Hashtagintro

ಸೈಲೆಂಟ್ ಆಗಿ ಮುಂದಕ್ಕೆ ಹೋಯ್ತು ‘ರಾಮಾಯಣ 2’ ರಿಲೀಸ್ ದಿನಾಂಕ?

ಸೈಲೆಂಟ್ ಆಗಿ ಮುಂದಕ್ಕೆ ಹೋಯ್ತು ‘ರಾಮಾಯಣ 2’ ರಿಲೀಸ್ ದಿನಾಂಕ?

ಬಾಲಿವುಡ್ ಸ್ಟಾರ್ ನಟ ರಣಬೀರ್ ಕಪೂರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ ಬಗ್ಗೆ ಒಂದು ಬಿಗ್ ಅಪ್ಡೇಟ್ ಹೊರಬಂದಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾದ ಮೊದಲ ಭಾಗವು ಅಂದುಕೊಂಡಂತೆ ದೀಪಾವಳಿಗೆ ತೆರೆಗೆ ಬರಲು ಸಜ್ಜಾಗಿದೆ. ಆದರೆ ಇದರ ಎರಡನೇ ಭಾಗದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ ಎಂದು ವರದಿ ಆಗಿದೆ.

ದೃಶ್ಯ ವೈಭವದ ಹೈಲೈಟ್ ಆಗಿರುವ ‘ರಾಮಾಯಣ’ ಸಿನಿಮಾವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಯೋಜಿಸಿದ್ದರು. ಮೊದಲ ಭಾಗವು ದೀಪಾವಳಿಯ ವೇಳೆಗೆ ಪ್ರೇಕ್ಷಕರ ಮುಂದೆ ಬರಲಿದೆ. ಆದರೆ ಅಂದುಕೊಂಡ ಸಮಯಕ್ಕಿಂತ ಹೆಚ್ಚಿನ ಶೂಟಿಂಗ್ ಹಾಗೂ ಗ್ರಾಫಿಕ್ಸ್ ಕೆಲಸಗಳ ಅವಶ್ಯಕತೆ ಇರುವುದರಿಂದ ಎರಡನೇ ಭಾಗದ ಚಿತ್ರೀಕರಣಕ್ಕೆ ಇನ್ನೂ ಸ್ವಲ್ಪ ಸಮಯ ಬೇಕಾಗಿದೆ.

ಸುಮಾರು 4,000 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ಈ ಎರಡೂ ಸಿನಿಮಾ ನಿರ್ಮಾಣವಾಗುತ್ತಿದೆ. ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಚಿತ್ರದ ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುತ್ತಿಲ್ಲ. ಜಾಗತಿಕ ಮಟ್ಟದಲ್ಲಿ ಭಾರತೀಯ ಸಿನಿಮಾದ ಕೀರ್ತಿಯನ್ನು ಹೆಚ್ಚಿಸುವ ದೃಷ್ಟಿಯಿಂದ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.

ಮುಖ್ಯವಾಗಿ ರಾಮಾಯಣ ಕಥೆಯ ಅಸಲಿ ಯುದ್ಧ ಹಾಗೂ ರೋಚಕ ದೃಶ್ಯಗಳು ಬರುವುದು ಎರಡನೇ ಭಾಗದಲ್ಲಿ. ಹಾಗಾಗಿ ಆಕ್ಷನ್ ದೃಶ್ಯಗಳ ಸಂಯೋಜನೆ ಮತ್ತು ವಿಭಿನ್ನ ಸೆಟ್‌ಗಳ ನಿರ್ಮಾಣಕ್ಕೆ ಹೆಚ್ಚಿನ ಸಮಯ ತಗುಲಿದೆ. ಪ್ರಪಂಚದ ನುರಿತ ತಂತ್ರಜ್ಞರು ಈ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದು, ಅತ್ಯುತ್ತಮ ದೃಶ್ಯ ಅನುಭವವನ್ನು ನೀಡಲು ಚಿತ್ರತಂಡ ಸಜ್ಜಾಗಿದೆ.

ಇದನ್ನೂ ಓದಿ: ಮಾಡಿದ ತಪ್ಪಿಗೆ ಕ್ಷಮೆ ಕೇಳಿದ ರಣಬೀರ್ ಕಪೂರ್; ವಿವಾದ ಆಗೋ ಮೊದಲೇ ತಿದ್ದಿಕೊಂಡ ನಟ

ಈ ಕಾರಣದಿಂದಾಗಿ ರಾಮಾಯಣ 2 ಚಿತ್ರವು 2027ರ ಬದಲು 2028ರ ದೀಪಾವಳಿಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಾ ಇದೆ. ಸಿನಿಮಾದ ಮೊದಲ ಭಾಗದ ಕೊನೆಯಲ್ಲಿ ಈ ಕುರಿತ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಲು ನಿರ್ಮಾಪಕರು ಪ್ಲಾನ್ ಮಾಡಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ ಹೊಸ ಇತಿಹಾಸ ಸೃಷ್ಟಿಸುವ ನಿರೀಕ್ಷೆಯಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language