Hashtagintro

ತಪ್ಪಿಯೂ ಈ ಆಹಾರ ಪದಾರ್ಥಗಳನ್ನು ಅಲ್ಯೂಮಿನಿಯಂ ಪಾತ್ರೆಯಲ್ಲಿ ಬೇಯಿಸಬೇಡಿ; ಯಾಕೆ ಗೊತ್ತಾ?

ತಪ್ಪಿಯೂ ಈ ಆಹಾರ ಪದಾರ್ಥಗಳನ್ನು ಅಲ್ಯೂಮಿನಿಯಂ ಪಾತ್ರೆಯಲ್ಲಿ ಬೇಯಿಸಬೇಡಿ; ಯಾಕೆ ಗೊತ್ತಾ?

ನೀವು ಏನು ತಿನ್ನುತ್ತೇವೆ, ಅಡುಗೆಗೆ ಯಾವ ಎಣ್ಣೆ ಬಳಸುತ್ತೇವೆ ಎಂಬುದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಕೆಲವೊಮ್ಮೆ ನಾವು ತಿನ್ನುವ ಆಹಾರದ ಬಗ್ಗೆ ತಿಳಿಯದೆ ಮಾಡುವ ಕೆಲವೊಂದು ತಪ್ಪುಗಳು ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಅದೇ ರೀತಿ ಅಡುಗೆ ಮಾಡಲು ಅಲ್ಯೂಮಿನಿಯಂ ಪಾತ್ರೆಗಳನ್ನು (aluminum utensils) ಬಳಸುವುದು ಸೂಕ್ತವಲ್ಲ.  ಅಗ್ಗದ ಬೆಲೆಯ ಈ ಪಾತ್ರೆಗಳು ಬಹುತೇಕ ಎಲ್ಲಾ ಭಾರತೀಯರ ಮನೆಯಲ್ಲೂ ಸಹ ಇದ್ದೇ ಇರುತ್ತೆ. ನಿತ್ಯದ ಅಡುಗೆಗಳಿಗೆ ಎಲ್ಲರೂ ಈ ಪಾತ್ರೆಗಳನ್ನೇ ಬಳಕೆ ಮಾಡ್ತಾರೆ. ಆದರೆ ಆರೋಗ್ಯದ ದೃಷ್ಟಿಯಿಂದ ಅಡುಗೆ ಮಾಡಲು ಅಲ್ಯೂಮಿನಿಯಂ ಪಾತ್ರೆಗಳನ್ನು ಬಳಸುವುದು ಸೂಕ್ತವಲ್ಲ ಎಂದು ಹೇಳಲಾಗುತ್ತದೆ. ಅದರಲ್ಲೂ ಈ ಕೆಲವೊಂದು ಅಡುಗೆಗಳಿಗೆ ಅಲ್ಯೂಮಿನಿಯಂ ಪಾತ್ರೆಗಳನ್ನು ಬಳಸಲೇಬಾರದು.

ಅಲ್ಯೂಮಿನಿಯಂ ಪಾತ್ರೆಗಳು ಅಡುಗೆಗೆ ಏಕೆ ಸೂಕ್ತವಲ್ಲ:

ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಹುಳಿ ಅಥವಾ ಅತಿಯಾದ ಉಪ್ಪಿರುವ ಆಹಾರವನ್ನು ಬೇಯಿಸುವಾಗ, ಕೆಲವು ಲೋಹದ ಕಣಗಳು ಆಹಾರದಲ್ಲಿ ಬೆರೆಯಬಹುದು. ಇದನ್ನು ಅಲ್ಯೂಮಿನಿಯಂ ಲೀಚಿಂಗ್ ಎಂದು ಕರೆಯಲಾಗುತ್ತದೆ. ಆರೋಗ್ಯದ ಮೇಲೆ ಅದರ ಪರಿಣಾಮಗಳು ತಕ್ಷಣವೇ ಗೋಚರಿಸದಿದ್ದರೂ, ನಂತರದ ದಿನಗಳಲ್ಲಿ ಆರೋಗ್ಯಕ್ಕೆ ಸಾಕಷ್ಟು ಹಾನಿಯನ್ನು ಉಂಟುಮಾಡಬಹುದು. ಹೌದು ಮೂತ್ರಪಿಂಡಗಳು, ಮೂಳೆಗಳು ಮತ್ತು ನರಮಂಡಲಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾಗಿ ಆರೋಗ್ಯದ ದೃಷ್ಟಿಯಿಂದ ಸ್ಟೇನ್‌ಲೆಸ್ ಸ್ಟೀಲ್, ಮಣ್ಣಿನ ಪಾತ್ರೆಗಳನ್ನು ಅಡುಗೆಗೆ ಬಳಸುವುದು ಸೂಕ್ತವಾಗಿದೆ.

ಯಾವೆಲ್ಲಾ ಆಹಾರಗಳನ್ನು ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಬೇಯಿಸಬಾರದು?

ಅಲ್ಯೂಮಿನಿಯಂ ಪಾತ್ರೆಗಳಲ್ಲಿ ವಿನೆಗರ್ ಹೊಂದಿರುವ ಭಕ್ಷ್ಯಗಳನ್ನು ಬೇಯಿಸುವುದನ್ನು ತಪ್ಪಿಸಿ:

ಅಲ್ಯೂಮಿನಿಯಂ ವಿನೆಗರ್‌ನೊಂದಿಗೆ ವೇಗವಾಗಿ ಪ್ರತಿಕ್ರಿಯಿಸುತ್ತದೆ. ಇದು ದೇಹಕ್ಕೆ ಹಾನಿಕಾರಕವಾಗಿದೆ. ಆದ್ದರಿಂದ, ನೀವು ಗಾಜಿನ ಅಥವಾ ಸೆರಾಮಿಕ್ ಪಾತ್ರೆಗಳಲ್ಲಿ ವಿನೆಗರ್ ಹೊಂದಿರುವ ಭಕ್ಷ್ಯಗಳನ್ನು ಸಂಗ್ರಹಿಸಬೇಕು ಅಥವಾ ಬೇಯಿಸಬೇಕು.

ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಟೊಮೆಟೊ ಗ್ರೇವಿ ಅಥವಾ ಸಾಸ್ ಬೇಯಿಸುವುದನ್ನು ತಪ್ಪಿಸಿ:

ಟೊಮೆಟೊಗಳು ಆಮ್ಲೀಯವಾಗಿದ್ದು, ಅವುಗಳನ್ನು ಅಲ್ಯೂಮಿನಿಯಂನಲ್ಲಿ ಬೇಯಿಸುವುದರಿಂದ ಅವುಗಳ ರುಚಿ ಹಾಳಾಗಬಹುದು. ಇದಲ್ಲದೆ, ಅವುಗಳನ್ನು ಅಲ್ಯೂಮಿನಿಯಂ ಪಾತ್ರೆಯಲ್ಲಿ ದೀರ್ಘಕಾಲ ಬೇಯಿಸುವುದರಿಂದ ಆಹಾರದಲ್ಲಿ ಲೋಹದ ಪ್ರಮಾಣ ಹೆಚ್ಚಾಗುತ್ತದೆ.

ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಸಿಟ್ರಸ್ ಆಹಾರಗಳನ್ನು ಬೇಯಿಸುವುದನ್ನು ತಪ್ಪಿಸಿ:

ನಿಂಬೆಹಣ್ಣು ಮತ್ತು ಇತರ ಸಿಟ್ರಸ್ ಹಣ್ಣುಗಳು ಆಮ್ಲವನ್ನು ಹೊಂದಿರುತ್ತವೆ. ಅಲ್ಯೂಮಿನಿಯಂ ಪಾತ್ರೆಯಲ್ಲಿ ಅವುಗಳ ರಸವನ್ನು ಬಿಸಿ ಮಾಡುವುದರಿಂದ ಲೋಹವು ಆಹಾರಕ್ಕೆ ಸೋರಿಕೆಯಾಗುತ್ತದೆ.

