
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ನವೆಂಬರ್ 01, ಭಾನುವಾರದ ದ್ವಾದಶ ರಾಶಿ ಫಲಾಫಲಗಳನ್ನು ತಿಳಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ ದಕ್ಷಿಣಾಯನ ಆಶ್ವೀಜ ಮಾಸ, ಶರದೃತು ಕೃಷ್ಣ ಪಕ್ಷ ಸಪ್ತಮಿ, ಪುನರ್ವಸು ನಕ್ಷತ್ರ, ಸಾಧ್ಯ ಯೋಗ ಭದ್ರಕರಣದಿಂದ ಕೂಡಿದೆ. ಬೆಳಗ್ಗೆ 10:34 ರಿಂದ 12:03 ರವರೆಗೆ ಸಂಕಲ್ಪ ಕಾಲ, ಶುಭಕಾಲವಿರಲಿದ್ದು, ಸಂಜೆ 4:26 ರಿಂದ 5:54 ರವರೆಗೆ ರಾಹುಕಾಲವಿದೆ.
ಇಂದು ನವೆಂಬರ್ ಮಾಸದ ಪ್ರಪ್ರಥಮ ದಿನ ಮಾತ್ರವಲ್ಲದೆ, ಸಮಸ್ತ ಕನ್ನಡಿಗರು ಆಚರಿಸುವ ಕನ್ನಡ ರಾಜ್ಯೋತ್ಸವದ ವಿಶೇಷ ದಿನವೂ ಹೌದು. ಕನ್ನಡ, ನೀರು, ನೆಲ, ಜಲದ ಬಗ್ಗೆ ಅಭಿಮಾನ ಮೆರೆಯುವ ಮಹತ್ವದ ದಿನವಿದು. ಗ್ರಹಗಳ ಸ್ಥಾನವನ್ನು ನೋಡುವುದಾದರೆ, ರವಿ ತುಲಾ ರಾಶಿಯಲ್ಲಿದ್ದರೆ, ಚಂದ್ರ ಕಟಕ ರಾಶಿಯ ಪುನರ್ವಸು ನಕ್ಷತ್ರದಲ್ಲಿ ಸಂಚಾರ ಮಾಡುತ್ತಾನೆ. ಗುರು-ಚಂದ್ರರ ಸಂಯೋಗದಿಂದ ಗಜಕೇಸರಿ ಯೋಗ ಉಂಟಾಗಿರುವುದು ಈ ದಿನದ ವಿಶೇಷವಾಗಿದೆ. ಇದು ಮಹಾಯೋಗವೆಂದು ಪರಿಗಣಿಸಲಾಗುತ್ತದೆ ಎಂದು ಗುರೂಜಿ ತಿಳಿಸಿದ್ದಾರೆ.
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Source: TV9 Kannada National
