
ಕೈವ್, ಅಕ್ಟೋಬರ್ 29: ಮಧ್ಯ ಉಕ್ರೇನ್‌ನ ಡ್ನಿಪ್ರೊ ರೈಲು ನಿಲ್ದಾಣದಲ್ಲಿ ನಿಂತಿದ್ದ ಎರಡು ಪ್ರಯಾಣಿಕ ರೈಲುಗಳ ಮೇಲೆ ರಷ್ಯಾ ಪಡೆಗಳು ‘ಜೆಟ್ ಚಾಲಿತ’ ಡ್ರೋನ್‌ನಿಂದ ಭೀಕರ ದಾಳಿ ನಡೆಸಿದ್ದು, 13 ಜನರು ಮೃತಪಟ್ಟಿದ್ದಾರೆ ಮತ್ತು 10ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ. ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಉಪನಗರ ವಿದ್ಯುತ್ ರೈಲು ಹಾಗೂ ಮತ್ತೊಂದು ಪ್ರಯಾಣಿಕರ ರೈಲು ನಿಂತಿದ್ದ ವೇಳೆ ಈ ದಾಳಿ ಸಂಭವಿಸಿದ್ದು, ಭಾರಿ ನಾಶ ಸಂಭವಿಸಿದೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆಕ್ರೋಶ:
ಈ ದಾಳಿಯನ್ನು “ಭೀಕರ ಮತ್ತು ಕೌರ್ಯದ ಕೃತ್ಯ” ಎಂದು ಬಣ್ಣಿಸಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ರಷ್ಯಾದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
Shriek louder… maybe someone will finally hear you…. This is the state most people in Ukraine are living in. Losing loved ones happens here every day-some perish right before your eyes, while others learn of the death of their family members later…
This morning alone, russia killed at least 17 people in various cities across Ukraine:
* Dnipro 13 dead and 10 wounded;
* Chernihiv 2 dead and 11 wounded;
* Kremenchuk 2 dead.
Our world is becoming increasingly cruel, life within Ukraine itself is growing harder, and the line between what is normal and abnormal is steadily blurring.— Katerina Horbunova (@blue_eyedKeti) October 29, 2026
ಇದನ್ನೂ ಓದಿ: ರಷ್ಯಾದ ತೈಲ ಸಂಸ್ಕರಣಾಗಾರಗಳ ಮೇಲಿನ ದಾಳಿ ನಿಲ್ಲಿಸುವಂತೆ ಟ್ರಂಪ್ ನೀಡಿದ ಸೂಚನೆಗೆ ಕ್ಯಾರೇ ಎನ್ನದ ಝೆಲೆನ್‌ಸ್ಕಿ
“ಡ್ನಿಪ್ರೊ ರೈಲು ನಿಲ್ದಾಣದಲ್ಲಿ ನಿಂತಿದ್ದ ಪ್ರಯಾಣಿಕ ರೈಲುಗಳ ಮೇಲೆಯೇ ರಷ್ಯಾ ದಾಳಿ ನಡೆಸಿದೆ. ಯುದ್ಧ ಮುಂದುವರಿಯುತ್ತಿರುವಾಗ ರಷ್ಯಾ ಮತ್ತು ಅದರ ಯುದ್ಧ ಯಂತ್ರಗಳ ವಿರುದ್ಧದ ನಿರ್ಬಂಧಗಳನ್ನು ಯಾವುದೇ ಕಾರಣಕ್ಕೂ ಸಡಿಲಗೊಳಿಸಬಾರದು. ರಷ್ಯಾದ ಮೇಲೆ ಇನ್ನಷ್ಟು ಕಠಿಣ ನಿರ್ಬಂಧಗಳನ್ನು ಹೇರಲು ಯುರೋಪಿಯನ್ ಯೂನಿಯನ್, ಅಮೆರಿಕ ಹಾಗೂ ಜಿ7 ರಾಷ್ಟ್ರಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕು” ಎಂದು ಝೆಲೆನ್ಸ್ಕಿ ಆಗ್ರಹಿಸಿದ್ದಾರೆ.
Shriek louder… maybe someone will finally hear you…. This is the state most people in Ukraine are living in. Losing loved ones happens here every day-some perish right before your eyes, while others learn of the death of their family members later…
This morning alone, russia killed at least 17 people in various cities across Ukraine:
* Dnipro 13 dead and 10 wounded;
* Chernihiv 2 dead and 11 wounded;
* Kremenchuk 2 dead.
Our world is becoming increasingly cruel, life within Ukraine itself is growing harder, and the line between what is normal and abnormal is steadily blurring.— Katerina Horbunova (@blue_eyedKeti) October 29, 2026
ಜೆಟ್ ಚಾಲಿತ ಡ್ರೋನ್ ದಾಳಿ:
ಅತ್ಯಂತ ವೇಗವಾಗಿ ಬಂದು ಅಪ್ಪಳಿಸುವ ಸುಧಾರಿತ ಜೆಟ್ ಚಾಲಿತ ಡ್ರೋನ್ ಮೂಲಕ ರಷ್ಯಾ ಈ ದಾಳಿ ನಡೆಸಿದೆ. ಪ್ರಯಾಣಿಕರು ರೈಲು ಹತ್ತುವ ಹಾಗೂ ಇಳಿಯುವ ವೇಳೆಯಲ್ಲೇ ದಾಳಿ ನಡೆದಿರುವುದರಿಂದ ಸಾವುನೋವಿನ ಪ್ರಮಾಣ ಹೆಚ್ಚಾಗಿದೆ. ಗಾಯಗೊಂಡವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಕ್ರೇನ್‌ನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೇಲೆ ರಷ್ಯಾ ನಡೆಸುತ್ತಿರುವ ಸರಣಿ ದಾಳಿಗಳ ಭಾಗವಾಗಿ ಈ ಭೀಕರ ಘಟನೆ ನಡೆದಿದ್ದು, ಜಾಗತಿಕ ಮಟ್ಟದಲ್ಲಿ ತೀವ್ರ ಖಂಡನೆಗೆ ಗುರಿಯಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Source: TV9 Kannada World
