಪ್​​, ಟ್ವಿಟರ್​​​ನಲ್ಲಿ ಪೋಸ್ಟ್​​ ಮಾಡಿರೋದೀಗ ಊಹಾಪೋಹಗಳಿಗೆ ಕಾರಣವಾಗಿದೆ.

ಇದನ್ನೂ ಓದಿ: ಹೆಚ್​​ಡಿಕೆ ಆರೋಪಕ್ಕೆ ಡಿಸಿ ತಿರುಗೇಟು! ಚಾಟ್​​ ನಿಜಾನಾ ಎಂದು ತನಿಖೆ ಮಾಡಿಸ್ತೇನೆ ಎಂದ ಅಧಿಕಾರಿ

ನಿನ್ನೆ ಸುದ್ದಿಗೋಷ್ಠಿ ವೇಳೆ ಹಾಸನ ಡಿಸಿ ಪಿಎ ಶಶಿಕಿರಣ್​​ರದ್ದು ಎನ್ನಲಾದ ವಾಟ್ಸ್ಯಾಪ್​​ ಚಾಟ್​​ನ 15 ಪುಟಗಳ ಸ್ಕ್ರೀನ್ ಶಾಟ್ ಪ್ರತಿಯನ್ನು ಕುಮಾರಸ್ವಾಮಿ ಬಿಡುಗಡೆ ಮಾಡಿದ್ದರು. ಇವನ್ನು ತನೆಗೆ ಯಾವುದೋ ಅಧಿಕಾರಿ ತಂದುಕೊಟ್ಟು ಹೋಗಿರುವುದಾಗಿಯೂ ತಿಳಿಸಿದ್ದರು. ಮೂರು ಕ್ರಷರ್ ಅನುಮತಿಗಾಗಿ 60 ಲಕ್ಷ ರೂ. ಲಂಚ ಕೇಳಿದ್ದ ಆರೋಪ ಮಾತ್ರವಲ್ಲದೆ ಡಿಸಿ ಲತಾಕುಮಾರಿ ಹಾಸನದಲ್ಲೇ ಉಳಿಯಲು ಸಚಿವ ಶಿವಲಿಂಗೇಗೌಡರಿಗೆ 75 ಲಕ್ಷ ರೂಪಾಯಿ ಲಂಚ ನೀಡಿರುವ ಸಂಬಂಧ ಮಾತುಕತೆ ಕೂಡ ಈ ಚಾಟ್​​ಗಳಲ್ಲಿ ಕಂಡುಬಂದಿತ್ತು. ರಾಜ್ಯಾದ್ಯಂತ ಈ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language