Hashtagintro

9ನೇ ತರಗತಿ ಮಿಡ್​ಟರ್ಮ್ ಎಕ್ಸಾಮ್​ನಲ್ಲಿ ಒಳ್ಳೆ ಮಾರ್ಕ್ಸ್ ಪಡೆದ ಮಗನಿಗೆ 1.6 ಕೋಟಿ ರೂ ಬಿಎಂಡಬ್ಲ್ಯು ಕಾರ್ ಗಿಫ್ಟ್ ಕೊಟ್ಟ ಅಪ್ಪ

9ನೇ ತರಗತಿ ಮಿಡ್​ಟರ್ಮ್ ಎಕ್ಸಾಮ್​ನಲ್ಲಿ ಒಳ್ಳೆ ಮಾರ್ಕ್ಸ್ ಪಡೆದ ಮಗನಿಗೆ 1.6 ಕೋಟಿ ರೂ ಬಿಎಂಡಬ್ಲ್ಯು ಕಾರ್ ಗಿಫ್ಟ್ ಕೊಟ್ಟ ಅಪ್ಪ

ಕೋಲ್ಕತಾ, ನವೆಂಬರ್ 11: ಮಕ್ಕಳು ಪರೀಕ್ಷೆಯಲ್ಲಿ ಪಾಸಾದಾಗ ಪೋಷಕರು ಚಾಕೊಲೇಟನ್ನೋ, ಸೈಕಲ್ ಅನ್ನೋ, ಬೈಕ್ ಅನ್ನೋ, ಬಟ್ಟೆಯನ್ನೋ ಇತ್ಯಾದಿ ಗಿಫ್ಟ್​ಗಳನ್ನು ಕೊಡುವುದುಂಟು. ಅದೂ ಎಸ್ಸೆಸ್ಸೆಲ್ಸಿ, ಪಿಯುಸಿಯಂತಹ ಪರೀಕ್ಷೆಗಳಲ್ಲಿ ಪಾಸಾದ ಮಕ್ಕಳಿಗೆ ವಿಶೇಷ ಗಿಫ್ಟ್ ಸಿಗಬಹುದು. ಇಲ್ಲಿ ಒಂಬತ್ತನೇ ತರಗತಿಯ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಮಾರ್ಕ್ಸ್ ಪಡೆದ ಮಗನಿಗೆ ಅಪ್ಪನೊಬ್ಬ ದುಬಾರಿ ಕಾರೊಂದನ್ನು ಗಿಫ್ಟ್ ಆಗಿ ನೀಡಿದ್ದಾರೆ. ಈ ಘಟನೆ ನಡೆದಿರುವುದು ಪಶ್ಚಿಮ ಬಂಗಾಳದಲ್ಲಿ.

ಪೂರ್ವ ಬರ್ಧಮಾನ್ ಜಿಲ್ಲೆಯ ಗಲ್ಸಿ ಸಮೀಪದ ಪುರಾಜ್ ಎಂಬ ಗ್ರಾಮದ 15 ವರ್ಷದ ಬಾಲಕ ಮೊಹಮ್ಮದ್ ತಲ್ಹಾಗೆ ಬಿಎಂಡಬ್ಲ್ಯು ಎಂ4 ಕಾಂಪಿಟೀಶನ್ ಎನ್ನುವ ಸ್ಪೋರ್ಟ್ಸ್ ಕಾರ್ ಅನ್ನು ಗಿಫ್ಟ್ ಆಗಿ ಅಪ್ಪ ಕೊಡಿಸಿದ್ದಾರೆ. ಈ ಕಾರಿನ ಬೆಲೆ ಬರೋಬ್ಬರಿ 1.62 ಕೋಟಿ ರೂ. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದರೆ ಕಾರು ಕೊಡಿಸುವುದಾಗಿ ನೀಡಿದ್ದ ವಾಗ್ದಾನವನ್ನು ಶಂಸುದ್ದೀನ್ ಮಿದ್ಯಾ ಅವರು ಉಳಿಸಿಕೊಂಡಿದ್ದಾರೆ.