ಹುಣಸೆಹಣ್ಣಿನ ಚಟ್ನಿಯನ್ನು ಅಲ್ಯೂಮಿನಿಯಂ ಪಾತ್ರೆಯಲ್ಲಿ ಬೇಯಿಸಬಾರದು:

ಹುಣಸೆಹಣ್ಣಿನಲ್ಲಿರುವ ಆಮ್ಲವು ಅಲ್ಯೂಮಿನಿಯಂನೊಂದಿಗೆ ಪ್ರತಿಕ್ರಿಯಿಸಬಹುದು. ಆದ್ದರಿಂದ, ಸಾಮಾನ್ಯ ಅಲ್ಯೂಮಿನಿಯಂ ಪಾತ್ರೆಗಳಲ್ಲಿ ದೀರ್ಘಕಾಲದವರೆಗೆ ಹುಣಸೆ ಚಟ್ನಿ ಸಂಗ್ರಹಿಸುವುದು ಅಥವಾ ಕರಿ ಬೇಯಿಸುವುದನ್ನು ತಪ್ಪಿಸಿ. ಇದಲ್ಲದೆ ತುಂಬಾ ಖಾರವಿರುವ ಆಹಾರಗಳನ್ನು ಸಹ ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಬೇಯಿಸಬಾರದು.

ಇದನ್ನೂ ಓದಿ: ಅನ್ನ ಮಾಡೋ ಮೊದ್ಲು ಅಕ್ಕಿಯನ್ನು ಎಷ್ಟು ಬಾರಿ ತೊಳೆದ್ರೆ ಉತ್ತಮ?

ಮೊಸರು ಮತ್ತು ಇತರ ಡೈರಿ ಉತ್ಪನ್ನಗಳನ್ನು ಬೇಯಿಸಬಾರದು:

ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಮೊಸರು, ಮಜ್ಜಿಗೆ ಮತ್ತು ಇತರ ಡೈರಿ ಉತ್ಪನ್ನಗಳನ್ನು ಬೇಯಿಸುವುದನ್ನು ಸಹ ತಪ್ಪಿಸಬೇಕು. ಡೈರಿ ಉತ್ಪನ್ನಗಳು ಲ್ಯಾಕ್ಟಿಕ್ ಆಮ್ಲವನ್ನು ಹೊಂದಿರುತ್ತವೆ, ಇದು ಅಲ್ಯೂಮಿನಿಯಂನೊಂದಿಗೆ ಪ್ರತಿಕ್ರಿಯಿಸಿ ಹಾನಿಕಾರಕ ವಿಷವನ್ನು ರೂಪಿಸುತ್ತದೆ.

ಆಲೂಗಡ್ಡೆಯನ್ನು ಅಲ್ಯೂಮಿನಿಯಂ ಪಾತ್ರೆಯಲ್ಲಿ ಬೇಯಿಸುವುದು ಸೂಕ್ತವಲ್ಲ:

ಆಲೂಗಡ್ಡೆ ನೈಸರ್ಗಿಕ ಆಮ್ಲಗಳನ್ನು ಹೊಂದಿದ್ದು, ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಬೇಯಿಸಿದಾಗ ಅವು ಪ್ರತಿಕ್ರಿಯಿಸುತ್ತವೆ. ಇದು ಆಹಾರದ ರುಚಿಯನ್ನು ಬದಲಾಯಿಸುವುದಲ್ಲದೆ, ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆಲೂಗಡ್ಡೆ ಬೇಯಿಸಲು ಸ್ಟೇನ್‌ಲೆಸ್ ಸ್ಟೀಲ್ ಅಥವಾ ಕಬ್ಬಿಣದ ಪಾತ್ರೆಗಳನ್ನು ಬಳಸುವುದು ಉತ್ತಮ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language