ಇದನ್ನೂ ಓದಿ: ಎನ್​ವಿಡಿಯಾ ಸಿಇಒ ಜೆನ್ಸೆನ್ ಹುವಾಂಗ್ ಹಗರಣದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್; ಚೀನಾದ ಗೂಢಚಾರಿಣಿ ಮತ್ತಾಕೆಯ ಪತಿ ಮತ್ತು ಕಾರ್ಪೊರೇಟ್ ನೆಟ್ವರ್ಕ್

ಬಿಎಂಡಬ್ಲ್ಯು ಎಂ4 ಕಾಂಪಿಟೀಶನ್ ಕಾರು ಪಡೆಯಲು ಶಂಸುದ್ದಿನ್ ಅವರು ಮುಂಬೈನ ಅಂಧೇರಿಯಲ್ಲಿರುವ ಶೋರೂಮ್​ಗೆ ಹೋಗಬೇಕಾಯಿತು. ಕಂಟೇನರ್​ನೊಳಗೆ ಕಾರನ್ನು ಇರಿಸಿ ಮುಂಬೈನಿಂದ ಪೂರಬ್ ಬರ್ಧಮಾನ್​ನ ಅವರ ಗ್ರಾಮದವರೆಗೆ ಸಾಗಿಸಿ ತರಲಾಯಿತು. ದುಬಾರಿ ಬೆಲೆಯ ಈ ಕಾರು ಈಗ ಎಲ್ಲರ ಗಮನ ಸೆಳೆಯುತ್ತಿದೆ.

ಆ ಬಾಲಕನೇ ಖುದ್ದು ಇದರ ಒಂದು ಫೋಟೋ ಅನ್ನು ಇನ್ಸ್​ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾನೆ:

 

View this post on Instagram

 

A post shared by MD Talha Middya (@talha__0555)

ಬಿಎಂಡಬ್ಲ್ಯು ಎಂ4 ಕಾಂಪಿಟೀಶನ್ ಕಾರಿನ ಫೀಚರ್ಸ್…

ಜರ್ಮನಿ ದೇಶದ ವಾಹನ ತಯಾರಕರಾದ ಬಿಎಂಡಬ್ಲ್ಯುನ ಶ್ರೇಷ್ಠ ಸ್ಪೋರ್ಟ್ಸ್ ಕಾರುಗಳಲ್ಲಿ ಎಂ4 ಕಾಂಪಿಟೀಶನ್ ಒಂದು. ಇದು ಕೇವಲ 3.5 ಸೆಕೆಂಡುಗಳಲ್ಲಿ 100 ಕಿಮೀ ವೇಗ ತಲುಪಬಲ್ಲುದು.

ಇದನ್ನೂ ಓದಿ: ಕ್ವಾಲ್​ಕಾಮ್​ನಿಂದ ಲೇ ಆಫ್; ಭಾರತದಲ್ಲಿ ಸಾವಿರ ಉದ್ಯೋಗಿಗಳು ಟಾರ್ಗೆಟ್; ಬೆಂಗಳೂರಿನಲ್ಲೇ ಮೊದಲ ಸುತ್ತಿನ ಬಲಿ

ಅಪ್ಪನ ಬಳಿ ಇನ್ನೂ ಹಲವಿವೆ ಕಾರಿನ ಕಲೆಕ್ಷನ್ಸ್

ಮಗನಿಗೆ ಬಿಎಂಡಬ್ಲ್ಯೂ ಕಾರನ್ನು ಕೊಡಿಸಿದ ಶಂಸುದ್ದೀನ್ ಮಿದ್ಯಾ ಬಳಿ ರೇಂಜ್ ರೋವರ್, ವೋಲ್ವೋ, ಮರ್ಸಿಡೆಸ್ ಬೆಂಜ್, ಮಹೀಂದ್ರ, ಹ್ಯೂಂಡಾಯ್ ಕಂಪನಿಗಳ ಕಾರುಗಳನ್ನೂ ಹೊಂದಿದ್ದಾರೆ. ರೇಂಜ್ ರೋವರ್​ನ ಆಟೊಬಯೋಗ್ರಫಿ, ವೋಲ್ವೋ ಎಕ್ಸ್​ಸಿ90, ಮರ್ಸಿಡೆಸ್ ಸಿ-ಕ್ಲಾಸ್, ಮಹೀಂದ್ರ ಥಾರ್ ರಾಕ್ಸ್, ಹ್ಯೂಂಡಾಯ್ ಆಲ್ಕಜರ್ ಕಾರುಗಳು ಮಿದ್ಯಾ ಅವರ ಬಳಿ ಇವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language